ತೆಲಂಗಾಣ(ಹೈದರಾಬಾದ್) : ಜರ್ಮನಿಯ ಸುಹ್ಲ್ನಲ್ಲಿ ನಡೆದ ಜೂನಿಯರ್ ವಿಶ್ವಕಪ್ ಶೂಟಿಂಗ್ನಲ್ಲಿ ತೆಲುಗು ಶೂಟರ್ಗಳು ಮಿಂಚು ಹರಿಸಿದ್ದು, ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಶೂಟರ್ಗಳಾದ ಉಮಾಮಹೇಶ್ ಮತ್ತು ಇಶಾ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ ಏರ್ ರೈಫಲ್ ವಿಭಾಗದಲ್ಲಿ ಮಹೇಶ್ ಚಿನ್ನ ಗೆದ್ದರೆ, ಮಹಿಳೆಯರ ಏರ್ ಪಿಸ್ತೂಲ್ ತಂಡದಲ್ಲಿ ಇಶಾ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.
ಬಾಲ್ಯದಲ್ಲಿ ಕರಾಟೆ, ಕ್ರಿಕೆಟ್ನಲ್ಲಿ ಹೆಚ್ಚಿನ ಒಲವು ಹೊಂದಿದ್ದ ಮಹೇಶ್, ಶೂಟಿಂಗ್ ಬಗ್ಗೆ ಆಸಕ್ತಿ ಹೊಂದಿದ್ದರು. 2018ರಲ್ಲಿ ಇಂಡಿಯನ್ ಅಕಾಡೆಮಿ ಆಫ್ ಶೂಟಿಂಗ್ ಸೇರಿ, ಭೋಪಾಲ್ನಲ್ಲಿ ನಡೆದ ರಾಷ್ಟ್ರೀಯ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಇಶಾ ಸಿಂಗ್ ಕೂಡ ಮಿಂಚು ಹರಿಸಿ, ಚಿನ್ನದ ಪದಕ ಗೆದ್ದಿದ್ದಾರೆ.
ಇದನ್ನೂ ಓದಿ: IPLಗೆ ಗುಡ್ಬೈ ಹೇಳಿ, ಕ್ಷಣಾರ್ಧದಲ್ಲೇ ಮನಸ್ಸು ಬದಲಾಯಿಸಿದ ರಾಯುಡು!
ಇನ್ನು ಮಿಶ್ರ ವಿಭಾಗದಲ್ಲೂ ಮಹಿಳಾ ಹಾಗೂ ಪುರುಷರ ತಂಡ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಹಿಳಾ ತಂಡ 17-9ರಲ್ಲಿ ಕೊರಿಯಾ ವಿರುದ್ಧ ಹಾಗೂ ಪುರುಷರ ತಂಡ ಉಜ್ಭೇಕಿಸ್ತಾನ್ ವಿರುದ್ಧ 17-9ರ ಅಂತರದಲ್ಲಿ ಗೆದ್ದಿದೆ.