ಮುಂಬೈ: ಆಗಸ್ಟ್ 18ರಿಂದ ಜಿಂಬಾಬ್ವೆ ವಿರುದ್ಧ ನಡೆಯಲಿರುವ ಮೂರು ಏಕದಿನ ಪಂದ್ಯಗಳಿಗೆ ಈಗಾಗಲೇ ಟೀಂ ಇಂಡಿಯಾ ಪ್ರಕಟಗೊಂಡಿದೆ. ಆದರೆ, ಗಾಯಗೊಂಡಿರುವ ಕಾರಣ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಭಾರತೀಯ ಕ್ರಿಕೆಟ್ ಮಂಡಳಿಯು(ಬಿಸಿಸಿಐ) ಮತ್ತೋರ್ವ ಸ್ಟಾರ್ ಪ್ಲೇಯರ್ಗೆ ಮಣೆ ಹಾಕಿದೆ.
-
UPDATE - Shahbaz Ahmed replaces injured Washington Sundar for Zimbabwe series.
— BCCI (@BCCI) August 16, 2022 " class="align-text-top noRightClick twitterSection" data="
More details here - https://t.co/Iw3yuLeBYy #ZIMvIND
">UPDATE - Shahbaz Ahmed replaces injured Washington Sundar for Zimbabwe series.
— BCCI (@BCCI) August 16, 2022
More details here - https://t.co/Iw3yuLeBYy #ZIMvINDUPDATE - Shahbaz Ahmed replaces injured Washington Sundar for Zimbabwe series.
— BCCI (@BCCI) August 16, 2022
More details here - https://t.co/Iw3yuLeBYy #ZIMvIND
ಆರ್‌ಸಿಬಿ ತಂಡದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಗಮನ ಸೆಳೆದಿರುವ ಶಹ್ಬಾಜ್ ಅಹ್ಮದ್ ಅವರನ್ನು ಆಯ್ಕೆ ಸಮಿತಿ ತಂಡಕ್ಕೆ ಸೇರಿಸಿಕೊಂಡಿದೆ. ಈ ಮೂಲಕ ಇವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆಗಸ್ಟ್ 18 ರಿಂದ ಹರಾರೆ ಮೈದಾನದಲ್ಲಿ ಭಾರತ-ಜಿಂಬಾಬ್ವೆ ಮಧ್ಯೆ ಮೊದಲ ಏಕದಿನ ಪಂದ್ಯ ನಿಗದಿಯಾಗಿದೆ. ಟೀಂ ಇಂಡಿಯಾವನ್ನು ಕೆ ಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾರ್ಯ ನಿರ್ವಹಿಸುವರು.
ಶಹ್ಬಾಜ್ ಅಹ್ಮದ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 18 ಪಂದ್ಯ ಆಡಿದ್ದು, 1,041 ರನ್ ಹಾಗೂ 57 ವಿಕೆಟ್ ಕಬಳಿಸಿದ್ದಾರೆ. ಲಿಸ್ಟ್ A ನಲ್ಲಿ 26 ಪಂದ್ಯಗಳನ್ನಾಡಿದ್ದು 662 ರನ್, 24 ವಿಕೆಟ್ ಪಡೆದಿದ್ದಾರೆ. ಇದರ ಜೊತೆಗೆ 56 ಟಿ20 ಪಂದ್ಯಗಳ ಮೂಲಕ 512 ರನ್ ಸಿಡಿಸಿ 29 ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧದ ODI ಸರಣಿಗೆ ಟೀಂ ಇಂಡಿಯಾ ಪ್ರಕಟ.. ಕೊಹ್ಲಿ, ಬುಮ್ರಾ, ಪಂತ್ಗೆ ವಿಶ್ರಾಂತಿ
ಹರಾರೆಯಲ್ಲಿ ಆಗಸ್ಟ್ 18, 20 ಮತ್ತು 22 ರಂದು ಮೂರು ಏಕದಿನ ಪಂದ್ಯಗಳ ಸರಣಿ ನಿಗದಿಯಾಗಿದೆ. ಆರು ವರ್ಷಗಳ ಬಳಿಕ ಭಾರತ ಜಿಂಬಾಬ್ವೆ ಪ್ರವಾಸ ಕೈಗೊಳ್ಳುತ್ತಿದೆ.