ETV Bharat / bharat

ದೇಶಾದ್ಯಂತ ಹೊಸ ಶಿಕ್ಷಣ ನೀತಿ ಜಾರಿಗೆ ಎಲ್ಲ ಕ್ರಮ: ಯುಜಿಸಿ ಅಧ್ಯಕ್ಷ ಎಂ ಜಗದೀಶ

ಎಲ್ಲ ಕಾಲೇಜುಗಳಲ್ಲಿ ಸಾರ್ವತ್ರಿಕ ಸೆಮಿಸ್ಟರ್ ಪದ್ಧತಿ ಜಾರಿಗೆ ತರಲಾಗುವುದು ಎಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗ(UGC)ದ ಅಧ್ಯಕ್ಷ ಡಾ.ಎಂ.ಜಗದೀಶ್ ಕುಮಾರ್ ಹೇಳಿದ್ದಾರೆ.

indore-devi-ahilya-university-ugc-chairman-semester-system
ದೇಶಾದ್ಯಂತ ಹೊಸ ಶಿಕ್ಷಣ ನೀತಿ ಜಾರಿಗೆ ಎಲ್ಲ ಕ್ರಮ: ಯುಜಿಸಿ ಅಧ್ಯಕ್ಷ ಎಂ ಜಗದೀಶ (ETV bharat)
author img

By ETV Bharat Karnataka Team

Published : 12 hours ago

ಇಂದೋರ್, ಮಧ್ಯಪ್ರದೇಶ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು 2035 ರ ವೇಳೆಗೆ ದೇಶದ ಶೇಕಡಾ 50 ರಷ್ಟು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಜಾರಿಗೊಳಿಸುವ ಗುರಿ ಹೊಂದಿದೆ ಎಂದು ಯುಜಿಸಿ ಅಧ್ಯಕ್ಷ ಡಾ. ಎಂ ಜಗದೀಶ್ ಹೇಳಿದ್ದಾರೆ.

ಎನ್ಇಪಿ ಅಡಿ ವಾರ್ಷಿಕ ಪರೀಕ್ಷಾ ವ್ಯವಸ್ಥೆ ರದ್ದುಪಡಿಸುವುದು ಹಾಗೂ ಸಾರ್ವತ್ರಿಕ ಸೆಮಿಸ್ಟರ್ ವ್ಯವಸ್ಥೆಯನ್ನು ಬದಲಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಡಾ.ಎಂ.ಜಗದೀಶ್ ಕುಮಾರ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಸ್ವಾಯತ್ತ ಕಾಲೇಜುಗಳಲ್ಲಿ ಎನ್‌ಇಪಿ ಜಾರಿಯಾಗಬೇಕಿದೆ: ಇಂದೋರ್‌ನ ದೇವಿ ಅಹಲ್ಯಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸೋಮವಾರ ವಲಯ ಸಮ್ಮೇಳನ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಭಾಗವಹಿಸಲು ಯುಜಿಸಿ ಅಧ್ಯಕ್ಷ ಡಾ.ಎಂ.ಜಗದೀಶ್ ಕುಮಾರ್ ಇಂದೋರ್ ಗೆ ಬಂದಿದ್ದರು. ಕಾರ್ಯಕ್ರಮದಲ್ಲಿ ಅವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದರು. ಎನ್‌ಇಪಿ ವಾರ್ಷಿಕ ಪದ್ಧತಿಯ ಬದಲು ಸೆಮಿಸ್ಟರ್ ಪದ್ಧತಿಯನ್ನು ಜಾರಿಗೆ ತರಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

2035 ರ ವೇಳೆಗೆ ಶೇ 50ರಷ್ಟು ಕಾಲೇಜುಗಳಲ್ಲಿ NEP ಜಾರಿಯಾಗಬೇಕು: ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಡಾ.ಎಂ.ಜಗದೀಶ್ ಕುಮಾರ್, ''2035ರ ವೇಳೆಗೆ ದೇಶದ ಶೇ.50ರಷ್ಟು ಶಾಲಾ-ಕಾಲೇಜುಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದು ಯುಜಿಸಿಯ ಗುರಿಯಾಗಿದೆ ಎಂದು ಅವರು ತಿಳಿಸಿದರು. ಪ್ರಸ್ತುತ ಈ ನೀತಿ ಕೇವಲ 21 ಪ್ರತಿಶತ ಕಾಲೇಜುಗಳಲ್ಲಿ ಮಾತ್ರ ಅನುಷ್ಟಾನಗೊಂಡಿದೆ. ಎನ್‌ಇಪಿಯನ್ನು ಇನ್ನೂ ಅನೇಕ ವಿಶ್ವವಿದ್ಯಾಲಯಗಳಲ್ಲಿ ಅಳವಡಿಸಲಾಗಿಲ್ಲ. ಆ ಕಾಲೇಜುಗಳಲ್ಲಿ ಎನ್‌ಇಪಿಯನ್ನು ಆದಷ್ಟು ಬೇಗ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಒನ್ ನೇಷನ್ ಒನ್ ಸಬ್ ಸ್ಕ್ರಿಪ್ಷನ್: ಒನ್ ನೇಷನ್ ಒನ್ ಸಬ್ ಸ್ಕ್ರಿಪ್ಷನ್ ಸ್ಕೀಮ್ ಬಗ್ಗೆ ಮಾತನಾಡಿದ ಯುಜಿಸಿ ಅಧ್ಯಕ್ಷ ಡಾ.ಜಗದೀಶ್ ಕುಮಾರ್, ಇದಕ್ಕೂ ದೊಡ್ಡ ಕೊಡುಗೆ ಇದೆ. ಇದೇ ರೀತಿಯ ಕೋರ್ಸ್ ಗಳಿಂದ ದೇಶದಾದ್ಯಂತ ಪುಸ್ತಕಗಳು ಮತ್ತು ಅಧ್ಯಯನ ಸಾಮಗ್ರಿಗಳು ಸುಲಭವಾಗಿ ಲಭ್ಯವಾಗಲಿವೆ. ಇದಕ್ಕಾಗಿ ಕೇಂದ್ರ ಸರ್ಕಾರ ತನ್ನ ನೀತಿಯನ್ನು ರೂಪಿಸುತ್ತಿದೆ. ಇದಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಲಿದೆ ಎಂದರು.

ಇದನ್ನು ಓದಿ: ಕಾಶ್ಮೀರದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ; ಓರ್ವ ಭಯೋತ್ಪಾದಕನ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.