ನವದೆಹಲಿ: ಭಾರತದ ಮಾಜಿ ಶೂಟರ್ ಹಾಗೂ ಕೋಚ್ ಮೊನಾಲಿ ಗೋರ್ಹೆ ಗುರುವಾರ ಮ್ಯೂಕೋರ್ಮೈಕೋಸಿಸ್(ಬ್ಲ್ಯಾಕ್ ಫಂಗಸ್)ನಿಂದ ಸಾವನ್ನಪ್ಪಿದ್ದಾರೆ. 44 ವರ್ಷದ ಮೊನಾಲಿ ಸಾವಿಗೆ ಶೂಟಿಂಗ್ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ. ಇವರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.
ಮೊನಾಲಿ ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಿಡುಗಡೆಯಾಗಿದ್ದ ಅವರು ಮತ್ತೆ ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ದುರಂತವೆಂದರೆ ಮೊನಾಲಿ ಕೊನೆಯುಸಿರೆಳೆಯುವ ಕೆಲವೇ ಗಂಟೆಗಳ ಮುಂಚೆ ತಂದೆ ಮನೋಹರ್ ಗೋರ್ಹೆ ಕೂಡ ಕೋವಿಡ್ 19ಗೆ ಬಲಿಯಾಗಿದ್ದರು.
ಮೊನಾಲಿ ಪಸ್ತುತ ಪಿಸ್ತೂಲ್ ವಿಭಾಗದ ಕೋಚ್ ಆಗಿದ್ದರು. ಅವರು ಶ್ರೀಲಂಕಾ ರಾಷ್ಟ್ರೀಯ ತಂಡದ ಕೋಚ್ ಆಗಿಯೂ ಕೂಡ ಸೇವೆ ಸಲ್ಲಿಸಿದ್ದರು. ಅವರು ನಾಸಿಕ್ನಲ್ಲಿ ಎಕ್ಸೆಲ್ ಶೂಟಿಂಗ್ ಎಂಬ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದರು. ಮೊನಾಲಿ ಮತ್ತು ಅವರ ತಂದೆ ಮನೋಹರ್ ದುರಂತ ಸಾವಿಗೆ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಸಂತಾಪ ಸೂಚಿಸಿದೆ.
ಇದನ್ನು ಓದಿ:ದಿ ಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್ಗೆ ಕೋವಿಡ್ 19 ಪಾಸಿಟಿವ್