ETV Bharat / sports

ಇಂಡಿಯನ್ ಸೂಪರ್​ ಲೀಗ್​ನಲ್ಲಿ 11ನೇ ತಂಡವಾಗಿ ಈಸ್ಟ್​ ಬೆಂಗಾಲ್​ ಅಧಿಕೃತ ಸೇರ್ಪಡೆ - ಇಂಡಿಯನ್ ಸೂಪರ್ ಲೀಗ್​ನ ಭಾಗವಾಗಲಿರುವು ಈಸ್ಟ್​ ಬೆಂಗಾಲ್​

ಪಶ್ಚಿಮ ಬಂಗಾಳವು ಭಾರತದಲ್ಲಿ ಸುಂದರ ಆಟವಾದ ಫುಟ್​ಬಾಲ್​ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದೆ. ಐಎಸ್ಎಲ್ ರಾಜ್ಯ ಮತ್ತು ಭಾರತದಾದ್ಯಂತ ಬೆಳೆಯುತ್ತಿರುವ ಹೆಜ್ಜೆ ಗುರುತಾಗಿದೆ. ಅಷ್ಟೇ ಅಲ್ಲ, ದೇಶದಲ್ಲಿ ಸ್ಪರ್ಧಾತ್ಮಕ ಮತ್ತು ದೃಢ ಫುಟ್ಬಾಲ್ ಪರಿಸರ ವ್ಯವಸ್ಥೆ ನಿರ್ಮಿಸುವ ನಮ್ಮ ಧ್ಯೇಯದ ಮತ್ತೊಂದು ಹೆಜ್ಜೆಯಾಗಿದೆ..

ಇಂಡಿಯನ್ ಸೂಪರ್​ ಲೀಗ್​
ಇಂಡಿಯನ್ ಸೂಪರ್​ ಲೀಗ್​
author img

By

Published : Sep 27, 2020, 6:57 PM IST

ಮುಂಬೈ : ಭಾರತದ ಅತ್ಯುನ್ನದ ಫುಟ್​ಬಾಲ್​ ಸ್ಪರ್ಧೆ ಇಂಡಿಯನ್ ಸೂಪರ್​ ಲೀಗ್​ನ 7ನೇ ಆವೃತ್ತಿಯಿಂದ ಈಸ್ಟ್​ ಬೆಂಗಾಲ್​(ಪೂರ್ವ ಬಂಗಾಳ) 11ನೇ ತಂಡವಾಗಿ ಸೇರ್ಪಡೆಗೊಂಡಿದೆ ಎಂದು ಫುಟ್‌ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಲಿಮಿಟೆಡ್ (ಎಫ್‌ಎಸ್‌ಡಿಎಲ್) ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಭಾನುವಾರ ಖಚಿತಪಡಿಸಿದ್ದಾರೆ.

ಶ್ರೀ ಸಿಮೆಂಟ್​ ಕಂಪನಿ ಈಸ್ಟ್ ಬೆಂಗಾಲ್​ ಕ್ಲಬ್​ನ ಬಹುಪಾಲು ಶೇರುಗಳನ್ನು ಸ್ವಾಧೀನಪಡಿಸಿಕೊಂಡು ಯಶಸ್ವಿ ಬಿಡ್​ ಮಾಡಿದ ನಂತರ ಕ್ಲಬ್​ ಐಎಸ್​ಎಲ್​ಗೆ 11ನೇ ತಂಡವಾಗಿ ಪ್ರಯಾಣಿಸಲು ಸಿದ್ಧವಾಗಿದೆ. ಈಸ್ಟ್​ ಬೆಂಗಾಲ್ ಎಫ್​ಸಿ ಮತ್ತು ಅವರ ಲಕ್ಷಾಂತರ ಅಭಿಮಾನಿಗಳನ್ನು ಐಎಸ್​ಎಲ್​ಗೆ ಸ್ವಾಗತ್ತಿಸುತ್ತಿರುವುದು ಸಂತೋಷಕರ ವಿಷಯ ಮತ್ತು ಹೆಮ್ಮೆಯ ಕ್ಷಣವಾಗಿದೆ.

ಪರಂಪರೆಯ ಕ್ಲಬ್​ಗಳಾದ ಈಸ್ಟ್ ಬೆಂಗಾಲ್ ಮತ್ತು ಮೋಹನ್​ ಬಗಾನ್​(ಈಗಿನ ಎಟಿಕೆ ಮೋಹನ್‌ ಬಗಾನ್​) ಐಎಸ್​ಎಲ್​ ಸೇರ್ಪಡೆಗೊಂಡಿರುವುದು ಭಾರತೀಯರಿಗೆ ಹಾಗೂ ವಿಶೇಷವಾಗಿ ರಾಜ್ಯಗಳ ಯುವ ಪ್ರತಿಭೆಗಳಿಗೆ ಅಪಾರ ಅವಕಾಶಗಳನ್ನುಂಟು ಮಾಡಲಿದೆ ಎಂದು ನೀತಾ ಅಂಬಾನಿ ಅಧಿಕೃತ ಹೇಳಿಕೆ ನೀಡಿದ್ದಾರೆ."

ಪಶ್ಚಿಮ ಬಂಗಾಳವು ಭಾರತದಲ್ಲಿ ಸುಂದರ ಆಟವಾದ ಫುಟ್​ಬಾಲ್​ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದೆ. ಐಎಸ್ಎಲ್ ರಾಜ್ಯ ಮತ್ತು ಭಾರತದಾದ್ಯಂತ ಬೆಳೆಯುತ್ತಿರುವ ಹೆಜ್ಜೆ ಗುರುತಾಗಿದೆ. ಅಷ್ಟೇ ಅಲ್ಲ, ದೇಶದಲ್ಲಿ ಸ್ಪರ್ಧಾತ್ಮಕ ಮತ್ತು ದೃಢ ಫುಟ್ಬಾಲ್ ಪರಿಸರ ವ್ಯವಸ್ಥೆ ನಿರ್ಮಿಸುವ ನಮ್ಮ ಧ್ಯೇಯದ ಮತ್ತೊಂದು ಹೆಜ್ಜೆಯಾಗಿದೆ" ಎಂದು ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ 2 ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್)ನಲ್ಲಿ ಫುಟ್ಬಾಲ್ ದೈತ್ಯ ಈಸ್ಟ್​ ಬೆಂಗಾಲ್​ ಸ್ಪರ್ಧಿಸಲಿದೆ ಎಂದು ಖಚಿತಪಡಿಸಿದ್ದರು. ಇದೀಗ ನೀತಾ ಅಂಬಾನಿ 2021ರ ಆವೃತ್ತಿಯಿಂದಲೇ 100 ವರ್ಷಗಳ ಇತಿಹಾಸವಿರುವ ಕ್ಲಬ್​ ಐಎಸ್​ಎಲ್​ನಲ್ಲಿ ಸ್ಪರ್ಧಿಸುವುದನ್ನು ಖಚಿತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.