ETV Bharat / sports

ಕಾರು ರೇಸಿಂಗ್‌ ಸ್ಪರ್ಧೆಯಲ್ಲಿ 16 ವರ್ಷದ ಬಾಲಕಿಯ ಅದ್ಭುತ ಸಾಧನೆ.. ಹಲವು ಪ್ರಶಸ್ತಿಗಳ ಗರಿ

ಕಾರ್ಟಿಂಗ್ ಸ್ಲಾಲೋಮ್‌ ಹಾಗೂ ಸಿಮ್ ರೇಸಿಂಗ್‌ನಲ್ಲಿ 16 ವರ್ಷದ ಬಾಲಕಿ ಮುಸ್ಕಾನ್ ಜುಬ್ಬಲ್ ಅವರು ಪ್ರಶಸ್ತಿ ಗಳಿಸುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.

author img

By ETV Bharat Karnataka Team

Published : Oct 31, 2023, 9:12 AM IST

Sixteen and conquering the race track
ರೇಸಿಂಗ್‌ ಸ್ಪರ್ಧೆಯಲ್ಲಿ 16 ವರ್ಷದ ಬಾಲಕಿಯ ಉತ್ತಮ ಸಾಧನೆ

ನವದೆಹಲಿ: ಎಫ್‌ಐಎ ರೇಸಿಂಗ್​ ಸ್ಪರ್ಧೆಯಲ್ಲಿ 16 ವರ್ಷದ ಬಾಲಕಿ ಮುಸ್ಕಾನ್ ಜುಬ್ಬಲ್ ಉತ್ತಮ ಸಾಧನೆ ಮಾಡಿದ್ದಾರೆ. 'ಗರ್ಲ್ಸ್ ಆನ್ ಟ್ರ್ಯಾಕ್ ಇನ್ ಇಂಡಿಯಾ' ವತಿಯಿಂದ ನಡೆದ ಮೂರು ಸುತ್ತುಗಳಲ್ಲಿ ವಿಜೇತರಾಗಿದ್ದಾರೆ. ಕಾರ್ಟಿಂಗ್ ಸ್ಲಾಲೋಮ್‌ ಹಾಗೂ ಸಿಮ್ ರೇಸಿಂಗ್‌ನಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ. ಆರನೇ ವಯಸ್ಸಿನಿಂದಲೂ ತಾನು ರೇಸಿಂಗ್​ ಕಾರುಗಳಿಂದ ಆಕರ್ಷಿತಳಾಗಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ ಮುಸ್ಕಾನ್ ಜುಬ್ಬಲ್.

ಎನ್‌ಸಿಆರ್ ಮೂಲದ ಮುಸ್ಕಾನ್ ಜುಬ್ಬಲ್, ಫರಿದಾಬಾದ್‌ನ ಶಿವ ನಾಡರ್ ಶಾಲೆಯಲ್ಲಿ 11 ನೇ ತರಗತಿ ವಿದ್ಯಾರ್ಥಿನಿ. ಅವರು ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಎಂಆರ್​ಎಫ್​ ಎಂಎಂಎಸ್​ಸಿ ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 'ಅತ್ಯುತ್ತಮ ಮಹಿಳಾ ಚಾಲಕಿ' ಪ್ರಶಸ್ತಿಯನ್ನು ಗೆದ್ದು ಕಾರ್ಟಿಂಗ್ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. "ಮೊದಲ ವರ್ಷದಲ್ಲಿ ಮಾಡಿದ ಈ ಸಾಧನೆಗಳು ಕ್ರೀಡೆಯಲ್ಲಿ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ. ನಂತರ ನಾನು ಹಿಂತಿರುಗಿ ನೋಡಲಿಲ್ಲ. ನನಗೆ ಇದು ಕೇವಲ ಕ್ರೀಡೆಯಲ್ಲ, ಆದರೆ ಉತ್ಸಾಹ" ಎಂದು ಅವರು ಹೇಳಿತ್ತಾರೆ.

ಮೋಟಾರು ಕ್ರೀಡೆಗಳಿಗೆ ಮಲತಾಯಿಯ ಧೋರಣೆ: ರೇಸಿಂಗ್ ಅನ್ನು ತನ್ನ ಪೂರ್ಣ ಸಮಯದ ವೃತ್ತಿಯನ್ನಾಗಿ ಮಾಡಲು ಬಯಸುತ್ತಿರುವ ಜುಬ್ಬಲ್ ಅವರು ರೋಹಿತ್ ಖನ್ನಾ ಅವರಲ್ಲಿ ತರಬೇತಿ ಪಡೆದ್ದಾರೆ. ಮೋಟಾರು ಕ್ರೀಡೆಗಳು ಭಾರತದಲ್ಲಿ ಕ್ರೀಡೆಯಾಗಿ ಗುರುತಿಸಲ್ಪಟ್ಟಿದ್ದರೂ ಸಹ ಮಲತಾಯಿ ಧೋರಣೆಯಲ್ಲಿಯೇ ಮುಂದುವರಿಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಖೇಲೋ ಇಂಡಿಯಾದಿಂದ ಯಾವುದೇ ಬೆಂಬಲ ಲಭಿಸಿಲ್ಲ. ಈ ಕ್ರೀಡೆಗಳಿಗೆ ಹೆಚ್ಚಿನ ಬೆಂಬಲವು ದೊರೆತರೆ ಯುವ ಚಾಲಕರಿಗೆ ತುಂಬಾ ಅನುಕೂಲವಾಗತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾಗವಹಿಸುವ ಮಹಿಳಾ ಕ್ರೀಡಾಪಟುಗಳಿಗೆ ಮೋಟಾರ್‌ಸ್ಪೋರ್ಟ್ ಫೆಡರೇಶನ್‌ ಸಹಾಯ ಮಾಡಬೇಕು. ಜೊತೆಗೆ ಕುಟುಂಬವು ವೈಯಕ್ತಿಕ ಬೆಂಬಲವನ್ನು ನೀಡಬೇಕು. ಇತ್ತೀಚೆಗೆ, ನನ್ನ ತಾಯಿ ಮತ್ತು ನಾನು 30ಕ್ಕೂ ಹೆಚ್ಚು ಮಹಿಳೆಯರಿಗೆ ಆಟೋಕ್ರಾಸ್‌ನಲ್ಲಿ ತರಬೇತಿ ನೀಡಲು ಕಾಶ್ಮೀರಕ್ಕೆ ಪ್ರಯಾಣಿಸಿದೆವು. ನಾವು ದೇಶದಲ್ಲಿ ಮೋಟಾರ್‌ಸ್ಪೋರ್ಟ್ ವಾತಾವರಣ ನಿರ್ಮಿಸಲು ಕೊಡುಗೆ ನೀಡಲು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.

ಚಿಕ್ಕ ವಯಸ್ಸಿನ ಪ್ರಭಾವಶಾಲಿ ಪ್ರದರ್ಶನದ ಹೊರತಾಗಿಯೂ, ಪ್ರಾಯೋಜಕತ್ವ ಪಡೆಯುವಲ್ಲಿ ಜುಬ್ಬಲ್ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ನಡುವೆ, ತಮ್ಮ ಉತ್ಸಾಹವನ್ನು ಬೆಂಬಲಿಸುವಲ್ಲಿ ಪೋಷಕರು ವಹಿಸಿದ ಪಾತ್ರಕ್ಕಾಗಿ ಅವರು ಕೃತಜ್ಞತೆ ಕೂಡಾ ಸಲ್ಲಿಸಿದ್ದಾರೆ.

ಪೋಷಕರಿಂದ ಉತ್ತಮ ಬೆಂಬಲ: "ಪೋಷಕರು ಯಾವಾಗಲೂ ನನ್ನ ಸಹೋದರ ಮತ್ತು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಅವರು ನನ್ನ ಮಾರ್ಗದರ್ಶಕರೂ ಆಗಿದ್ದಾರೆ. ಕಾರುಗಳ ಯಂತ್ರಶಾಸ್ತ್ರವನ್ನು ನನಗೆ ಅರ್ಥಮಾಡಿಕೊಳ್ಳಲು ನನ್ನ ತಂದೆ ಪ್ರಮುಖ ಪಾತ್ರ ವಹಿಸಿದ್ದಾರೆ. ನನ್ನ ತಾಯಿ ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ತನ್ನ ಚಾಲನಾ ಕೌಶಲ್ಯವನ್ನು ಬಲಪಡಿಸಲು ಟ್ರ್ಯಾಕ್‌ನಲ್ಲಿ ತರಬೇತಿಯಿಂದ ಹಿಡಿದು ತನ್ನ ಸಹಿಷ್ಣುತೆಯ ಮಟ್ಟವನ್ನು ಹೆಚ್ಚಿಸಲು ವ್ಯಾಯಾಮ ಮಾಡುವವರೆಗೆ, ವಿವಿಧ ಮೋಟಾರ್‌ಸ್ಪೋರ್ಟ್ ಈವೆಂಟ್‌ಗಳಿಗೆ ಪ್ರಯಾಣಿಸುವುದರಿಂದ ಕೆಲವೊಮ್ಮೆ ತನ್ನ ಶಿಕ್ಷಣ ಕಲಿಕೆಯಲ್ಲಿಯೂ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಅದೃಷ್ಟವಶಾತ್, ನನ್ನ ಶಿಕ್ಷಕರು ಸಾಕಷ್ಟು ಬೆಂಬಲ ಮತ್ತು ಉತ್ತೇಜನ ನೀಡುತ್ತಿದ್ದಾರೆ '' ಎಂದು ಅವರು ಒಪ್ಪಿಕೊಳ್ಳುತ್ತಾಳೆ.

ಮುಸ್ಕಾನ್ ಜುಬ್ಬಲ್ ಮುಂದಿನ ಗುರಿ ಏನು?: ಸರ್ಕ್ಯೂಟ್ ಡಿ ಮೊನಾಕೊ (ಮೊನಾಕೊ), ಬಾಕು ಸಿಟಿ ಸರ್ಕ್ಯೂಟ್ (ಅಜೆರ್‌ಬೈಜಾನ್) ಮತ್ತು ಯಾಸ್ ಮರೀನಾ (ಅಬುಧಾಬಿ)ನ ರೇಸಿಂಗ್​ನಲ್ಲಿ ಭಾಗವಹಿಸಿವುದು ತಮ್ಮ ಅಂತಿಮ ಗುರಿಯಾಗಿದೆ. ಖಂಡಿತ ಇವು ಎತ್ತರದ ಕನಸುಗಳು. ಆದರೆ, ನಾನು ಕಠಿಣ ತರಬೇತಿ ಪಡೆಯಲು ಸಿದ್ಧನಿದ್ದೇನೆ. ಅವುಗಳನ್ನು ಸಾಧಿಸಲು ಗಮನಹರಿಸುತ್ತೇನೆ" ಎಂದು ಕ್ರೀಡಾಪಟು ಮುಸ್ಕಾನ್ ಜುಬ್ಬಲ್ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ರೋಚಕ ಕದನದಲ್ಲಿ 2-1 ಗೋಲುಗಳಿಂದ ಚೀನಾ ಸೋಲಿಸಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.