ETV Bharat / sports

ಐಪಿಎಲ್​ 2021: ಅರುಣ್​ ಜೇಟ್ಲಿ ಮೈದಾನದಲ್ಲಿ ಮುಂಬೈ ವಿರುದ್ಧ ಕಾದಾಟಕ್ಕೆ ರಾಜಸ್ಥಾನ ಸಜ್ಜು

ಹಾಲಿ ಚಾಂಪಿಯನ್ಸ್​ ಮುಂಬೈ ವಿರುದ್ಧದ ಸೆಣಸಾಟಕ್ಕೆ ರಾಜಸ್ಥಾನ ರಾಯಲ್ಸ್​ ತಂಡ ಸಜ್ಜಾಗಿದ್ದು, ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ಇಂದು ಮಧ್ಯಾಹ್ನ ಪಂದ್ಯ ನಡೆಯಲಿದೆ.

MI vs RR  MI vs RR Preview  Preview  Mumbai Indians  Rajasthan Royals  ಮುಂಬೈ ವಿರುದ್ಧ ಕಾದಾಟಕ್ಕೆ ರಾಜಸ್ಥಾನ ಸಜ್ಜು  ಐಪಿಎಲ್​ 2021  ಐಪಿಎಲ್​ 24ನೇ ಪಂದ್ಯ  ಮುಂಬೈ ಇಂಡಿಯನ್ಸ್​ ರಾಜಸ್ಥಾನ ರಾಯಲ್ಸ್​ ತಂಡ
ಕೃಪೆ : ಟ್ವಿಟ್ಟರ್​
author img

By

Published : Apr 29, 2021, 2:40 PM IST

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 24ನೇ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಬ್ಯಾಟಿಂಗ್​ ವೈಫಲ್ಯ

ಮುಂಬೈ ತಂಡಕ್ಕೆ ಬ್ಯಾಟಿಂಗ್​ ವೈಫಲ್ಯ ಕಾಡುತ್ತಿದೆ. ಕಳೆದ ಹಲವು ಪಂದ್ಯಗಳಲ್ಲಿ ರನ್​ ಗಳಿಸಲು ಮುಂಬೈ ತಂಡ ತಿಣಕಾಡುತ್ತಿದೆ. ಬ್ಯಾಟಿಂಗ್​ ವಿಭಾಗದಲ್ಲಿ ಬಲಿಷ್ಠ ಆಟಗಾರರನ್ನು ಹೊಂದಿದ್ದರೂ ಕಳೆದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ 9 ವಿಕೆಟ್​ಗಳನ್ನು ಕಳೆದುಕೊಂಡು 131 ರನ್​ಗಳನ್ನು ಕಲೆ ಹಾಕಿತ್ತು. ಅಲ್ಪ ಮೊತ್ತದಿಂದಾಗಿ ಪಂಜಾಬ್​ ವಿರುದ್ಧ 9 ವಿಕೆಟ್​ಗಳ ಸೋಲು ಕಂಡಿತು. ಈ ಪಂದ್ಯದಲ್ಲಿ ಬ್ಯಾಟಿಂಗ್​ ಜೊತೆ ಬೌಲಿಂಗ್ ವೈಫಲ್ಯ ಸಹ ಕಾಡಿತು.

ಚೆನ್ನೈನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್​ಗಳ ಸೋಲಿನ ಬಳಿಕ ಮುಂಬೈ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಹಿಂದಿನ 5 ಪಂದ್ಯಗಳಲ್ಲಿ 3 ಸೋಲು ಹಾಗೂ 2 ಗೆಲುವು ಕಂಡಿದೆ. ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವುದು ಮುಂಬೈ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

ರಾಜಸ್ಥಾನ ರಾಯಲ್ಸ್​ಗೆ ಅದೃಷ್ಟದ ಪರೀಕ್ಷೆ

ತಂಡದಲ್ಲಿ ಉತ್ತಮ ಆಟಗಾರರನ್ನು ಹೊಂದಿರುವ ರಾಜಸ್ಥಾನ ತಂಡಕ್ಕೆ ಅದೃಷ್ಟ ಸಾಥ್​ ನೀಡುತ್ತಿಲ್ಲ. ಒಮ್ಮೆ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡರೆ, ಮತ್ತೊಂದೆಡೆ ಬೌಲಿಂಗ್​ನಲ್ಲಿ ವೈಫಲ್ಯ ಕಾಣುತ್ತಾರೆ.

ಸಂಜು ಸ್ಯಾಮ್ಸನ್ ತಂಡ ಕೂಡ 5 ಪಂದ್ಯಗಳಲ್ಲಿ 3 ಸೋಲು ಹಾಗೂ 2 ಗೆಲುವು ದಾಖಲಿಸಿದೆ. ಮುಂಬೈನಲ್ಲಿ ನಡೆದ ಈ ಹಿಂದಿನ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರು ವಿಕೆಟ್‌ಗಳ ಗೆಲುವು ಸಾಧಿಸಿರುವ ವಿಶ್ವಾಸದಲ್ಲಿದೆ. ಆರ್​ಆರ್​ ಕೂಡ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಎಡವುತ್ತಿದೆ.

ಅಂಕ ಪಟ್ಟಿಯಲ್ಲಿ ಮುಂಬೈ ತಂಡ ನಾಲ್ಕನೇ ಸ್ಥಾನದಲ್ಲಿದ್ದರೆ, ರಾಯಲ್ಸ್ 7ನೇ ಸ್ಥಾನದಲ್ಲಿದೆ. ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಪಂದ್ಯವು ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.