ನವದೆಹಲಿ : ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ನ ಕೊನೆಯ ಎಸೆತದಲ್ಲಿ ಶಾರುಖ್ ಖಾನ್(Shahrukh Khan) ಸಿಡಿಸಿದ ಅದ್ಭುತ ಸಿಕ್ಸರ್ ನೆರವಿನಿಂದ ಕರ್ನಾಟಕ ವಿರುದ್ಧ ತಮಿಳುನಾಡು(Tamil Nadu vs Karnataka) 4 ವಿಕೆಟ್ಗಳ ರೋಚಕ ಜಯ ಸಾಧಿಸಿ ಸತತ 2ನೇ ಹಾಗೂ ಒಟ್ಟಾರೆ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕರ ವೈಫಲ್ಯದ ಹೊರತಾಗಿಯೂ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 151ರನ್ ಗಳಿಸಿತ್ತು.
ಅಭಿನವ್ ಮನೋಹರ್(Abhinav Manohar) 37 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 46 ರನ್ಗಳಿಸಿದರೆ, ಪ್ರವೀಣ್ ದುಬೆ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 33 ರನ್ಗಳಿಸಿ ಸವಾಲಿನ ಮೊತ್ತವನ್ನು ದಾಖಲಿಸಲು ನೆರವಾದರು.
ತಮಿಳುನಾಡು ಪರ ಸಾಯಿ ಕಿಶೋರ್(Sai Kishore) ಕೇವಲ 12 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಕರ್ನಾಟಕ ಬೃಹತ್ ಮೊತ್ತ ದಾಖಲಿಸದಂತೆ ತಡೆದರು. ಇವರಿಗೆ ಸಾಥ್ ನೀಡಿದ ಸಂದೀಪರ್ ವಾರಿಯರ್ 34ಕ್ಕೆ1, ಟಿ ನಟರಾಜನ್ 44ಕ್ಕೆ1, ಸಂಜಯ್ ಯಾದವ್ 32ಕ್ಕೆ1 ವಿಕೆಟ್ ಪಡೆದರು.
-
WHAT. A. FINISH! 👌 👌
— BCCI Domestic (@BCCIdomestic) November 22, 2021 " class="align-text-top noRightClick twitterSection" data="
A last-ball SIX from @shahrukh_35 does the trick! 💪 💪
Tamil Nadu hold their nerve & beat the spirited Karnataka side by 4 wickets to seal the title-clinching victory. 👏 👏 #TNvKAR #SyedMushtaqAliT20 #Final
Scorecard ▶️ https://t.co/RfCtkN0bjq pic.twitter.com/G2agPC795B
">WHAT. A. FINISH! 👌 👌
— BCCI Domestic (@BCCIdomestic) November 22, 2021
A last-ball SIX from @shahrukh_35 does the trick! 💪 💪
Tamil Nadu hold their nerve & beat the spirited Karnataka side by 4 wickets to seal the title-clinching victory. 👏 👏 #TNvKAR #SyedMushtaqAliT20 #Final
Scorecard ▶️ https://t.co/RfCtkN0bjq pic.twitter.com/G2agPC795BWHAT. A. FINISH! 👌 👌
— BCCI Domestic (@BCCIdomestic) November 22, 2021
A last-ball SIX from @shahrukh_35 does the trick! 💪 💪
Tamil Nadu hold their nerve & beat the spirited Karnataka side by 4 wickets to seal the title-clinching victory. 👏 👏 #TNvKAR #SyedMushtaqAliT20 #Final
Scorecard ▶️ https://t.co/RfCtkN0bjq pic.twitter.com/G2agPC795B
152 ರನ್ಗಳ ಗುರಿ ಪಡೆದ ತಮಿಳುನಾಡು ಕೊನೆಯ ಓವರ್ನಲ್ಲಿ ಅಗತ್ಯವಿದ್ದ 16 ರನ್ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವು ಸಾಧಿಸಿತು. ಹರಿ ನಿಶಾಂತ್ 12ಕ್ಕೆ 23, ಎನ್ ಜಗದೀಶನ್ 46ಕ್ಕೆ 41 ರನ್, ಶಾರುಖ್ ಖಾನ್ 15 ಎಸೆತಗಳಲ್ಲಿ ಅಜೇಯ 33 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಕರ್ನಾಟಕ ಪರ ಕೆಸಿ ಕಾರಿಯಪ್ಪ 23ಕ್ಕೆ 2 ವಿಕೆಟ್, ಪ್ರತೀಕ್ ಜೈನ್ 34ಕ್ಕೆ1, ವಿದ್ಯಾಧರ್ ಪಾಟೀಲ್ 21ಕ್ಕೆ1, ಕರುಣ್ ನಾಯರ್ 2ಕ್ಕೆ1 ವಿಕೆಟ್ ಪಡೆದರು. ಸತತ ಮೂರನೇ ಬಾರಿ ಫೈನಲ್ ತಲುಪಿದ್ದ ತಮಿಳುನಾಡು ಸೈಯದ್ ಮುಷ್ತಾಕ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು.
ಅಲ್ಲದೆ ಈ ಪ್ರಶಸ್ತಿಯನ್ನು ಗರಿಷ್ಠ(3) ಬಾರಿ ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕರ್ನಾಟಕ, ಬರೋಡಾ ಮತ್ತು ಗುಜರಾತ್ ತಂಡಗಳೂ ತಲಾ 2 ಬಾರಿ ಟ್ರೋಫಿ ಎತ್ತಿ ಹಿಡಿದಿವೆ.
ಇದನ್ನೂ ಓದಿ:ಕಿವೀಸ್ ಕಠಿಣ ಪರಿಸ್ಥಿತಿಯಲ್ಲಿ ಸರಣಿಯನ್ನಾಡಿದೆ, ಸರಣಿ ಗೆದ್ದರೂ ನಮ್ಮ ಕಾಲು ನೆಲದಲ್ಲಿರಬೇಕು: ದ್ರಾವಿಡ್