ETV Bharat / sports

ಅರ್ಥಪೂರ್ಣ ದೀಪಾವಳಿ ಆಚರಿಸಲು ಟಿಪ್ಸ್ ಕೊಡ್ತೇನೆ ಎಂದು ಟ್ರೋಲ್​ಗೆ ತುತ್ತಾದ ಕೊಹ್ಲಿ

ದೀಪಾವಳಿ ಹತ್ತಿರ ಬರುತ್ತಿದ್ದು, ಯಾವುದೇ ರೀತಿಯ ಪ್ರಾಣಿ, ಪಕ್ಷಿಗಳು ಮತ್ತು ಪರಿಸರಕ್ಕೆ ಹಾನಿಯಾಗದಂತೆ ಅರ್ಥಪೂರ್ಣವಾಗಿ ಆಚರಿಸಲು ಕೆಲವು ಟಿಪ್ಸ್​ಗಳನ್ನು ನೀಡುತ್ತೇನೆ ಎಂದು ಕೊಹ್ಲಿ ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು.

ಟ್ರೋಲ್​ಗೆ ತುತ್ತಾದ ಕೊಹ್ಲಿ
author img

By

Published : Oct 18, 2021, 5:58 PM IST

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅರ್ಥಪೂರ್ಣ ದೀಪಾವಳಿ ಆಚರಣೆ ಮಾಡುವುದಕ್ಕೆ ಟಿಪ್ಸ್ ಕೊಡುತ್ತೇನೆ ಎಂದು ವಿಡಿಯೋ ಮಾಡಿ ಶೇರ್​ ಮಾಡಿಕೊಂಡಿದ್ದರು. ಆದರೆ, ಈ ಹೇಳಿಕೆಯಿಂದ ಭಾರತೀಯ ನಾಯಕ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಟೀಕೆಯನ್ನು ಎದುರಿಸುವಂತಾಗಿದೆ.

ದೀಪಾವಳಿ ಹತ್ತಿರ ಬರುತ್ತಿದ್ದು, ಯಾವುದೇ ರೀತಿಯ ಪ್ರಾಣಿ, ಪಕ್ಷಿಗಳು ಮತ್ತು ಪರಿಸರಕ್ಕೆ ಹಾನಿಯಾಗದಂತೆ ಅರ್ಥಪೂರ್ಣವಾಗಿ ಆಚರಿಸಲು ಕೆಲವು ಟಿಪ್ಸ್​ಗಳನ್ನು ನೀಡುತ್ತೇನೆ ಎಂದು ಕೊಹ್ಲಿ ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು.

ಇಡೀ ವಿಶ್ವಕ್ಕೆ ಮತ್ತು ನಮಗೆಲ್ಲ ಇದು ಕಠಿಣ ವರ್ಷವಾಗಿದೆ. ಅದರಲ್ಲೂ 2ನೇ ಅಲೆಯ ಕೋವಿಡ್​-19 2021ಕ್ಕೆ ಭಾರಿ ಹೊಡೆತ ನೀಡಿದೆ. ಹಬ್ಬದ ಋತುವಿನಲ್ಲಿ ನಾವು ದೀಪಾವಳಿಗೆ ಸಿದ್ಧರಾಗುತ್ತಿದ್ದೇವೆ.

ಅದಕ್ಕಾಗಿ ನೀವು ಮತ್ತು ನಿಮ್ಮ ಪ್ರೀತಿ ಪಾತ್ರರಾದ ಕುಟುಂಬಸ್ಥರ ಜೊತೆಗೆ ಅರ್ಥಪೂರ್ಣ ದೀಪಾವಳಿಯನ್ನ ಆಚರಿಸಲು ನಾನು ಕೆಲವು ಟಿಪ್ಸ್​ಗಳನ್ನು ನೀಡುತ್ತೇನೆ, ಅದಕ್ಕಾಗಿ ತಮ್ಮ ಪೇಜ್​ ಎದುರು ನೋಡುತ್ತಿರಿ ಎಂದು ಕೊಹ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು.

ಸಾಮಾಜಿಕ ಜಾಲಾತಾಣದಲ್ಲಿ ಕೋಟ್ಯಂತರ ಹಿಂಬಾಲಕರನ್ನು ಹೊಂದಿರುವ ಕೊಹ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ತೀಕ್ಷ್ಣವಾದ ಟೀಕೆಗೆ ಗುರಿಯಾಗಿದ್ದಾರೆ.

ಒಂದು ಕ್ಷೇತ್ರದಲ್ಲಿ ಪರಿಣಿತರಾಗಿರುವವರೂ ಬೇರೆ ಕ್ಷೇತ್ರಕ್ಕೆ ಬದಲಾಗಬಾರದು, ಯಾವುದೇ ವಿಷಯಗಳನ್ನು ಅದರಿಂದಾಗುವ ಸಮಸ್ಯೆಯ ತಿಳುವಳಿಕೆಯಿಲ್ಲದೇ ಕೈ ಹಾಕಿದರೆ ಅಪಾಯವನ್ನು ಎದುರಿಸಬಹುದು ಎಂದು ಲೇಖಕರೊಬ್ಬರು ತಮ್ಮ ಕೊಹ್ಲಿಯನ್ನು ಟೀಕಿಸಿದ್ದಾರೆ.

ಇನ್ನು ಕೆಲವು ಅಭಿಮಾನಿಗಳು ನೀವು ಧೋನಿಯಿಂದ ಟಿಪ್ಸ್ ಪಡೆದು ಐಸಿಸಿ ಟ್ರೋಫಿ ಹೇಗೆ ಗೆಲ್ಲುವುದ ಎಂದು ತಿಳಿದುಕೊಳ್ಳಿ ಎಂದು, ಮತ್ತೊಬ್ಬ ನೀವು ದೀಪಾವಳಿ ಆಚರಿಸುವುದಕ್ಕೆ ಟಿಪ್ಸ್​ ಕೊಡುವುದಾದರೆ, ನಾನು ನಿಮಗೆ ಐಪಿಎಲ್ ಮತ್ತು ವಿಶ್ವಕಪ್​ ಗೆಲ್ಲುವುದಕ್ಕೆ ಟಿಪ್ಸ್ ಕೊಡುತ್ತೇನೆ ಎಂದು ಕೊಹ್ಲಿಯನ್ನು ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನು ಓದಿ:ಟಿ-20 ವಿಶ್ವಕಪ್: ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದು ದಾಖಲೆ ಬರೆದ ಐರ್ಲೆಂಡ್ ಬೌಲರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.