ETV Bharat / sports

55 ಕೆಜಿ ತೂಕ ವಿಭಾಗದಲ್ಲಿ ಚಿನ್ನಗೆದ್ದು ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದ ಚಾನು - Star Indian lifter Mirabai Chanu qualified for the 2022 Commonwealth Games in the 55kg weight category

ಮೊದಲ ಬಾರಿಗೆ 55 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಿದ ಚಾನು, 191 ಕೆಜಿ (86 ಕೆಜಿ + 105 ಕೆಜಿ) ಎತ್ತುವ ಮೂಲಕ ಸಾಧನೆ ಮಾಡಿದ್ದಾರೆ.

55 ಕೆಜಿ ತೂಕ ವಿಭಾಗದಲ್ಲಿ ಚಿನ್ನಗೆದ್ದು ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದ ಚಾನು

author img

By

Published : Feb 25, 2022, 3:48 PM IST

ಸಿಂಗಾಪುರ: ಭಾರತದ ಲಿಫ್ಟರ್ ಮೀರಾಬಾಯಿ ಚಾನು ಸಿಂಗಾಪುರ ವೇಟ್‌ಲಿಫ್ಟಿಂಗ್ ಇಂಟರ್‌ನ್ಯಾಷನಲ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ 55 ಕೆಜಿ ತೂಕ ವಿಭಾಗದಲ್ಲಿ 2022 ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಮೊದಲ ಬಾರಿಗೆ 55 ಕೆಜಿ ತೂಕದ ವಿಭಾಗದಲ್ಲಿ ಸ್ಪರ್ಧಿಸಿದ ಚಾನು, 191 ಕೆಜಿ (86 ಕೆಜಿ + 105 ಕೆಜಿ) ಎತ್ತುವ ಮೂಲಕ ಸಾಧನೆ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಲಿಫ್ಟರ್ ಆಸ್ಟ್ರೇಲಿಯಾದ ಜೆಸ್ಸಿಕಾ ಸೆವಾಸ್ಟೆಂಕೊ ಅವರು ಸಹ ಅತ್ಯತ್ತಮ ಪ್ರದರ್ಶನ ತೋರಿದ್ದಾರೆ. 167 ಕೆಜಿ (77 ಕೆಜಿ+90 ಕೆಜಿ), ಎತ್ತಿದ್ದಾರೆ. ಈ ಮೂಲಕ ಇವರ ಹಾಗೂ ಚಾನು ನಡುವೆ 24 ಕೆಜಿ ಅಂತರ ಇದೆ.

ಇದನ್ನೂ ಓದಿ: ಉಕ್ರೇನ್‌ನಲ್ಲಿ ಭಾರತೀಯ ಚೆಸ್ ಆಟಗಾರ ಅನ್ವೇಶ್ ಉಪಾಧ್ಯಾಯ : ಪರಿಸ್ಥಿತಿ ಬಗ್ಗೆ ವಿವರಣೆ

ಮಲೇಷ್ಯಾದ ಎಲ್ಲೀ ಕಸ್ಸಂಡ್ರಾ ಎಂಗಲ್ಬರ್ಟ್ ಅವರು 165 ಕೆಜಿ (75 ಕೆಜಿ+90 ಕೆಜಿ) ಅತ್ಯುತ್ತಮ ಪ್ರಯತ್ನದೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಕಳೆದ ವರ್ಷ ಐತಿಹಾಸಿಕ ಟೋಕಿಯೊ ಕ್ರೀಡಾಕೂಟದ ಪ್ರದರ್ಶನದ ನಂತರ ಚಾನು ಅವರ ಮೊದಲ ಕ್ರೀಡೆ ಇದಾಗಿದೆ. ಅವರು ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟಿದ್ದರು. ಸಿಂಗಾಪುರ್ ವೇಟ್‌ಲಿಫ್ಟಿಂಗ್ ಇಂಟರ್‌ನ್ಯಾಷನಲ್ 2022 ರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತಾ ಪಂದ್ಯವಾಗಿದೆ.

ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಪ್ರತಿ ತೂಕದ ವಿಭಾಗದಲ್ಲಿ ಅಗ್ರ ಎಂಟು ಲಿಫ್ಟರ್‌ಗಳು ನೇರವಾಗಿ 2022 CWG ಗೆ ಅರ್ಹತೆ ಪಡೆಯುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.