ETV Bharat / sports

US Open 2023: ಸೆಮಿಫೈನಲ್ಸ್​ ತಲುಪಿದ ರೋಹನ್ ಬೋಪಣ್ಣ.. ಫ್ರೆಂಚ್ ಎದುರಾಳಿಯೊಂದಿಗೆ ನಾಳೆ ಸೆಮಿಸ್​​ ಕಾದಾಟ

Bopanna-Ebden pair reaches US Open semifinals: ಅಮೆರಿಕನ್​ ಓಪನ್​ನ ಫೈನಲ್​ಗೆ ಪ್ರವೇಶಿಸಲು ಇಂಡೋ - ಆಸಿಸ್​ ಬೋಪಣ್ಣ- ಎಬ್ಡೆನ್ ಜೋಡಿ ಒಂದು ಹೆಜ್ಜೆ ಹಿಂದಿದೆ.

Rohan Bopanna and Matthew Ebden
Rohan Bopanna and Matthew Ebden
author img

By ETV Bharat Karnataka Team

Published : Sep 6, 2023, 7:32 PM IST

ನ್ಯೂಯಾರ್ಕ್​: ರೋಹನ್ ಬೋಪಣ್ಣ ಅವರು 13 ವರ್ಷಗಳ ನಂತರ ಅಮೆರಿಕನ್​ ಓಪನ್‌ನಲ್ಲಿ ಪುರುಷರ ಡಬಲ್ಸ್ ಫೈನಲ್‌ಗೆ ಸ್ಥಾನ ಪಡೆಯಲು ಒಂದು ಹೆಜ್ಜೆ ಹಿಂದಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ 2010 ರಲ್ಲಿ ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನದ ಐಸಾಮ್ - ಉಲ್ - ಹಕ್ ಖುರೇಷಿ ಅವರೊಂದಿಗೆ ಏಕೈಕ ಗ್ರ್ಯಾಂಡ್ ಸ್ಲಾಮ್ ಫೈನಲ್‌ನಲ್ಲಿ ಕಾಣಿಸಿಕೊಂಡ ಬೋಪಣ್ಣ, ಮಂಗಳವಾರ ತಮ್ಮ ಆಸ್ಟ್ರೇಲಿಯಾದ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ನೇರ ಸೆಟ್‌ಗಳಲ್ಲಿ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಗೆದ್ದರು.

ಈ ವರ್ಷ ವಿಂಬಲ್ಡನ್‌ನಲ್ಲಿ ಸೆಮಿಫೈನಲ್ ತಲುಪಿದ ಆರನೇ ಶ್ರೇಯಾಂಕದ ಇಂಡೋ - ಆಸ್ಟ್ರೇಲಿಯನ್ ಜೋಡಿ, ಒಂದು ಗಂಟೆ 28 ನಿಮಿಷದ ಕಾಲ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 15 ನೇ ಶ್ರೇಯಾಂಕದ ಸ್ಥಳೀಯ ಜೋಡಿ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಅವರನ್ನು 7-6(10), 6-1 ಸೆಟ್‌ಗಳಿಂದ ಸೋಲಿಸಿದರು. ಲ್ಯಾಮನ್ಸ್ ಮತ್ತು ವಿಥ್ರೋ ಹಿಂದಿನ ಸುತ್ತಿನಲ್ಲಿ ಹಾಲಿ ವಿಂಬಲ್ಡನ್ ಚಾಂಪಿಯನ್ ಮತ್ತು ಅಗ್ರ ಶ್ರೇಯಾಂಕದ ನೆದರ್ಲ್ಯಾಂಡ್ಸ್‌ನ ವೆಸ್ಲಿ ಕೂಹ್ಲೋಫ್ ಮತ್ತು ಗ್ರೇಟ್ ಬ್ರಿಟನ್‌ನ ನೀಲ್ ಸ್ಕುಪ್ಸ್ಕಿ ಅವರನ್ನು ಸೋಲಿಸಿದ್ದರು. 43 ವರ್ಷದ ಬೋಪಣ್ಣ ಮತ್ತು 35 ವಯಸ್ಸಿನ ಎಬ್ಡೆನ್ ಜೋಡಿ ನಾಳೆ ಸೆಮಿಫೈನಲ್ ಪಂದ್ಯದಲ್ಲಿ ಫ್ರೆಂಚ್ ಜೋಡಿಯಾದ ನಿಕೋಲಸ್ ಮಹುತ್ ಮತ್ತು ಪಿಯರೆ - ಹ್ಯೂಗ್ಸ್ ಹರ್ಬರ್ಟ್‌ರೊಂದಿಗೆ ಸೆಣಸಲಿದ್ದಾರೆ.

ಆರನೇ ಶ್ರೇಯಾಂಕಿತ ಇಂಡೋ-ಆಸಿಸ್​ ಜೋಡಿ ಯುಎಸ್ ಓಪನ್​ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಕ್ರಿಸ್ಟೋಫರ್ ಓ'ಕಾನ್ನೆಲ್ ಮತ್ತು ಅಲೆಕ್ಸಾಂಡರ್ ವುಕಿಕ್ ವಿರುದ್ಧ 6-4, 6-2 ಅಂತರದಿಂದ ಸೋಲಿಸಿದರು. ಎರಡನೇ ಸುತ್ತಿನಲ್ಲಿ ಅವರು ಕಝಕ್ - ರಷ್ಯಾದ ಜೋಡಿ ಆಂಡ್ರೆ ಗೊಲುಬೆವ್ ಮತ್ತು ರೋಮನ್ ಸಫಿಯುಲಿನ್ ಅವರನ್ನು 6-3, 6-3 ಸೆಟ್‌ಗಳಿಂದ ಸೋಲಿಸಿದರು. ಬೋಪಣ್ಣ ಮತ್ತು ಎಬ್ಡೆನ್ 16ರ ಸುತ್ತಿನಲ್ಲಿ ತಮ್ಮ ಕಠಿಣ ಪರೀಕ್ಷೆಯನ್ನು ಎದುರಿಸಿದರು, ಇದರಲ್ಲಿ ಅವರು ಆಲ್-ಬ್ರಿಟಿಷ್ ಜೋಡಿಯಾದ ಜೂಲಿಯನ್ ಕ್ಯಾಶ್ ಮತ್ತು ಹೆನ್ರಿ ಪ್ಯಾಟನ್ ಅವರನ್ನು 6-4, 6-7(5), 7-6(6) ಸೆಟ್‌ಗಳಿಂದ ಸೋಲಿಸಿದರು.

ಇಂಡೋ-ಆಸ್ಟ್ರೇಲಿಯನ್ ಜೋಡಿ ಈ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ. ರೋಟರ್‌ಡ್ಯಾಮ್, ಮ್ಯಾಡ್ರಿಡ್‌ನಲ್ಲಿ ಫೈನಲ್‌ಗೆ ತಲುಪಿದೆ. ನವೆಂಬರ್ 12 ರಿಂದ 19 ರವರೆಗೆ ಟುರಿನ್‌ನಲ್ಲಿ ನಡೆಯಲಿರುವ ಎಟಿಪಿ ಫೈನಲ್ಸ್‌ನಲ್ಲಿ ಇವರು ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಲಿ ಟಾಪ್​ ಎಂಟು ಜೋಡಿಗಳು ಸ್ಪರ್ಧಿಸಲಿವೆ.

ಇದನ್ನೂ ಓದಿ: ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಪೋಕ್ಸೋ ಕೇಸ್​: ಅಕ್ಟೋಬರ್​ 6ಕ್ಕೆ ತೀರ್ಪು ಕಾಯ್ದಿರಿಸಿದ ಪಟಿಯಾಲ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.