ಲಂಡನ್: ನ್ಯೂಜಿಲ್ಯಾಂಡ್ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ ಬಾರಿಸಿದ್ದಾರೆ. ನಾನು ಉತ್ತಮವಾಗಿ ಆಡಬೇಕು ಎಂದುಕೊಂಡಿದ್ದೆ ಅಷ್ಟೇ, ಶತಕ ಬಾರಿಸುತ್ತೇನೆ ಎಂಬ ಆಲೋಚನೆ ಇರಲಿಲ್ಲ ಎಂದು ಡೆವೊನ್ ಕಾನ್ವೇ ಹೇಳಿದ್ದಾರೆ.
"ಕ್ರಿಕೆಟ್ ವೆಲ್ಲಿಂಗ್ಟನ್ ಮತ್ತು ಬ್ಲ್ಯಾಕ್ ಕ್ಯಾಪ್ಸ್ ನನಗೆ ಆಡೋದಕ್ಕೆ ಅವಕಾಶ ನೀಡಿದ್ದು, ತುಂಬಾ ಸಂತೋಷ ತಂದಿದೆ. ನಾನು ಎಂದಿಗೂ ಕೃತಜ್ಞರಾಗಿರುತ್ತೇನೆ ಎಂದಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಜೊತೆ ತಾವಾಡಿದ ಮಾತುಗಳನ್ನು ಡೆವೊನ್ ಕಾನ್ವೇ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ದಿನದ ಆಟ ಮುಗಿದ ನಂತರ ಡ್ರೆಸ್ಸಿಂಗ್ ರೂಮ್ಗೆ ಹಿಂತಿರುಗಿದಾಗ ನಾಯಕ ಕೇನ್ ವಿಲಿಯಮ್ಸನ್ ಅನೇಕ ವಿಷಯಗಳನ್ನು ಹಂಚಿಕೊಂಡರಂತೆ.
"ನಾವು ಒಂದೆರಡು ದಿನಗಳ ಹಿಂದೆ ಲಾರ್ಡ್ಸ್ಗೆ ಬಂದಾಗ ಅಲ್ಲಿರುವ ಎಲ್ಲ ಕ್ರಿಕೆಟ್ ದಂತಕಥೆಗಳ ಫೋಟೋ ಮತ್ತು ಹೆಸರುಗಳನ್ನು ನೋಡುವ ಅವಕಾಶ ಪಡೆದುಕೊಂಡೆವು. ಕೇನ್ ಹೆಸರು ಸಹ ಆ ಬೋರ್ಡ್ನಲ್ಲಿ ಇದ್ದ ಕಾರಣ (2015 ರಲ್ಲಿ ಲಾರ್ಡ್ಸ್ನಲ್ಲಿ ವಿಲಿಯಮ್ಸನ್ ಶತಕ) ನಿಮ್ಮ ಹೆಸರನ್ನು ನೋಡಲು ಏನೆನಿಸುತ್ತದೆ ಎಂದು ಕೇಳಿದ್ದೆ. ಆ ಪ್ರಶ್ನೆಗೆ ನಾನು ಶತಕ ಬಾರಿಸಿ ಡ್ರೆಸ್ಸಿಂಗ್ ರೂಮ್ಗೆ ಹಿಂತಿರುಗಿದಾಗ ಉತ್ತರಿಸಿದ ವಿಲಿಯಮ್ಸನ್, ನಿನಗೆ ಈಗ ಏನೂ ಅನಿಸುತ್ತಿದೆಯೋ ನನಗೂ ಹಾಗೇ ಅನಿಸಿತ್ತು. ಆ ಬೋರ್ಡ್ನಲ್ಲಿ ನನ್ನ ಹೆಸರಿರುವುದು ನನಗೆ ಹೆಮ್ಮೆಯ ವಿಷಯ ಎಂದರಂತೆ.
ಲಾರ್ಡ್ಸ್ನಲ್ಲಿ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನು ಕಾನ್ವೇ ನಿನ್ನೆ ಬ್ರೇಕ್ ಮಾಡಿದ್ದರು.
ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ ಭಾರತದ ಪುರುಷ & ಮಹಿಳಾ ಕ್ರಿಕೆಟ್ ತಂಡಗಳು