ETV Bharat / sports

24 ವಿಕೆಟ್ ಪಡೆದು ಸಂಚಲನ ಸೃಷ್ಟಿಸಿದ ಟೀಂ ಇಂಡಿಯಾದ ಲೆಜಂಡರಿ ಕ್ರಿಕೆಟರ್​​ ಮಗ! - 24 WICKETS

ವಿರೇಂದ್ರ ಸೆಹ್ವಾಗ್​ ಅವರ ಕಿರಿಯ ಪುತ್ರ ಕ್ರಿಕೆಟ್​ ಪಂದ್ಯದಲ್ಲಿ 24 ವಿಕೆಟ್​ ಪಡೆದು ಸಂಚಲನ ಮೂಡಿಸಿದ್ದಾರೆ.

VEDANT SEHWAG 24 WICKETS  VIJAY MERCHANT TROPHY TOURNAMENT  ವಿರೇಂದ್ರ ಸೇಹ್ವಾಗ್​ CRICKET
ಸಾಂದರ್ಭಿಕ ಚಿತ್ರ (Getty Image)
author img

By ETV Bharat Sports Team

Published : Jan 5, 2025, 8:09 PM IST

Updated : Jan 5, 2025, 8:14 PM IST

ಹೈದರಾಬಾದ್​: ಭಾರತ ಕ್ರಿಕೆಟ್ ತಂಡದ ಲೆಜೆಂಡರಿ ಓಪನರ್ ಆಗಿದ್ದ ವೀರೇಂದ್ರ ಸೆಹ್ವಾಗ್ ತಮ್ಮ ಸ್ಫೋಟಕ ಬ್ಯಾಟಿಂಗ್​ನಿಂದಲೇ ಕ್ರಿಕೆಟ್​ನಲ್ಲಿ ಹಲವಾರು ದಾಖಲೆಗಳನ್ನು ಹುಟ್ಟುಹಾಕಿದ್ದಾರೆ. ಇದೀಗ ತಂದೆಯ ಹಾದಿಯನ್ನೇ ಮಕ್ಕಳು ಅನುಸರಿಸುತ್ತಿದ್ದಾರೆ. ಇತ್ತೀಚೆಗೆ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಕೂಚ್​ ಬೆಹಾರ್​ ಟ್ರೋಫಿಯಲ್ಲಿ 297 ರನ್​ ಸಿಡಿಸುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಎರಡನೇ ಪುತ್ರ 24 ವಿಕೆಟ್​ ಪಡೆದು ಸಂಚಲನ ಮೂಡಿಸಿದ್ದಾರೆ.

ಕಿರಿಯ ಪುತ್ರರಾಗಿರುವ ವೇದಾಂತ್ ಸೆಹ್ವಾಗ್ ಪ್ರಸ್ತುತ ನಡೆಯುತ್ತಿರುವ ವಿಜಯ್ ಮರ್ಚಂಟ್ ಟ್ರೋಫಿ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. 16 ವರ್ಷದೊಳಗಿನವರ ಈ ಟೂರ್ನಿಯಲ್ಲಿ ಆಫ್ ಸ್ಪಿನ್ನರ್ ಬೌಲರ್ ಆಗಿ ಕಾಣಿಸಿಕೊಂಡಿರುವ ವೇದಾಂತ್ ದೆಹಲಿ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಈ ಟೂರ್ನಿಯಲ್ಲಿ ಒಟ್ಟು 5 ಪಂದ್ಯಗಳನ್ನು ಆಡಿರುವ 14 ವರ್ಷದ ವೇದಾಂತ್ ಈಗಾಗಲೇ ಒಟ್ಟು 24 ವಿಕೆಟ್ ಉರುಳಿಸಿದ್ದಾರೆ. ಸೆಹ್ವಾಗ್ ಕೂಡ ತಮ್ಮ ಮಗನ ಆಕರ್ಷಕ ಬೌಲಿಂಗ್ ಬಗ್ಗೆ ಶ್ಲಾಘಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಸೆಹ್ವಾಗ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ವೇದಾಂತ್ ಬೌಲಿಂಗ್ ಮಾಡುತ್ತಿದ್ದಾರೆ. ಅಲ್ಲದೆ 5 ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿದ ಮಗನ ಸಾಧನೆಗೆ ಸೆಹ್ವಾಗ್ ಸಂತೋಷ ವ್ಯಕ್ತಪಡಿಸಿದ್ದಾರೆ. ವೇದಾಂತ್ ಸೆಹ್ವಾಗ್ 2024-25ರ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ದೆಹಲಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಈ ಟೂರ್ನಿಯಲ್ಲಿ ವೇದಾಂತ್ ಒಂದೇ ಇನ್ನಿಂಗ್ಸ್‌ನಲ್ಲಿ ಎರಡು ಬಾರಿ 5 ವಿಕೆಟ್ ಕಬಳಿಸಿದ್ದರು. ಇದರೊಂದಿಗೆ ತಲಾ ಎರಡು ಬಾರಿ 4 ವಿಕೆಟ್ ಪಡೆದರು. ವೇದಾಂತ್ ಸೆಹ್ವಾಗ್ ಹೊರತುಪಡಿಸಿದರೆ ದೆಹಲಿಯ ಯಾವ ಬೌಲರ್ ಕೂಡ 10 ವಿಕೆಟ್ ಕಬಳಿಸಲು ಸಾಧ್ಯವಾಗಿಲ್ಲ.

ಇದಕ್ಕೂ ಮೊದಲು ಸೆಹ್ವಾಗ್​ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಕೂಡ ಗಮನ ಸೆಳೆದಿದ್ದರು. ಕೂಚ್ ಬೆಹಾರ್ ಟ್ರೋಫಿಯಲ್ಲಿ ದೆಹಲಿ ಅಂಡರ್-19 ತಂಡಕ್ಕಾಗಿ ಆರ್ಯವೀರ್ 297 ರನ್‌ಗಳ ಬೃಹತ್ ಇನ್ನಿಂಗ್ಸ್ ಆಡಿದ್ದರು. ಆರ್ಯವೀರ್ ತನ್ನ ತಂದೆಯಂತೆ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಸಂಚಲನ ಮೂಡಿಸಿದರು. ಇನ್ನು, ವೇದಾಂತ್ ಕೂಡ 24 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಕನ್ನಡಿಗ ಮಾಡಿದ 'ಆ ಒಂದು ಕೆಲಸಕ್ಕೆ' ಶ್ರೀಲಂಕಾ ಟೆಸ್ಟ್​ವರೆಗೂ ಕಾಯಬೇಕಾದ ಸ್ಟೀವ್​ ಸ್ಮಿತ್!​

Last Updated : Jan 5, 2025, 8:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.