ETV Bharat / sports

ರಣಜಿ ಟ್ರೋಫಿ ಫೈನಲ್​-3ನೇ ದಿನ: ಮಧ್ಯಪ್ರದೇಶದ ಶುಭಂ-ಯಶ್​ ದುಬೆ ಶತಕದ ಸೊಗಸು

ಮಧ್ಯಪ್ರದೇಶ ತಂಡದ ಪರ ಶುಭಂ ಶರ್ಮಾ ಹಾಗೂ ಯಶ್​ ದುಬೆ ದ್ವಿಶತಕದ ಜೊತೆಯಾಟ ನೀಡಿದ್ದಲ್ಲದೇ, ವೈಯಕ್ತಿಕವಾಗಿಯೂ ಶತಕ ಸಿಡಿಸಿ ಮಿಂಚಿದರು.

yash-dubey-shubham-sharma-scores-a-century
ಮಧ್ಯಪ್ರದೇಶದ ಶುಭಂ-ಯಶ್​ ದುಬೆಗೆ ಶತಕದ ಸಂಭ್ರಮ
author img

By

Published : Jun 24, 2022, 4:18 PM IST

ಬೆಂಗಳೂರು: ರಣಜಿ ಟ್ರೋಫಿ ಫೈನಲ್​ ಪಂದ್ಯದಲ್ಲಿ ಮುಂಬೈ ವಿರುದ್ಧ ಮಧ್ಯಪ್ರದೇಶ ಆಟಗಾರರು ಭರ್ಜರಿ ಬ್ಯಾಟ್​ ಬೀಸುತ್ತಿದ್ದಾರೆ. ಪಂದ್ಯದ ಮೂರನೇ ದಿನವಾದ ಇಂದು ಶುಭಂ ಶರ್ಮಾ ಹಾಗೂ ಯಶ್​ ದುಬೆ ಶತಕ ಸಿಡಿಸಿ ಸಂಭ್ರಮಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ಮಧ್ಯೆ ಪಂದ್ಯ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್‌​ನಲ್ಲಿ ಮುಂಬೈ ಗಳಿಸಿದ್ದ 374 ರನ್​​ಗಳಿಗೆ ಪ್ರತಿಯಾಗಿ ಎಂಪಿ ಆಟಗಾರರು ಮಧ್ಯಾಹ್ನ 3.30ರ ವೇಳೆಗೆ ಕೇವಲ ಎರಡು ವಿಕೆಟ್​ ನಷ್ಟಕ್ಕೆ 335 ರನ್​ಗಳನ್ನು ಕಲೆ ಹಾಕಿ ಬಲಾಢ್ಯರಿಗೆ ತಕ್ಕ ತಿರುಗೇಟು ನೀಡುತ್ತಿದ್ದಾರೆ.

ನಿನ್ನೆಯಿಂದಲೂ ಮಧ್ಯಪ್ರದೇಶ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದ ಹಿಮಾಂಶು ಮಂತ್ರಿ 31 ರನ್​ ಗಳಿಸಿ ಔಟ್​ ಆಗಿದ್ದರು. ನಂತರ ಯಶ್​ ದುಬೆ ಜೊತೆಯಾಗಿದ್ದ ಶುಭಂ ಶರ್ಮಾ ಭರ್ಜರಿ ಬ್ಯಾಟಿಂಗ್‌ ಮಾಡಿ ರನ್‌ ಸೂರೆಗೈದರು. ಮಧ್ಯಾಹ್ನದ ಊಟದ ವಿರಾಮದ ವೇಳೆಗೆ ದುಬೆ ಶತಕ ಬಾರಿಸಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ ಶುಭಂ ಶರ್ಮಾ ಕೂಡಾ ಸೆಂಚುರಿ ಸಿಡಿಸಿದರು. ಈ ಮೂಲಕ ಇಬ್ಬರು ಆಟಗಾರರು ದ್ವಿಶತಕದ ಜೊತೆಯಾಟವನ್ನೂ ನೀಡಿದರು.

ಆದರೆ, ಈ ನಡುವೆ 116 ರನ್​ ಗಳಿಸಿದ್ದ ಶುಭಂ ಶರ್ಮಾ ಅವರು ಮೋಹಿತ್ ಅವಸ್ತಿ ಬೌಲಿಂಗ್​ನಲ್ಲಿ ಹಾರ್ದಿಕ್​ ತಮೋರಿ ಕೈಗೆ ಕ್ಯಾಚಿತ್ತು​ ಪೆವಿಲಿಯನ್ ಸೇರಿಕೊಂಡರು. ಒಟ್ಟಾರೆ 215 ಎಸೆತಗಳನ್ನು ಎದುರಿಸಿದ ಶುಭಂ ಶರ್ಮಾ 15 ಬೌಂಡರಿ​ ಹಾಗೂ ಒಂದು ಸಿಕ್ಸರ್‌​ನೊಂದಿಗೆ 116 ಬಾರಿಸಿದ್ದರು. ಶುಭಂ ಔಟಾದ ನಂತರ ಕ್ರೀಸ್​ಗೆ ಬಂದ ರಜತ್​ ಪಾಟಿದಾರ್​ ಕೂಡ ಉತ್ತಮವಾಗಿ ಬ್ಯಾಟ್​ ಬೀಸುತ್ತಿದ್ದಾರೆ. 61 ಎಸೆತಗಳಲ್ಲಿ 10 ಬೌಂಡರಿ​ಗಳೊಂದಿಗೆ 51 ರನ್​ ಸಿಡಿಸಿ ಆಟ ಮುಂದುವರೆಸಿದ್ದಾರೆ. ಯಶ್​ ದುಬೆ ಸಹ 129 ರನ್​ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಮುಂಬೈ ಪರ ತುಷಾರ್​ ದೇಶ​ಪಾಂಡೆ ಹಾಗೂ ಮೋಹಿತ್ ಅವಸ್ತಿ ತಲಾ 1 ವಿಕೆಟ್​ ಪಡೆದಿದ್ದಾರೆ. ಮೊದಲ ದಿನದಾಟದಲ್ಲಿ 5 ವಿಕೆಟ್​ ನಷ್ಟಕ್ಕೆ 248 ರನ್​ ಗಳಿಸಿದ್ದ ಮುಂಬೈ 2ನೇ ದಿನದಾಟ ಆರಂಭಿಸಿ ಬೃಹತ್​ ಮೊತ್ತ ಗಳಿಸುವ ಇರಾದೆಯಲ್ಲಿತ್ತು. ಆದರೆ, ಇದಕ್ಕೆ ಮಧ್ಯಪ್ರದೇಶ ಬೌಲರ್​ಗಳು ಕಡಿವಾಣ ಹಾಕಿದ್ದರಿಂದ ಮುಂಬೈ 374 ರನ್​ಗಳಿಗೆ ತನ್ನ ಇನ್ನಿಂಗ್ಸ್ ಮುಗಿಸಿತು.

ನಂತರ ತನ್ನ ಇನ್ನಿಂಗ್ಸ್‌ ಆರಂಭಿಸಿದ್ದ ಮಧ್ಯಪ್ರದೇಶ ಎರಡನೇ ದಿನದಂತ್ಯಕ್ಕೆ 1 ವಿಕೆಟ್​ ನಷ್ಟಕ್ಕೆ 123 ರನ್‌ಗಳನ್ನು ಗಳಿಸಿ ಸುಸ್ಥಿತಿಯಲ್ಲಿತ್ತು. ಮೂರನೇ ದಿನದಾಟದಲ್ಲೂ ಮಧ್ಯಪ್ರದೇಶ ಆಟಗಾರರು ಉತ್ತಮ ಬ್ಯಾಟಿಂಗ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ಪ್ರವಾಸದ ಮೊದಲ ಟಿ-20 ಪಂದ್ಯದಲ್ಲಿ ಗೆದ್ದ ಭಾರತದ ವನಿತೆಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.