ETV Bharat / technology

ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ: ಇಸ್ರೋ ಮಾಹಿತಿ

ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ ಮುಂದೂಡಲಾಗಿದೆ.

ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ: ಇಸ್ರೊ ಮಾಹಿತಿ
ಪ್ರೊಬಾ-3 ಮಿಷನ್ ಉಡಾವಣೆ ನಾಳೆಗೆ ಮುಂದೂಡಿಕೆ (IANS)
author img

By ETV Bharat Karnataka Team

Published : 10 hours ago

ಬೆಂಗಳೂರು: ಇಂದು ನಿಗದಿಯಾಗಿದ್ದ ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ (ಡಿಸೆಂಬರ್ 5ಕ್ಕೆ) ಮುಂದೂಡಲಾಗಿದೆ. ನಾಳೆ ಭಾರತೀಯ ಕಾಲಮಾನ 16:12ಕ್ಕೆ ಮಿಷನ್ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಾಮಾಜಿಕ ಮಾಧ್ಯಮ 'ಎಕ್ಸ್'​ನಲ್ಲಿ ಪೋಸ್ಟ್ ಮಾಡಿದೆ. ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದ್ದರಿಂದ ಮಿಷನ್ ಮುಂದೂಡಲಾಗಿದೆ.

ಉಡಾವಣೆಯ ನೇರಪ್ರಸಾರವನ್ನು ಇಲ್ಲಿ ನೋಡಿ: ನಿಖರವಾದ ಹಾರಾಟದ ಮೂಲಕ ಸೂರ್ಯನ ಕರೋನಾವನ್ನು ಅಧ್ಯಯನ ಮಾಡಲು ವಿನ್ಯಾಸಗೊಳಿಸಲಾದ ನವೀನ ಮಿಷನ್ ಪ್ರೋಬಾ -3 ಭಾರತದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್​ವಿ-ಎಕ್ಸ್ಎಲ್) ಮೂಲಕ ಇಸ್ರೋದ ಪರಿಣಿತ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಉಡಾವಣೆಯಾಗಲಿದೆ. ಈ ಮುನ್ನ 11:38 ಸಿಇಟಿ (10:38 ಜಿಎಂಟಿ, 16:08 ಭಾರತೀಯ ಕಾಲಮಾನ)ಕ್ಕೆ ಉಡಾವಣೆ ನಿಗದಿಯಾಗಿತ್ತು. ನಾಳಿನ ಉಡಾವಣೆಯು ಇಸ್ರೋದ ಯೂಟ್ಯೂಬ್ ಚಾನೆಲ್ ಮತ್ತು ಇಎಸ್ಎ ವೆಬ್ ಟಿವಿಯಲ್ಲಿ ನೇರಪ್ರಸಾರವಾಗಲಿದೆ.

ಪ್ರೊಬಾ-3 ಮಿಷನ್ ಉದ್ದೇಶ: ಕೊರೊನೊಗ್ರಾಫ್ ಮತ್ತು ಅಕ್ಯುಲ್ಟರ್ ಬಾಹ್ಯಾಕಾಶ ನೌಕೆಗಳೆರಡರ ನಿಖರ ರಚನೆಯ ಹಾರಾಟವನ್ನು ಪ್ರದರ್ಶಿಸುವುದು ಈ ಬಾಹ್ಯಾಕಾಶ ಕಾರ್ಯಾಚರಣೆಯ ಉದ್ದೇಶವಾಗಿದೆ. ಉಡಾವಣೆಗೊಂಡ ಉಪಗ್ರಹವು ಬಾಹ್ಯಾಕಾಶದಲ್ಲಿ ದೀರ್ಘಕಾಲದವರೆಗೆ ಇರುವಂತೆ ಮಾಡಲು ನಿಖರವಾದ ನಿಯಂತ್ರಣ ತಂತ್ರಗಳು ಮತ್ತು ಅಳತೆಗಳನ್ನು ಬಳಸಲಾಗುತ್ತದೆ.

ಸೌರ ಬಿರುಗಾಳಿಯ ಅಧ್ಯಯನ: ಕೊರೊನಾಗ್ರಾಫ್ ಮತ್ತು ಅಕ್ಯುಲ್ಟರ್ ಇವೆರಡೂ ವಿಶೇಷ ಸಾಧನಗಳಾಗಿದ್ದು, ಸೌರ ಕೊರೊನೊಗ್ರಾಫ್ ಇದು ಕರೋನಾ ಎಂದು ಕರೆಯಲ್ಪಡುವ ಸೂರ್ಯನ ಹೊರಭಾಗವನ್ನು ಅಧ್ಯಯನ ಮಾಡಲಿದೆ. ಕರೋನಾದ ತಾಪಮಾನವು 2 ಮಿಲಿಯನ್ ಡಿಗ್ರಿ ಫ್ಯಾರನ್ ಹೀಟ್ ಆಗಿರುವುದರಿಂದ ಈ ಭಾಗವನ್ನು ಸೂಕ್ಷ್ಮವಾಗಿ ಗಮನಿಸುವುದು ಕಷ್ಟದ ಕೆಲಸವಾಗಿದೆ. ಕರೋನಾದಿಂದ ಉಂಟಾಗುವ ಸೌರ ಬಿರುಗಾಳಿಗಳು ಮತ್ತು ಮಾರುತಗಳು ಭೂಮಿಯ ಮೇಲಿನ ನೌಕಾಯಾನ, ವಿದ್ಯುತ್ ಗ್ರಿಡ್​ಗಳು ಮತ್ತು ಉಪಗ್ರಹ ಸಂವಹನಗಳನ್ನು ಅಡ್ಡಿಪಡಿಸುವುದರಿಂದ ಈ ಬಗ್ಗೆ ಸೂರ್ಯನ ಕರೋನಾದ ಅಧ್ಯಯನ ಮಾಡುವುದು ಮಹತ್ವದ್ದಾಗಿದೆ.

ಗ್ರಹಣದ ಸನ್ನಿವೇಶ ಸೃಷ್ಟಿ: ಕೊರೊನೊಗ್ರಾಫ್ ಮತ್ತು ಅಕ್ಯುಲ್ಟರ್ ಒಟ್ಟಾಗಿ ಒಂದೇ ಉಪಗ್ರಹವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸೂರ್ಯಗ್ರಹಣದ ಸನ್ನಿವೇಶವನ್ನು ಸೃಷ್ಟಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ನೈಸರ್ಗಿಕ ಗ್ರಹಣ 10 ನಿಮಿಷದ ಅವಧಿಯದ್ದಾಗಿರುತ್ತದೆ. ಇದಕ್ಕೆ ಹೋಲಿಸಿದರೆ ಪ್ರೊಬಾ ಮಿಷನ್​ನ ಗ್ರಹಣವು 6 ಗಂಟೆಗಳ ಕಾಲ ಇರಲಿದೆ. ಯಶಸ್ವಿ ಉಡಾವಣೆಯಾದರೆ ಪ್ರೋಬಾ -3 ವಿಶ್ವದ ಮೊದಲ 'ನಿಖರ ರಚನೆ ಹಾರಾಟ' ಉಪಗ್ರಹವಾಗಲಿದೆ.

ಇದನ್ನೂ ಓದಿ: ಹುಷಾರ್​​​​​​​​​​​​​.. ಈ ಸಂಖ್ಯೆಗಳಿಂದ ನಿಮಗೆ ಕರೆಗಳು ಬರುತ್ತಿವೆಯಾ?: ಹಾಗಾದರೆ ಈ ಕರೆಗಳನ್ನು ಎತ್ತಲೇಬೇಡಿ! ಏಕೆ ಅಂತೀರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.