ETV Bharat / sports

ಐರ್ಲೆಂಡ್​ ಟಿ20 ಸರಣಿಗೆ ತೆರಳಿದ ಭಾರತ ತಂಡ.. ಬುಮ್ರಾ ನಾಯಕತ್ವದಲ್ಲಿ ಐಪಿಎಲ್​ ಸ್ಟಾರ್ಸ್ ಪಡೆ - Asian Games

Ireland T20I series: ಆಗಸ್ಟ್​ 18 ರಿಂದ ಆರಂಭ ಆಗಲಿರುವ ಐರ್ಲೆಂಡ್​ ವಿರುದ್ಧದ 3 ಟಿ20 ಪಂದ್ಯಗಳ ಸರಣಿಗೆ ಭಾರತ ತಂಡ ಇಂದು ಪ್ರವಾಸ ಬೆಳೆಸಿದೆ.

Jasprit Bumrah led India squad leaves for Ireland T20Is series
EJasprit Bumrah led India squad leaves for Ireland T20Is series
author img

By

Published : Aug 15, 2023, 4:35 PM IST

ಹೈದರಾಬಾದ್​: ವೆಸ್ಟ್​ ಇಂಡೀಸ್​ ಪ್ರವಾಸದ ನಂತರ ಟಿ20 ಸ್ಟಾರ್​ಗಳ ಪಡೆ ಐರ್ಲೆಂಡ್​ಗೆ ಇಂದು ತೆರಳಿದೆ. ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಜಸ್ಪ್ರಿತ್​ ಬುಮ್ರಾ ಅವರ ನಾಯಕತ್ವದಲ್ಲಿ ತಂಡ ಐರ್ಲೆಂಡ್​ನಲ್ಲಿ ಪಂದ್ಯಗಳನ್ನು ಆಡಲಿದೆ. ಬಿಸಿಸಿಐ ಆಟಗಾರರು ಐರ್ಲೆಂಡ್​ ಪ್ರವಾಸ ಬೆಳೆಸಿರುವುದನ್ನು ಎಕ್ಸ್​ ಆ್ಯಪ್​ ಖಾತೆಯಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಬುಮ್ರಾ, ರುತುರಾಜ್ ಗಾಯಕ್ವಾಡ್​, ಪ್ರಸಿದ್ಧ ಕೃಷ್ಣ, ರಿಂಕು ಸಿಂಗ್ ಮತ್ತು ಶಿವಂ ದುಬೆ ಕಾಣಿಸಿಕೊಂಡಿದ್ದಾರೆ.

ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಟಿ20 ಪಂದ್ಯಗಳು ಡಬ್ಲಿನ್‌ನ ಮಲಾಹೈಡ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಆಗಸ್ಟ್ 18, 20 ಮತ್ತು 23 ರಂದು ನಡೆಯಲಿವೆ. ಜೂನ್ 2022 ರಲ್ಲಿ ಭಾರತ ಮತ್ತು ಐರ್ಲೆಂಡ್ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದವು. ಇದರಲ್ಲಿ ಭಾರತ 2-0 ಅಂತರದಲ್ಲಿ ಸರಣಿಯನ್ನು ಗೆದ್ದರು.

ಇಬ್ಬರು ಗಾಯಾಳುಗಳ ಕಮ್​ಬ್ಯಾಕ್​: 2022 ರಲ್ಲಿ ಇಂಗ್ಲೆಂಡ್ ವಿರುದ್ಧ ಜಸ್ಪ್ರಿತ್​ ಬುಮ್ರಾ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ನಂತರ ಬೆನ್ನು ನೋವಿನ ಸಮಸ್ಯೆಯಿಂದ ಅವರು ವೈದ್ಯಕೀಯ ಚಿಕಿತ್ಸೆಗೆ ಒಳಗಾದರು. ಸುಮಾರು ಒಂದು ವರ್ಷದ ನಂತರ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡು ತಂಡಕ್ಕೆ ಸೇರಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ತಂಡ ಏಷ್ಯಾಕಪ್​ ಮತ್ತು ಏಕದಿನ ವಿಶ್ವಕಪ್​ ಆಡುತ್ತಿರುವ ಕಾರಣ ಬುಮ್ರಾ ಅವರ ಹಿಂದಿರುಗುವಿಕೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಭಾರತ ತಂಡಕ್ಕೆ ಆಯ್ಕೆ ಆಗಿ 14 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿ 25 ವಿಕೆಟ್​ ಕಬಳಿಸಿದ್ದ ಪ್ರಸಿದ್ಧ ಕೃಷ್ಣ ಗಾಯಕ್ಕೆ ತುತ್ತಾಗಿದ್ದರು. ಅವರು ಸಹ ಚೇತರಿಸಿಕೊಂಡಿದ್ದು, ಮತ್ತೆ ತಂಡಕ್ಕೆ ಆಯ್ಕೆ ಆಗಿದ್ದಾರೆ. ಮುಂದಿನ ಮೂರು ತಿಂಗಳು ಭಾರತ ಆಡಲಿರುವ ಎರಡು ಮಹತ್ವದ ಕಪ್​ಗಳಿಗೆ ಕೃಷ್ಣ ಅವರ ಮರಳುವಿಕೆಯೂ ಮುಖ್ಯವಾಗಿದೆ. ಅದರ ಜೊತೆಗೆ ಟಿ20 ಪಾದಾರ್ಪಣೆಗೂ ಕನ್ನಡಿಗ ಪ್ರಸಿದ್ಧ ಕೃಷ್ಣ ಎದುರು ನೋಡುತ್ತಿದ್ದಾರೆ.

ನಾಲ್ವರಿಗೆ ಪಾದಾರ್ಪಣೆಯ ಸರಣಿ: ಐಪಿಎಲ್​ನಲ್ಲಿ ಐದು ಸಿಕ್ಸ್​ ಬಾರಿಸಿ ಕೆಕೆಆರ್​ಗೆ ವಿಜಯ ತಂದುಕೊಟ್ಟ ಆಟಗಾರ ರಿಂಕು ಸಿಂಗ್​, ದೇಶೀಕ್ರಿಕೆಟ್​ನ ಅದ್ಭುತ ಪ್ರತಿಭೆ ಜಿತೇಶ್​ ಶರ್ಮಾ, ಆಲ್​ರೌಂಡರ್​ ಶಹಬಾಜ್ ಅಹ್ಮದ್ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಈ ಸರಣಿಯಲ್ಲಿ ಪಾದಾರ್ಪಣೆಗೆ ಎದರು ನೋಡುತ್ತಿದ್ದಾರೆ. ಮೂರು ಟಿ20 ಪಂದ್ಯದಲ್ಲಿ ಯಾರಿಗೆಲ್ಲಾ ಆಡುವ ಅವಕಾಶ ಸಿಗುತ್ತದೆ ಎಂಬುದು ಕಾದುನೋಡಬೇಕಿದೆ.

ಯುವ ಪ್ರತಿಭೆಗಳ ತಂಡ: ನಾಯಕ ಬುಮ್ರಾ 60, ವಾಷಿಂಗ್ಟನ್​ ಸುಂದರ್​ 35, ಅರ್ಷದೀಪ್​ ಸಿಂಗ್​ 31 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅದು ಬಿಟ್ಟರೆ ಸಂಜು ಸ್ಯಾಮ್ಸನ್​ 22 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇವರು ತಂಡದ ಅನುಭವಿ ಆಟಗಾರರು ಮಿಕ್ಕವರಲ್ಲಿ 15ಕ್ಕಿಂತ ಕಡಿಮೆ ಆಟ ಆಡಿರುವವರೇ ತಂಡದಲ್ಲಿದ್ದಾರೆ. ತಿಲಕ್​ ವರ್ಮಾ, ಜೈಸ್ವಾಲ್ ಮತ್ತು ಮುಖೇಶ್​ ಕುಮಾರ್​ ಕಳೆದ ವೆಸ್ಟ್​ ಇಂಡೀಸ್​ ಸರಣಿಯಲ್ಲಿ ಪಾದಾರ್ಪಣೆ ಮಾಡಿದವರು.

ಭಾರತ ತಂಡ ಇಂತಿದೆ; ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಶಿವಂ ದುಬೆ, ಶಹಬಾಜ್ ಅಹ್ಮದ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೆಶ್ ಕುಮಾರ್

ಇದನ್ನೂ ಓದಿ: Wanindu Hasaranga: ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಶ್ರೀಲಂಕಾದ ವನಿಂದು ಹಸರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.