ETV Bharat / bharat

ತೆಲಂಗಾಣ, ಆಂಧ್ರದಲ್ಲಿ ಲಘು ಭೂಕಂಪ: ರಿಕ್ಟರ್​​​​ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲು, ಹೆದರಿ ಮನೆಯಿಂದ ಹೊರ ಬಂದ ಜನ

ತೆಲಂಗಾಣದಲ್ಲಿ ಭೂಕಂಪನದ ವರದಿಯಾಗಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ ಲಘು ಕಂಪನವಾಗಿದೆ- ಭದ್ರಾದ್ರಿ ಕೊತಗುಡೆಂನಲ್ಲಿ ಎರಡು ಸೆಕೆಂಡುಗಳ ಕಾಲ ಭೂಮಿ ನಡುಗಿದೆ

earthquake-recorded-in-telangana-and-andhra-pradesh-states
ತೆಲುಗು ರಾಜ್ಯಗಳಲ್ಲಿ ಭೂಕಂಪ: ಹೆದರಿ ಮನೆಯಿಂದ ಹೊರ ಬಂದ ಜನ (ETV Bharat)
author img

By ETV Bharat Karnataka Team

Published : 12 hours ago

ಹೈದರಾಬಾದ್​, ತೆಲಂಗಾಣ: ರಂಗಾ ರೆಡ್ಡಿ ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿರುವ ವರದಿಯಾಗಿದೆ. 2 ಸೆಕೆಂಡುಗಳ ಕಾಲ ಭೂಮಿ ಅಲುಗಾಡಿರುವುದು ಅನುಭವಕ್ಕೆ ಬಂದಿದೆ.

ತೆಲಂಗಾಣದ ಮುಲುಗುವಿನಲ್ಲಿ ಬುಧವಾರ ಬೆಳಗ್ಗೆ 7:27ಕ್ಕೆ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಮುಲುಗು ಹೈದರಾಬಾದ್‌ನಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿದೆ. ಸದ್ಯಕ್ಕೆ ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ, ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಭದ್ರಾದ್ರಿ ಕೊತಗುಡೆಂ ಜಿಲ್ಲೆಯಲ್ಲಿ ಲಘು ಭೂಕಂಪ ಆಗಿದೆ ಎಂದು ಸ್ಥಳೀಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಭದ್ರಾದ್ರಿ ಕೊತಗುಡೆಂನಲ್ಲಿ 2 ಸೆಕೆಂಡ್‌ಗಳ ಕಾಲ ಭೂಮಿ ಸ್ವಲ್ಪ ಕಂಪಿಸಿದೆ.

ವಿಜಯವಾಡದಲ್ಲೂ ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ವರದಿಯಾಗಿದೆ. ಜಗ್ಗಯ್ಯಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಭೂಮಿ ಕಂಪಿಸುತ್ತಿದ್ದಂತೆ ಭಯಭೀತರಾದ ಜನರು ಮನೆ, ಅಪಾರ್ಟ್‌ಮೆಂಟ್‌ಗಳಿಂದ ಹೊರಗೆ ಓಡಿ ಬಂದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ಲಘು ಭೂಕಂಪ ಆಗಿರುವ ಸುದ್ದಿ ಇದೆ. ಅಷ್ಟೇ ಅಲ್ಲ ತೆಲಂಗಾಣದ ವರಂಗಲ್ ಮತ್ತು ಜಂಟಿ ಖಮ್ಮಂ ಜಿಲ್ಲೆಗಳಲ್ಲೂ ಭೂಮಿ ನಡುಗಿದ ಅನುಭವವಾಗಿದೆ.

ಇದನ್ನು ಓದಿ: ದೆಹಲಿ - ಕಾಶ್ಮೀರ ನಡುವೆ ನೇರ ರೈಲು ಸೇವೆಗೆ ಕ್ಷಣಗಣನೆ: ಸಾರಿಗೆ, ವ್ಯಾಪಾರಿ ವರ್ತಕರಲ್ಲಿ ಹೆಚ್ಚಿದ ಆತಂಕ! ಕಾರಣ?

ಛತ್ತೀಸ್​​​ಗಢದಲ್ಲೂ ಕಂಪಿಸಿದ ಭೂಮಿ: ಆಂಧ್ರ , ತೆಲಂಗಾಣ ಅಷ್ಟೇ ಅಲ್ಲ ಛತ್ತೀಸ್​ಗಢದ ಬಸ್ತಾರ್‌ನಲ್ಲಿ ಭೂಕಂಪನದ ಅನುಭವವಾಗಿದೆ. ಬಸ್ತಾರ್ ವಿಭಾಗದ ಬಿಜಾಪುರ, ಸುಕ್ಮಾ, ದಾಂತೇವಾಡ ಮತ್ತು ಬಸ್ತಾರ್ ಜಿಲ್ಲೆಗಳಲ್ಲಿ ಕಂಪನವಾಗಿದೆ. ಬೆಳಗ್ಗೆ 7.27ರಿಂದ ವಿವಿಧ ಜಿಲ್ಲೆಗಳಲ್ಲಿ ಈ ಕಂಪನ ಆಗಿದೆ. ಭೂಕಂಪದ ಸಿಸಿಟಿವಿ ವಿಡಿಯೋ ಕೂಡ ಹೊರಬಿದ್ದಿದೆ. ಈ ವಿಡಿಯೋದಲ್ಲಿ ಭೂಮಿ ನಡುಗುತ್ತಿರುವುದನ್ನು ಕಾಣಬಹುದು. ಬೆಳಗ್ಗೆ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರು ಮತ್ತು ಈ ಸಮಯದಲ್ಲಿ ಜನರು ಭೂಕಂಪದ ಅನುಭವ ಪಡೆದರು. ಈ ವರ್ಷದ ಏಪ್ರಿಲ್ ತಿಂಗಳಲ್ಲೂ ಬಸ್ತಾರ್‌ನಲ್ಲಿ ಭೂಕಂಪದ ಅನುಭವವಾಗಿತ್ತು . ಜಗದಲ್‌ಪುರದಿಂದ ಈಶಾನ್ಯಕ್ಕೆ 2 ಕಿಲೋಮೀಟರ್ ದೂರದಲ್ಲಿ 2.6 ತೀವ್ರತೆಯ ಭೂಕಂಪ ಸಂಭವಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.