ETV Bharat / sports

ಲಾರಾ ದಾಖಲೆ ಮುರಿದ ಬಾಂಗ್ಲಾ ನಾಯಕ ಶಕೀಬ್: 100 ವಿಕೆಟ್​ ಕಬಳಿಸಿ ಶಾಹೀನ್ ಅಫ್ರಿದಿ ದಾಖಲೆ

author img

By ETV Bharat Karnataka Team

Published : Oct 31, 2023, 10:12 PM IST

Shakib, Shaheen Afridi records: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಇಂದು ಬಾಂಗ್ಲಾದೇಶದ ಕ್ರಿಕೆಟಿಗ ಶಕೀಬ್​ ಅಲ್​ ಹಸನ್, ಬ್ರಿಯಾನ್ ಲಾರಾ ಅವರ ರನ್​ ದಾಖಲೆ ಹಿಮ್ಮೆಟ್ಟಿಸಿದರು.

Etv Bharat
Shakib al Hasan

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಆಲ್‌ರೌಂಡರ್ ಹಾಗು ನಾಯಕ ಶಕೀಬ್ ಅಲ್ ಹಸನ್ ಮಂಗಳವಾರ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ 7ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಹಸನ್ ಈ ದಾಖಲೆ ಮಾಡಿದ್ದಾರೆ.

ಶಕೀಬ್ ತಮ್ಮ ಇನ್ನಿಂಗ್ಸ್​ನಲ್ಲಿ 64 ಎಸೆತಗಳನ್ನು ಎದುರಿಸಿ 4 ಬೌಂಡರಿಸಮೇತ 43 ರನ್ ಗಳಿಸಿದರು. 35 ವಿಶ್ವಕಪ್​ ಪಂದ್ಯಗಳಲ್ಲಿ ಶಕೀಬ್ 80 ಸ್ಟ್ರೈಕ್ ರೇಟ್‌ನೊಂದಿಗೆ 40.32 ಸರಾಸರಿಯಲ್ಲಿ 1,250 ರನ್ ಪೇರಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 10 ಅರ್ಧಶತಕ ಒಳಗೊಂಡಿದೆ. ಅಜೇಯ 124* ಅವರ ಅತ್ಯುತ್ತಮ ಸ್ಕೋರ್ ಆಗಿದೆ. ವೆಸ್ಟ್​ ಇಂಡೀಸ್​ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ 34 ಪಂದ್ಯಗಳಿಂದ 1,225 ರನ್ ಗಳಿಸಿದ್ದರು. ಸಚಿನ್ ತೆಂಡೂಲ್ಕರ್ ಕ್ರಿಕೆಟ್​ ವಿಶ್ವಕಪ್​ನಲ್ಲಿ 45 ಪಂದ್ಯಗಳಲ್ಲಿ 56.95 ಸರಾಸರಿಯಲ್ಲಿ 2,278 ರನ್ ಗಳಿಸಿದ್ದು, ಆರು ಶತಕಗಳು ಮತ್ತು 15 ಅರ್ಧಶತಕಗಳು ಸೇರಿಕೊಂಡಿವೆ.

  • " class="align-text-top noRightClick twitterSection" data="">

ಶಕೀಬ್​ ಅಲ್​ ಹಸನ್ ಈ ಬಾರಿಯ ವಿಶ್ವಕಪ್​ನಲ್ಲಿ ತಮ್ಮ ಉತ್ತಮ ಫಾರ್ಮ್​ ಕಂಡುಕೊಂಡಿಲ್ಲ. ಆರು ಪಂದ್ಯಗಳಲ್ಲಿ 17.33 ರ ಸರಾಸರಿಯಲ್ಲಿ ಕೇವಲ 104 ರನ್ ಗಳಿಸಿದ್ದಾರೆ. 64 ಅವರ ಅತ್ಯುತ್ತಮ ಸ್ಕೋರ್​ ಆಗಿದೆ.

ಶಾಹಿನ್ ಅಫ್ರಿದಿ ಶತಕ ವಿಕೆಟ್ ಸಾಧನೆ: ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಇಂದಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್​ನಲ್ಲಿ 100 ವಿಕೆಟ್​ ಪಡೆದ ಸಾಧನೆ ಮಾಡಿದರು. ಈ ದಾಖಲೆ ಮಾಡಿದ ಮೊದಲ ವೇಗದ ಬೌಲರ್​ ಎಂದು ಗುರುತಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಶಾಹೀನ್ ಒಂಬತ್ತು ಓವರ್‌ಗಳಲ್ಲಿ 2.60 ಎಕಾನಮಿ ದರದಲ್ಲಿ ಬಾಲ್​ ಮಾಡಿ ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ ಮತ್ತು ಮಹಮದುಲ್ಲಾ (3/23) ವಿಕೆಟ್ ಕಬಳಿಸಿದರು. ​

🚨 RECORD ALERT 🚨@iShaheenAfridi becomes the fastest pacer to 1️⃣0️⃣0️⃣ ODI wickets in his 51st game! 🦅#PAKvBAN | #CWC23 | #DattKePakistani pic.twitter.com/ergzociYeu

— Pakistan Cricket (@TheRealPCB) October 31, 2023 ">

ಶಾಹೀನ್ ಕೇವಲ 51 ಪಂದ್ಯದಿಂದ ಈ ಮೈಲುಗಲ್ಲು ಸಾಧಿಸಿದ್ದಾರೆ. 51 ಏಕದಿನದಲ್ಲಿ 22.78 ಸರಾಸರಿಯಲ್ಲಿ 102 ವಿಕೆಟ್‌ ಹೊಂದಿದ್ದು, 35 ರನ್​ ಕೊಟ್ಟು 6 ವಿಕೆಟ್​ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶ. 100 ವಿಕೆಟ್​ ಸಾಧನೆಯಲ್ಲಿ ಶಾಹೀನ್​ ಅವರಿಗಿಂತ ನೇಪಾಳದ ಸ್ಪಿನ್ನರ್ ಸಂದೀಪ್ ಲಾಮಿಚಾನೆ (42 ಪಂದ್ಯ) ಮತ್ತು ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ (44 ಪಂದ್ಯ) ಮುಂದಿದ್ದಾರೆ.

ಶಾಹೀನ್ ಸದ್ಯ​ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ನೀಡುತ್ತಿದ್ದಾರೆ. ಪಾಕ್​ನ ಸ್ಟಾರ್​​ ಬೌಲರ್​​ 7 ಪಂದ್ಯಗಳಿಂದ 19.75 ಸರಾಸರಿಯಲ್ಲಿ 16 ವಿಕೆಟ್‌ ಪಡೆದಿದ್ದಾರೆ. 2023ರ ವಿಶ್ವಕಪ್‌ನ​ಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಆಟಗಾರನಾಗಿದ್ದು, ಆಸ್ಟ್ರೇಲಿಯಾದ ಆ್ಯಡಮ್ ಝಂಪಾ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಸತತ ಸೋಲಿನ ನಂತರ ಲಯಕ್ಕೆ ಮರಳಿದ ಪಾಕ್​: ಬಾಂಗ್ಲಾ ವಿರುದ್ಧ 7 ವಿಕೆಟ್​ಗಳ ಜಯ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಆಲ್‌ರೌಂಡರ್ ಹಾಗು ನಾಯಕ ಶಕೀಬ್ ಅಲ್ ಹಸನ್ ಮಂಗಳವಾರ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ 7ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಹಸನ್ ಈ ದಾಖಲೆ ಮಾಡಿದ್ದಾರೆ.

ಶಕೀಬ್ ತಮ್ಮ ಇನ್ನಿಂಗ್ಸ್​ನಲ್ಲಿ 64 ಎಸೆತಗಳನ್ನು ಎದುರಿಸಿ 4 ಬೌಂಡರಿಸಮೇತ 43 ರನ್ ಗಳಿಸಿದರು. 35 ವಿಶ್ವಕಪ್​ ಪಂದ್ಯಗಳಲ್ಲಿ ಶಕೀಬ್ 80 ಸ್ಟ್ರೈಕ್ ರೇಟ್‌ನೊಂದಿಗೆ 40.32 ಸರಾಸರಿಯಲ್ಲಿ 1,250 ರನ್ ಪೇರಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 10 ಅರ್ಧಶತಕ ಒಳಗೊಂಡಿದೆ. ಅಜೇಯ 124* ಅವರ ಅತ್ಯುತ್ತಮ ಸ್ಕೋರ್ ಆಗಿದೆ. ವೆಸ್ಟ್​ ಇಂಡೀಸ್​ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ 34 ಪಂದ್ಯಗಳಿಂದ 1,225 ರನ್ ಗಳಿಸಿದ್ದರು. ಸಚಿನ್ ತೆಂಡೂಲ್ಕರ್ ಕ್ರಿಕೆಟ್​ ವಿಶ್ವಕಪ್​ನಲ್ಲಿ 45 ಪಂದ್ಯಗಳಲ್ಲಿ 56.95 ಸರಾಸರಿಯಲ್ಲಿ 2,278 ರನ್ ಗಳಿಸಿದ್ದು, ಆರು ಶತಕಗಳು ಮತ್ತು 15 ಅರ್ಧಶತಕಗಳು ಸೇರಿಕೊಂಡಿವೆ.

  • " class="align-text-top noRightClick twitterSection" data="">

ಶಕೀಬ್​ ಅಲ್​ ಹಸನ್ ಈ ಬಾರಿಯ ವಿಶ್ವಕಪ್​ನಲ್ಲಿ ತಮ್ಮ ಉತ್ತಮ ಫಾರ್ಮ್​ ಕಂಡುಕೊಂಡಿಲ್ಲ. ಆರು ಪಂದ್ಯಗಳಲ್ಲಿ 17.33 ರ ಸರಾಸರಿಯಲ್ಲಿ ಕೇವಲ 104 ರನ್ ಗಳಿಸಿದ್ದಾರೆ. 64 ಅವರ ಅತ್ಯುತ್ತಮ ಸ್ಕೋರ್​ ಆಗಿದೆ.

ಶಾಹಿನ್ ಅಫ್ರಿದಿ ಶತಕ ವಿಕೆಟ್ ಸಾಧನೆ: ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಇಂದಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್​ನಲ್ಲಿ 100 ವಿಕೆಟ್​ ಪಡೆದ ಸಾಧನೆ ಮಾಡಿದರು. ಈ ದಾಖಲೆ ಮಾಡಿದ ಮೊದಲ ವೇಗದ ಬೌಲರ್​ ಎಂದು ಗುರುತಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಶಾಹೀನ್ ಒಂಬತ್ತು ಓವರ್‌ಗಳಲ್ಲಿ 2.60 ಎಕಾನಮಿ ದರದಲ್ಲಿ ಬಾಲ್​ ಮಾಡಿ ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂಟೊ ಮತ್ತು ಮಹಮದುಲ್ಲಾ (3/23) ವಿಕೆಟ್ ಕಬಳಿಸಿದರು. ​

ಶಾಹೀನ್ ಕೇವಲ 51 ಪಂದ್ಯದಿಂದ ಈ ಮೈಲುಗಲ್ಲು ಸಾಧಿಸಿದ್ದಾರೆ. 51 ಏಕದಿನದಲ್ಲಿ 22.78 ಸರಾಸರಿಯಲ್ಲಿ 102 ವಿಕೆಟ್‌ ಹೊಂದಿದ್ದು, 35 ರನ್​ ಕೊಟ್ಟು 6 ವಿಕೆಟ್​ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಅಂಕಿಅಂಶ. 100 ವಿಕೆಟ್​ ಸಾಧನೆಯಲ್ಲಿ ಶಾಹೀನ್​ ಅವರಿಗಿಂತ ನೇಪಾಳದ ಸ್ಪಿನ್ನರ್ ಸಂದೀಪ್ ಲಾಮಿಚಾನೆ (42 ಪಂದ್ಯ) ಮತ್ತು ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ (44 ಪಂದ್ಯ) ಮುಂದಿದ್ದಾರೆ.

ಶಾಹೀನ್ ಸದ್ಯ​ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ನೀಡುತ್ತಿದ್ದಾರೆ. ಪಾಕ್​ನ ಸ್ಟಾರ್​​ ಬೌಲರ್​​ 7 ಪಂದ್ಯಗಳಿಂದ 19.75 ಸರಾಸರಿಯಲ್ಲಿ 16 ವಿಕೆಟ್‌ ಪಡೆದಿದ್ದಾರೆ. 2023ರ ವಿಶ್ವಕಪ್‌ನ​ಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಆಟಗಾರನಾಗಿದ್ದು, ಆಸ್ಟ್ರೇಲಿಯಾದ ಆ್ಯಡಮ್ ಝಂಪಾ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಸತತ ಸೋಲಿನ ನಂತರ ಲಯಕ್ಕೆ ಮರಳಿದ ಪಾಕ್​: ಬಾಂಗ್ಲಾ ವಿರುದ್ಧ 7 ವಿಕೆಟ್​ಗಳ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.