ETV Bharat / sports

ಕನ್ನಡಿಗ ಮಾಡಿದ 'ಆ ಒಂದು ಕೆಲಸಕ್ಕೆ' ಶ್ರೀಲಂಕಾ ಟೆಸ್ಟ್​ವರೆಗೂ ಕಾಯಬೇಕಾದ ಸ್ಟೀವ್​ ಸ್ಮಿತ್!​ - STEVE SMITH

STEVE SMITH: ಆಸ್ಟ್ರೇಲಿಯಾ ವಿರುದ್ಧ ನಡೆದ 5ನೇ ಟೆಸ್ಟ್​ ಪಂದ್ಯದಲ್ಲಿ ಸ್ಟೀವ್​ ಸ್ಮಿತ್​ರನ್ನು ಔಟ್​ಮಾಡುವ ಮೂಲಕ ಕನ್ನಡಿಗ ಪ್ರಸಿದ್ಧ ಕೃಷ್ಣ ಅಪರೂಪದ ದಾಖಲೆ ಬರೆದಿದ್ದಾರೆ.

PRASID KRISHNA RARE RECORD  PRASID KRISHNA TEST RECORD  INDIA AUSTRALIA 5TH TEST HIGHLIGHT  STEVE SMITH TEST RUN
STEVE SMITH (AP)
author img

By ETV Bharat Sports Team

Published : Jan 5, 2025, 5:03 PM IST

STEVE SMITH: ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆದ 5ನೇ ಮತ್ತು ಅಂತಿಮ ಟೆಸ್ಟ್​ನಲ್ಲೂ ಭಾರತ ಹೀನಯವಾಗಿ ಸೋಲನುಭವಿಸಿತು. ಈ ಪಂದ್ಯದ ಎರಡೂ ಇನ್ನಿಂಗ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ ಭಾರತ ಎದುರಾಳಿ ತಂಡಕ್ಕೆ ಕೇವಲ 162 ರನ್​ಗಳ ಗುರಿಯನ್ನು ನೀಡಿತ್ತು.

ಇದನ್ನು ಬೆನ್ನತ್ತಿದ ಕಾಂಗರೂ ಪಡೆ 6 ವಿಕೆಟ್​ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ 3-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡು. WTC ಫೈನಲ್​ಗೆ ಪ್ರವೇಶ ಪಡೆಯಿತು.

ಇಂಡಿಯಾವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ WTC ಫೈನಲ್​ಗೆ ಲಗ್ಗೆ ಇಟ್ಟಿರು ಕಾಂಗರೂ ಪಡೆ ಈ ವರ್ಷ ಜೂನ್​ ತಿಂಗಳಲ್ಲಿ ಇಂಗ್ಲೆಂಡ್​ನ ಲಾರ್ಡ್ಸ್​ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಪ್​ಗಾಗಿ ಸೆಣಸಲಿದೆ. ಏತನ್ಮಧ್ಯೆ, ಐದನೇ ಪಂದ್ಯದಲ್ಲಿ ಭಾರತದ ಯುವ ವೇಗಿ ಪ್ರಸಿದ್ಧ ಕೃಷ್ಣ, ಆಸೀಸ್​ನ ಸ್ಟೀವ್​ ಸ್ಮಿತ್​ ಅವರನ್ನು ಔಟ್​ ಮಾಡುವ ಮೂಲಕ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.

ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 9999 ರನ್ ಗಳಿಸಿರುವ ಸ್ಟೀವ್ ಸ್ಮಿತ್ ಕೇವಲ 1 ರನ್​ ಅಂತರದಿಂದ 10 ಸಾವಿರ ರನ್​ ಗಡಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಈ ಅನುಕ್ರಮದಲ್ಲಿ ಪ್ರಸಿದ್ಧ್ ಕೃಷ್ಣ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 9,999 ರನ್‌ಗಳಿಗೆ ಬ್ಯಾಟರ್ ಅನ್ನು ಔಟ್ ಮಾಡಿದ ಮೊದಲ ಬೌಲರ್ ಎನಿಸಿಕೊಂಡರು. ಸ್ಮಿತ್​ ಎರಡನೇ ಬ್ಯಾಟರ್​ ಆದರು.

ಇದಕ್ಕೂ ಮುನ್ನ ಶ್ರೀಲಂಕಾ ಮಾಜಿ ಬ್ಯಾಟರ್​​ ಮಹೇಲಾ ಜಯವರ್ಧನೆ ಕೂಡ 9999 ರನ್​ಗೆ ಔಟಾಗಿದ್ದರು. ಆದ್ರೆ ಇವರು ರನೌಟ್​ ಮೂಲಕ ಪೆವಿಲಿಯನ್​ ಸೇರಿದ್ದರು. ವೆಸ್ಟ್​ ಇಂಡೀಸ್​ನ ದಿಗ್ಗಜ ಕ್ರಿಕೆಟರ್​ 9.990-10000 ರನ್​ಗಳ ನಡುವೆ ಎರಡು ಬಾರಿ ಔಟಾಗಿದ್ದರು. ಇದೀಗ ಸ್ಮಿತ್​ 10,000 ಟೆಸ್ಟ್ ರನ್ ಗಡಿ ತಲುಪಲು ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿವರೆಗೆ ಕಾಯಬೇಕಾಗಿದೆ. ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸ್ಮಿತ್ ಈ ಸಾಧನೆ ಮಾಡಿದರೇ ಟೆಸ್ಟ್‌ನಲ್ಲಿ 10,000 ಕ್ಲಬ್‌ಗೆ ಸೇರಿದ ಮೊದಲ ಬ್ಯಾಟರ್​ ಎನಿಸಿಕೊಳ್ಳಲಿದ್ದಾರೆ. ರಿಕಿ ಪಾಂಟಿಂಗ್, ಅಲನ್ ಬಾರ್ಡರ್ ಮತ್ತು ಸ್ಟೀವ್ ವಾ ನಂತರ 10,000 ಟೆಸ್ಟ್ ರನ್ ಗಳಿಸಿದ ನಾಲ್ಕನೇ ಆಸೀಸ್ ಬ್ಯಾಟ್ಸ್‌ಮನ್ ಆಗಲಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ಸ್ಟೀವ್ ಸ್ಮಿತ್ 19 ರನ್ ಗಳಿಗೆ ಪೆವಿಲಿಯನ್​ ಸೇರಿದ್ದರು, ನಂತರ ಪುಟಿದೇದ್ದ ಸ್ಮಿತ್​ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಶತಕ (104), ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಮತ್ತೊಂದು ಶತಕ (140) ಗಳಿಸಿದರು. ಇದರೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ: ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಂತ ವಿಚಿತ್ರ ರೀತಿಯಲ್ಲಿ ಔಟಾದ ಬ್ಯಾಟರ್​​​: ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.