ETV Bharat / sports

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​: ಕೆಲವು ಬದಲಾವಣೆಗಳೊಂದಿಗೆ ಕ್ರೀಸ್​ಗೆ​ ಇಳಿಯದಿದ್ದರೆ ಭಾರತ ತಂಡ ಭಾಗಶಃ ಹೊರ ಬಿದ್ದಂತೆ!

author img

By

Published : Jun 8, 2023, 3:10 PM IST

ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲ ದಿನ ಐದು ತಪ್ಪುಗಳನ್ನು ಮಾಡಿ ಹಿನ್ನಡೆಗೆ ದಾರಿ ಮಾಡಿಕೊಟ್ಟಿದ್ದಾರೆ. ಅವುಗಳನ್ನು ಸರಿಪಡಿಸಿಕೊಂಡು ಇಂದಿನ ಎರಡನೇ ದಿನದ ಆಟಕ್ಕೆ ಧುಮುಖಿದರೆ ಅವಕಾಶ ಹೆಚ್ಚು ಎಂದು ಹೇಳಲಾಗುತ್ತಿದೆ. ಹಾಗಾದರೆ ಅವರು ಮಾಡಿದ ಆ ಐದು ತಪ್ಪುಗಳಾವವು?

WTC Final 2023 second day of test match
WTC Final 2023 second day of test match

ಲಂಡನ್: ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವಿರುದ್ಧ ಬಲಿಷ್ಠ ಆಸ್ಟ್ರೇಲಿಯಾ ಪ್ರಾಬಲ್ಯ ಮೆರೆದಿದೆ. ಟ್ರಾವಿಸ್ ಹೆಡ್ ಮತ್ತು ಸ್ಟೀವ್​ ಸ್ಮಿತ್​ ಜೊತೆಯಾಟದಿಂದ ಟೀಂ ಇಂಡಿಯಾ ಅಲ್ಪ ಮಟ್ಟಿಗೆ ಹಿನ್ನಡೆಯತ್ತ ಸಾಗಿದೆ.

ಮೊದಲ ದಿನದ ಆಟಕ್ಕೆ ಟ್ರಾವಿಸ್ ಹೆಡ್ 146 ರನ್​ಗಳನ್ನು ಕಲೆ ಹಾಕಿ ಅಜೇಯರಾಗಿ ಕ್ರೀಸ್​ನಲ್ಲಿ ಉಳಿದಿದ್ದರೆ ಸ್ಟೀವ್​ ಸ್ಮಿತ್ 95 ರನ್​ಗಳಿಂದ ಕ್ರೀಸ್​ನಲ್ಲಿದ್ದಾರೆ. 251 ರನ್‌ಗಳ ಜೊತೆಯಾಟದಿಂದ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 327 ರನ್​ ಗಳಿಸಿದೆ. ಎರಡನೇ ದಿದನಕ್ಕೆ ಕಾಲಿಟ್ಟಿರುವ ಆಸ್ಟ್ರೇಲಿಯಾ ಅದೇ ಪ್ರದರ್ಶನ ನೀಡುವ ಲೆಕ್ಕಾಚಾರದಲ್ಲಿದೆ.

ಭಾರತ ತಂಡದ ಆಯ್ಕೆ ಸಮಿತಿ ಮತ್ತು ನಾಯಕ ರೋಹಿತ್ ಶರ್ಮಾ ತೆಗೆದುಕೊಂಡ ಕೆಲವು ನಿರ್ಧಾರಗಳು ತಂಡಕ್ಕೆ ಮುಳುವಾದಂತೆ ಕಾಣುತ್ತಿವೆ. ಎರಡನೇ ದಿನದ ಆಟದಲ್ಲಿ ಕೆಲವು ಬದಲಾವಣೆಗಳೊಂದಿಗೆ ಕ್ರೀಸ್​ಗೆ​ ಇಳಿಯದಿದ್ದರೆ ಭಾರತ ತಂಡ ಭಾಗಶಃ ಹೊರಬಿದ್ದಂತೆ. ತಂತ್ರಗಾರಿಕೆ ಮತ್ತು ಪೂರ್ವ ಸಿದ್ಧತೆಗೆ ಅವಕಾಶವಿದ್ದು ಮಾಡಿದ ತಪ್ಪುಗಳನ್ನು ಪುನರಾವರ್ತನೆ ಮಾಡದಿದ್ದರೆ ಅವಕಾಶ ಹೆಚ್ಚು ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲ ದಿನ ಐದು ತಪ್ಪುಗಳನ್ನು ಮಾಡಿದ್ದಾರೆ. ಎರಡನೇ ದಿನದಲ್ಲಿ ಅದನ್ನು ಸರಿದೂಗಿಸುವ ಅವಕಾಶವಿದೆ. ಎರಡನೇ ದಿನದ ಮೊದಲ ಸೆಷನ್​​ನಲ್ಲಿ ಮೊದಲ ದಿನದ ತಪ್ಪುಗಳಿಂದ ಪಾಠ ಕಲಿತು ಟೀಂ ಇಂಡಿಯಾ ಆದಷ್ಟು ಬೇಗ ಕಮ್ ಬ್ಯಾಕ್ ಮಾಡಲು ಪ್ರಯತ್ನಿಸಲಿದೆ ಎಂದು ಸಹ ಹೇಳಲಾಗುತ್ತಿದೆ. ಹಾಗಾದರೆ, ಆ ಐದು ತಪ್ಪುಗಳಾವು?

ಮೊದಲ ತಪ್ಪು: ಆಸ್ಟ್ರೇಲಿಯಾ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಟೀಂ ಇಂಡಿಯಾದ ಸ್ಪಿನ್​ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರ ಮಾಡಿದ್ದು ಮದಲ ತಪ್ಪು ಎನ್ನಲಾಗುತ್ತಿದೆ. ರವಿಚಂದ್ರನ್ ಅಶ್ವಿನ್ ತಮ್ಮ ಕ್ರಿಕೆಟ್​ ಪಯಣದಲ್ಲಿ ಹೆಚ್ಚಾಗಿ ಎಡಗೈ ಬ್ಯಾಟ್ಸ್‌ಮನ್‌ಗಳನ್ನೇ ಉರುಳಿಸಿದ್ದನ್ನು ಇಲ್ಲಿ ಗಮನಿಸಬಹುದು.

241 ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡದ್ದರೆ, 233 ಬಲಗೈ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದ್ದು ಅವರ ಸ್ಪಿನ್​ ಮೋಡಿಗೆ ಸಾಕ್ಷಿ. ಆಸ್ಟ್ರೇಲಿಯ ತಂಡದಲ್ಲಿ 5 ಎಡಗೈ ಬ್ಯಾಟ್ಸ್‌ಮನ್‌ ಇರುವಾಗ ರವೀಂದ್ರ ಜಡೇಜಾ ಅವರಿಗೆ ಜಾಗ ಕೊಟ್ಟಿದ್ದು, ತಂಡಕ್ಕೆ ಲಾಭವಾಗದು. ಸಾಮಾನ್ಯವಾಗಿ ಎಡಗೈ ಸ್ಪಿನ್ನರ್ ಆಗಿರುವ ಜಡೇಜಾ ಅವರ ಬೌಲಿಂಗ್ ಎಡಗೈ ಬ್ಯಾಟ್ಸ್‌ಮನ್‌ಗಳ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಜಡೇಜಾ ಅವರು 174 ಬಲಗೈ ಬ್ಯಾಟ್ಸ್‌ಮನ್‌ಗಳನ್ನು ಕಬಳಿಸಿದರೆ, ಕೇವಲ 90 ಎಡಗೈ ಬ್ಯಾಟ್ಸ್‌ಮನ್‌ಗಳನ್ನು ವಿಲಿಯನ್‌ಗೆ ಕಳುಹಿಸಿದ್ದಾರೆ. ಆದ್ದರಿಂದಲೇ ಸುನಿಲ್ ಗವಾಸ್ಕರ್ ಕೂಡ ಪ್ಲೇಯಿಂಗ್-11 ಬಗ್ಗೆಯೇ ಪ್ರಶ್ನೆಗಳನ್ನು ಎತ್ತಿದ್ದರು.

ಎರಡನೇ ತಪ್ಪು: ಓವಲ್ ಮೈದಾನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದರು ಕೂಡ ಬ್ಯಾಟಿಂಗ್ ಮಾಡುವ ಬದಲು ಎದುರಾಳಿ ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಮಾಡಿದ್ದು, ಅವರ ಎರಡನೇ ತಪ್ಪು ಎಂದು ಹೇಳಲಾಗುತ್ತಿದೆ. ಉಸ್ಮಾನ್ ಖವಾಜಾ ಅವರ ವಿಕೆಟ್​ ಪತನದ ನಂತರವೂ ಕೆಲವು ಸಮಯದವರೆಗೆ ಭಾರತೀಯ ಬೌಲಿಂಗ್​ ಹಾದಿ ಸುಗಮವಾಗಿಯೇ ಇತ್ತು. ಆಸ್ಟ್ರೇಲಿಯಾ ಮೊದಲು ನಿಧಾನವಾಗಿ ಆಟ ಆಡಿದರೂ ಕ್ರಮೇಣ ತಮ್ಮ ಬ್ಯಾಟಿಂಗ್ ಮೂಲಕ ಉತ್ತರ ನೀಡ ತೊಡಗಿದರು. ​ಮೊದಲ 25 ಓವರ್‌ಗಳಲ್ಲಿ ಕೇವಲ 80 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಕಾಂಗರೂ ತಂಡ, ನಂತರದ 60 ಓವರ್‌ಗಳಲ್ಲಿ 247 ರನ್ ಗಳಿಸಿತು. ಅಲ್ಲದೇ, ಹೆಡ್ ಮತ್ತು ಸ್ಮಿತ್ ಅವರ ಜೊತೆಯಾಟವನ್ನು ಮುರಿಯದ ಕಾರಣ 327 ರನ್​ ಗಳಿಸಿತು.

ಮೂರನೇ ತಪ್ಪು: ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ನಾಲ್ಕು ವೇಗದ ಬೌಲರ್‌ಗಳನ್ನು ಕ್ರೀಸ್​ಗೆ ಇಳಿಸಿದ್ದು ಮೂರನೇ ತಪ್ಪು. ಬಲಿಷ್ಟ ಆಸ್ಟ್ರೇಲಿಯಾ ಮಣಿಸಲು ತಂತ್ರಗಾರಿಕೆ ಬೇಕು. ಈ ಸಂಖ್ಯೆಯ ಬೌಲರ್‌ಗಳೊಂದಿಗೆ ಕ್ರೀಸ್​ಗೆ ಇಳಿದಿದ್ದು ಉತ್ತಮ ನಿರ್ಧಾರವಲ್ಲ. ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಇಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿರುವುದು ಇದಕ್ಕೆ ಉದಾಹರಣೆ. ನಾಲ್ಕು ಬೌಲರ್‌ಗಳನ್ನು ಕ್ರೀಸ್​ಗೆ ಇಳಿಸಲೇಬೇಕು ಎಂಬ ಸ್ಥಿತಿ ನಿರ್ಮಾಣವಾಗಿದ್ದರೆ ಓರ್ವ ಎಡಗೈ ವೇಗದ ಬೌಲರ್ ಅನ್ನು ಸೇರಿಸಿಕೊಳ್ಳಬಹುದಿತ್ತು. ಹಾಗೆ ಆಗಿದ್ದರೆ ಜಯದೇವ್ ಉನಾದ್ಕತ್​ಗೆ ಅವಕಾಶ ಸಿಗುತ್ತಿತ್ತು.

ನಾಲ್ಕನೇ ತಪ್ಪು: ಯುವ ಆಟಗಾರ ಇಶಾನ್ ಕಿಶನ್‌ಗೆ ಅವಕಾಶ ನೀಡದಿರುವುದು ನಾಲ್ಕನೇ ತಪ್ಪು ಎಂದು ಹೇಳಲಾಗುತ್ತಿದೆ. ಟೀಮ್ ಮ್ಯಾನೇಜ್‌ಮೆಂಟ್ ಇಲ್ಲಿ ಕೂಡ ಎಡವಿದೆ. ಓವಲ್ ಮೈದಾನ ಎಡಗೈ ಬ್ಯಾಟ್ಸ್‌ಮನ್​ಗೆ ಹೇಳಿ ಮಾಡಿಸಿದ ಮೈದಾನ. ಟ್ರಾವಿಸ್ ಹೆಡ್ ಅವರ ಆಕ್ರಮಣದ ಆಟದಂತೆ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ ಅವರ ಬ್ಯಾಟಿಂಗ್ ಅನ್ನು ನಿರೀಕ್ಷಿಸಬಹುದಿತ್ತು. ಆದರೆ, ಅವರ ಬದಲಿಗೆ ಕೆಎಸ್​ ಭರತ್​ಗೆ ಅವಕಾಶ ಮಾಡಿಕೊಡಲಾಗಿದೆ. ಇಶಾನ್ ಕಿಶನ್‌ ಅವರ ಜಾಗಕ್ಕೆ ಭರತ್ ಅಷ್ಟು ಸೂಕ್ತದ ಆಟಗಾರ ಎಂದು ಹೇಳಲಾಗುದು. ಹಾಗಾಗಿ ಕಾದು ನೋಡಬೇಕು ಎನ್ನಲಾಗುತ್ತಿದೆ.

ಐದನೇ ತಪ್ಪು: ಆಸ್ಟ್ರೇಲಿಯಾದ ಕೆಲವು ವಿಕೆಟ್ ಪತನದ ಬಳಿಕ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಆಗಾಗ್ಗೆ ಬೌಲರ್‌ಗಳನ್ನು ಬದಲಾಯಿಸುತ್ತಲೇ ಇದ್ದರು. ವೇಗದ ಬೌಲರ್‌ಗಳಿಗೆ ಸ್ವಲ್ಪ ಸಮಯ ಕಳೆದ ಬಳಿಕ ಅವಕಾಶ ಮಾಡಿಕೊಡಬಹುದಿತ್ತು. ಆದರೆ, ಹಾಗೆ ಮಾಡದಿರುವುದು ಐದನೇ ತಪ್ಪು ಎಂದು ಹೇಳಲಾಗುತ್ತಿದೆ.

ಹೊಸ ಬ್ಯಾಟ್ಸ್‌ಮನ್‌ಗಳಿಗೆ ಒಂದು ತುದಿಯಿಂದ ಸ್ಪಿನ್ ಪ್ರಯತ್ನಿಸಬಹುದಿತ್ತು. ಆದರೆ, ತಂಡವು ಅದರಲ್ಲೂ ನಿರ್ಲಕ್ಷ್ಯ ತೋರಿತು. ಮೈದಾನದ ಸ್ಥಿತಿ-ಗತಿಯನ್ನು ಅರ್ಥೈಸಿಕೊಳ್ಳುವಲ್ಲಿ ಮತ್ತು ಕಾಂಗರೂ ಬ್ಯಾಟ್ಸ್‌ಮನ್‌ಗಳ ಜೊತೆಯಾಟ ಮುರಿಯುವಲ್ಲಿ ಭಾರತ ಎಡಿವಿದ್ದು ಕೂಡ ಇಲ್ಲಿ ಉಲ್ಲೇಖ ಮಾಡಬಹುದು.

ಇಂದಿನ ಎರಡನೇ ದಿನದ ಆಟದಲ್ಲಿ ಭಾರತ ತಂಡ ಮಾಡಿದ ತಪ್ಪನ್ನು ಮಾಡದೇ ತಂತ್ರಗಾರಿಕೆ ಮತ್ತು ಪೂರ್ವ ಸಿದ್ಧತೆ ಮೂಲಕ ಉತ್ಸಾಹಿ ಕಾಂಗರೂ ಬ್ಯಾಟ್ಸ್‌ಮನ್‌ಗಳ ಜೊತೆಯಾಟ ಮುರಿಯಬೇಕು. ಒಂದು ವೇಳೆ ಈ ಜೊತೆಯಾಟ ಮುರಿಯದಿದ್ದರೆ ಭಾರತಕ್ಕೆ ಸ್ಟೀವ್ ಸ್ಮಿತ್ ಸವಾಲು ಆಗಬಹುದು. ಕ್ರೀಸ್​ನಲ್ಲಿ ಹೆಚ್ಚು ಕಾಲ ನಿಂತರೆ 600ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಟೀಂ ಇಂಡಿಯಾಗೆ ದೊಡ್ಡ ಮೊತ್ತದ ಸವಾಲು ಕೊಡಬಹುದು ಎಂದು ಅಂದಾಜು ಮಾಡಲಾಗಿದೆ.

ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ : ರಿಷಭ್​ ಪಂತ್​ ದಾಖಲೆ ಮುರಿದ ಟ್ರಾವಿಸ್​ ಹೆಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.