ETV Bharat / sports

Asian Games: ಮುಂದುವರಿದ ಭಾರತದ ಪದಕ ಬೇಟೆ... ಏರ್ ಪಿಸ್ತೂಲ್​ನಲ್ಲಿ ಪಾಲಕ್​ಗೆ ಚಿನ್ನ, ಇಶಾಗೆ ಬೆಳ್ಳಿ - 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಫೈನಲ್ ಸ್ಪರ್ಧೆ

Asian Games: ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾರತದ ಪಾಲಕ್ ಅವರು 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಫೈನಲ್ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಇಶಾ ಸಿಂಗ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

Asian Games
10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಪಾಲಕ್​ಗೆ ಚಿನ್ನ
author img

By ETV Bharat Karnataka Team

Published : Sep 29, 2023, 10:14 AM IST

Updated : Sep 29, 2023, 1:07 PM IST

ಹ್ಯಾಂಗ್‌ಝೌ: ಇಲ್ಲಿನ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಫೈನಲ್ ಸ್ಪರ್ಧೆಯಲ್ಲಿ ಭಾರತದ ಪಾಲಕ್ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಜೊತೆಗೆ ಇಶಾ ಸಿಂಗ್ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ.

ಏಷ್ಯನ್ ಕ್ರೀಡಾಕೂಟದ ದಾಖಲೆಯ ಹಾದಿಯಲ್ಲಿ ಒತ್ತಡದ ಸಂದರ್ಭಗಳಲ್ಲಿ 17 ವರ್ಷ ವಯಸ್ಸಿನ ಪಾಲಕ್ ತಮ್ಮ ಶಾಂತ ಚಿತ್ತದಿಂದಲೇ ಎಲ್ಲರನ್ನು ಬೆರಗುಗೊಳಿಸಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಖಚಿತಪಡಿಸಿಕೊಳ್ಳಲು ಅವರು ದಾಖಲೆಯ ಒಟ್ಟು 242.1 ಅಂಕಗಳನ್ನು ಗಳಿಸಿದರು. ಪಾಲಕ್ ಜಕಾರ್ತಾ ಏಷ್ಯನ್ ಗೇಮ್ಸ್ 2018ರ ನಂತರ ಉತ್ತಮ ಪ್ರದರ್ಶನ ನೀಡಿದ್ದಾರೆ.

ಭಾರತದ ಇಶಾ ಸಿಂಗ್ ಒಟ್ಟು 239.7 ಅಂಕಗಳನ್ನು ಗಳಿಸಿ ಬೆಳ್ಳಿ ಪದಕವನ್ನು ಪಡೆದುಕೊಂಡರು. ಪಾಕಿಸ್ತಾನದ ಶೂಟರ್ ಕಶ್ಮಲಾ ತಲಾತ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಈವರೆಗೆ 18 ವರ್ಷ ವಯಸ್ಸಿನವರು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಎರಡು ಟೀಂ ಪದಕಗಳನ್ನು, 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಮತ್ತು 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವೈಯಕ್ತಿಕ ಬೆಳ್ಳಿಯನ್ನು ಗೆದ್ದಿದ್ದಾರೆ. ಪ್ರಸ್ತುತ ಏಷ್ಯನ್ ಗೇಮ್ಸ್​ನಲ್ಲಿ ಭಾರತೀಯರು ಅತಿ ಹೆಚ್ಚು ವೈಯಕ್ತಿಕ ಪದಕಗಳನ್ನು ಗಳಿಸಿದ್ದಾರೆ.

ಟೆನಿಸ್​ನ ಪುರುಷರ ಡಬಲ್ಸ್​ನಲ್ಲಿ ರಾಮ್‌ಕುಮಾರ್, ಸಾಕೇತ್​ಗೆ ಬೆಳ್ಳಿ: ಭಾರತದ ಜೋಡಿಯಾದ ರಾಮ್‌ಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೇನಿ ಅವರು ಚೀನಾದ ಜೇಸನ್ ಜಂಗ್ ಮತ್ತು ಹ್ಸು ಯು-ಹಸಿಯು ವಿರುದ್ಧ 6-4, 6-4 ಅಂತರದಲ್ಲಿ ಸೋಲು ಅನುಭವಿಸಿ, ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಭಾರತದ ಜೋಡಿಯು ಮೊದಲ ಎರಡು ಸೆಟ್‌ಗಳಲ್ಲಿ ತಮ್ಮ ಸರ್ವ್ ಅನ್ನು ಸ್ಥಿರವಾಗಿ ಹಿಡಿದಿಡಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಸೋಲು ಅನುಭವಿಸಬೇಕಾಯಿತು.

ಮೊದಲ ನಾಲ್ಕು ಪಂದ್ಯಗಳಲ್ಲಿ ಎರಡೂ ಕಡೆಯವರು ತಮ್ಮ ಸರ್ವ್‌ಗಳನ್ನು ಹಿಡಿದಿದ್ದರು. ಆದರೆ, ಐದನೇ ಗೇಮ್‌ನಲ್ಲಿ ರಾಮ್‌ಕುಮಾರ್ ರಾಮನಾಥನ್ ಸರ್ವ್ ಕೈಬಿಟ್ಟಿದ್ದರಿಂದ ಈ ಜೋಡಿ 6-4 ಅಂಕಗಳಿಂದ ಸೋಲು ಅನುಭವಿಸಿದರು. ರಾಮ್‌ಕುಮಾರ್ ಮತ್ತು ಸಾಕೇತ್ ಅವರು ತಮ್ಮ ಎದುರಾಳಿಗಳಿಂದ ನಿರಂತರವಾಗಿ ಒತ್ತಡಕ್ಕೆ ಒಳಗಾಗಿದ್ದರು. ಚೈನೀಸ್ ತೈಪೆ ಜೋಡಿಯಾದ ಜೇಸನ್ ಜಂಗ್ ಮತ್ತು ಹ್ಸು ಯು-ಹಸಿಯು ಚಿನ್ನದ ಪದಕವನ್ನು ಗೆದ್ದ ಪರಿಣಾಮವಾಗಿ ಭಾರತದ ಜೋಡಿ ಎರಡನೇ ಸ್ಥಾನ ಪಡೆದರು. ಏಷ್ಯನ್ ಗೇಮ್ಸ್‌ನ ಪುರುಷರ ಡಬಲ್ಸ್‌ನಲ್ಲಿ ಭಾರತ ಐದು ಚಿನ್ನದ ಪದಕಗಳನ್ನು ಗೆದ್ದಿರುವುದು ಗಮನಾರ್ಹ.

ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ಸ್ ಫೈನಲ್‌ನಲ್ಲಿ ಬೆಳ್ಳಿ ಪದಕ: ಇಲ್ಲಿನ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ಸ್ ಫೈನಲ್‌ನಲ್ಲಿ ಭಾರತದ ಶೂಟರ್‌ಗಳಾದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ​ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಒಟ್ಟು 439.7 ಅಂಕಗಳನ್ನು ಪಡೆದುಕೊಂಡು ಬೆಳ್ಳಿ ಪದಕ ಗೆದ್ದರು.

  • 🥈SILVER FOR AISHWARY 🎯

    🇮🇳's Aishwary Pratap Tomar clinched a silver at #AsianGames2022 in the Men's 50m Rifle 3P Individual! 🏆🎯

    With this Aishwary has won a total of 4️⃣ medals so far (2 🥇, 1 🥈, and 1 🥉). And this is 🇮🇳's 18th medal overall in shooting💯⚡

    Aishwary,… pic.twitter.com/cXLnLf9ZPx

    — SAI Media (@Media_SAI) September 29, 2023 " class="align-text-top noRightClick twitterSection" data=" ">

ಭಾರತದ ಮಹಿಳಾ ಸ್ಕ್ವಾಷ್ ತಂಡಕ್ಕೆ ಕಂಚು: ಭಾರತ ಮಹಿಳಾ ಸ್ಕ್ವಾಷ್‌ ತಂಡ ಶುಕ್ರವಾರ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಹಾಂಕಾಂಗ್‌ ವಿರುದ್ಧದ ಟೀಮ್‌ ಈವೆಂಟ್‌ನ ಸೆಮಿಫೈನಲ್‌ನಲ್ಲಿ 1-2 ಅಂಕಗಳ ಅಂತರದಿಂದ ಸೋತಿದ್ದು, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ತನ್ವಿ ಖನ್ನಾ ಅವರು ಭಾರತ ತಂಡವನ್ನು ಮುನ್ನಡೆಸಿದರು. 5-11, 4-11, 7-11 ಅಂಕಗಳೊಂದಿಗೆ ಪಂದ್ಯವನ್ನು ಕಳೆದುಕೊಂಡರು. ಚಾನ್ ಸಿನ್ ಯುಕ್ ವಿರುದ್ಧ ತನ್ವಿಯ ಸೋಲಿನ ಪರಿಣಾಮವಾಗಿ ಭಾರತವು 0-1 ರಿಂದ ಹಿಂದುಳಿಯಿತು.

ಅನುಭವಿ ಜೋಶನಾ ಚಿನ್ನಪ ಅವರು, ಆಟದಲ್ಲಿ ತಮ್ಮ ಉತ್ತಮ ಕೌಶಲ್ಯ ಪ್ರದರ್ಶಿಸಿದರು. ಟೈ 1-1 ರಲ್ಲಿ ಸಮಬಲಗೊಂಡ ನಂತರ, ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿಯು 15 ವರ್ಷದ ಅನಾಹತ್ ಸಿಂಗ್ ಅವರ ಹೆಗಲ ಮೇಲಿತ್ತು. ಏಕೆಂದರೆ ಅವರು ಅಂತಿಮ ಪಂದ್ಯದಲ್ಲಿ ಲೀ ಕಾ ಯಿ ಅವರನ್ನು ಎದುರಿಸುತ್ತಿದ್ದರು. ಮೂರನೇ ಸಿಂಗಲ್ಸ್‌ನ ಮೊದಲ ಗೇಮ್‌ನಲ್ಲಿ ಅನಾಹತ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಕೊನೆಯಲ್ಲಿ ವೇಗ ಕಳೆದುಕೊಂಡರು. ಮೊದಲ ಗೇಮ್‌ನಲ್ಲಿ 8-11 ರಿಂದ ಸೋಲು ಅನುಭವಿಸಿದರು. ಆಕೆಯ ಎದುರಾಳಿಯು ಮುನ್ನಡೆಯ ಲಾಭವನ್ನು ಉಳಿಸಿಕೊಂಡಿತು. ಎರಡನೇ ಗೇಮ್‌ನಲ್ಲಿ 7-11 ಮುಕ್ತಾಯವನ್ನು ಖಚಿತಪಡಿಸಿತು.

ಅನಾಹತ್ ಮೂರನೇ ಗೇಮ್‌ನಲ್ಲಿ ತನ್ನ ಅತ್ಯುತ್ತಮ ಪ್ರದರ್ಶನ ನೀಡಿದರು. ಇದು ಭಾರತಕ್ಕೆ ಸ್ಕೋರ್‌ಗಳನ್ನು 10-10ರಲ್ಲಿ ಸಮ ಮಾಡಲು, ಅಥವಾ ಮಾಡು ಇಲ್ಲವೇ ಮಡಿ ಪರಿಸ್ಥಿತಿ ನಿರ್ಮಾಣವಾಯಿತು. ಹಾಂಗ್ ಕಾಂಗ್​​ನ ಲೀ ಕಾ ಯಿ ಮೂರನೇ ಸಿಂಗಲ್ ಅನ್ನು ಗೆದ್ದು, ಚಿನ್ನದ ಪದಕ ಪಡೆದುಕೊಂಡರು. ಭಾರತವು ಪ್ರಸ್ತುತ 8 ಚಿನ್ನ, 12 ಬೆಳ್ಳಿ ಹಾಗೂ 12 ಕಂಚಿ ಪದಕದೊಂದಿಗೆ ಒಟ್ಟು 32 ಪದಕಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: Asian Games: ಶೂಟಿಂಗ್​ ವಿಭಾಗದಲ್ಲಿ ಮಿಂಚು.. ಬೆಳ್ಳಂಬೆಳಗ್ಗೆ ಭಾರತಕ್ಕೆ ಒಲಿದ ಚಿನ್ನ, ಬೆಳ್ಳಿ ಪದಕಗಳು

Last Updated : Sep 29, 2023, 1:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.