ಮುಂಬೈ : ಭಾರತದ ಉದಯೋನ್ಮುಖ ಬ್ಯಾಟರ್ ಶ್ರೇಯಸ್ ಅಯ್ಯರ್ ಫೆಬ್ರವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸಿದ್ದ ಅಮೆಲಿಯಾ ಕೆರ್ ಪಾತ್ರರಾಗಿದ್ದಾರೆ.
ಶ್ರೇಯಸ್ ಅಯ್ಯರ್ ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ವಿಂಡೀಸ್ ವಿರುದ್ಧದ ಸರಣಿಯಲ್ಲಿ ತಲಾ ಒಂದು ಏಕದಿನ ಮತ್ತು ಟಿ20 ಪಂದ್ಯವನ್ನಾಡಿದ್ದ ಅಯ್ಯರ್, ಕ್ರಮವಾಗಿ 80 ಮತ್ತು 25 ರನ್ಗಳಿಸಿದ್ದರು.
ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಒಂದೂ ಪಂದ್ಯದಲ್ಲೂ ವಿಕೆಟ್ ಒಪ್ಪಿಸದೆ ದಾಖಲೆಯ 204ರನ್ ಸಿಡಿಸಿ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಅವರು ಪಂದ್ಯಗಳಲ್ಲಿ ಕ್ರಮವಾಗಿ 57(28), 74(44) ಮತ್ತು 73(45) ರನ್ಳಿಸಿದ್ದರು.
ಫೆಬ್ರವರಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ಭಾಜನಾಗಿರುವ ಅಮೆಲಿಯಾ ಕೆರ್ ವಿಶ್ವಕಪ್ಗೂ ಮುನ್ನ ನಡೆದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಸುಪ್ರೀಂ ಪ್ರದರ್ಶನ ತೋರಿದ್ದರು. ಅವರು ಭಾರತ ಮಿಥಾಲಿ ರಾಜ್, ದೀಪ್ತಿ ಶರ್ಮಾರನ್ನು ಹಿಂದಿಕ್ಕಿ ಈ ಪ್ರಶಸ್ತಿ ಪಡೆದಿದ್ದಾರೆ.
ನ್ಯೂಜಿಲ್ಯಾಂಡ್ ಆಲ್ರೌಂಡರ್ 117ರ ಸರಾಸರಿಯಲ್ಲಿ 353 ರನ್ ಮತ್ತು 7 ವಿಕೆಟ್ ಪಡೆದಿದ್ದರು. 2ನೇ ಮತ್ತು 4ನೇ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.
ಇದನ್ನೂ ಓದಿ:ಆಸೀಸ್ ವಿರುದ್ಧ ತವರಿನಲ್ಲೇ ಮುಖಭಂಗ ಅನುಭವಿಸಿದ ಪಾಕ್.. 148ಕ್ಕೆ ಆಲೌಟ್, 408 ರನ್ಗಳ ಬೃಹತ್ ಹಿನ್ನಡೆ..