ಅಹಮದಾಬಾದ್ (ಗುಜರಾತ್): ಐಪಿಎಲ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಭರ್ಜರಿ ಗೆಲವಿನೊಂದಿಗೆ ಫೈನಲ್ಗ ಲಗ್ಗೆ ಇಟ್ಟಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ಪಡೆಯು ಶುಭಮನ್ ಗಿಲ್ ಅವರ ದಾಖಲೆಯ ಶತಕದ ನೆರವಿನೊಂದಿಗೆ 233 ರನ್ಗಳ ಬೃಹತ್ ಮೊತ್ತ ಪ್ರೇರಿಸಿತ್ತು. ಮುಂಬೈ ತಂಡ 18.2 ಓವರ್ಗಳಲ್ಲಿ 171 ರನ್ಗಳಿಗೆ ಸರ್ವಪತನ ಕಂಡಿತು.
ಬೃಹತ್ ರನ್ ಟಾರ್ಗೆಟ್ ಬೆನ್ನಟ್ಟಿದ್ದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್ ಹಾಗೂ ತಿಲಕ್ ವರ್ಮ ಅವರನ್ನು ಹೊರತು ಪಡಿಸಿದರೆ ಬೇರೆ ಯಾವ ಬ್ಯಾಟರ್ನಿಂದ ದೊಡ್ಡ ಮೊತ್ತದ ರನ್ಗಳು ಬರಲಿಲ್ಲ. ಮೊಹಮ್ಮದ್ ಶಮಿ ಎಸೆತದ ಮೊದಲ ಓವರ್ನಲ್ಲೇ ನೆಹಲ್ ವಧೇರಾ ಕೇವಲ 4 ರನ್ಗೆ ಪೆವಿಲಿಯನ್ ಸೇರಿದರು. ನಾಯಕ ರೋಹಿತ್ ಶರ್ಮಾ ಅವರನ್ನೂ ಶಮಿ 8 ರನ್ಗೆ ಕಟ್ಟಿ ಹಾಕಿದರು. ಈ ನಡುವೆ ಕ್ಯಾಮರೂನ್ ಗ್ರೀನ್ ಮತ್ತು ತಿಲಕ್ ವರ್ಮಾ 50 ರನ್ಗಳ ಜೊತೆಯಾಟ ನೀಡಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಮೇಲೆತ್ತುವ ಪ್ರಯತ್ನ ಮಾಡಿದರು.
-
Congratulations to the Gujarat Titans, who march to the #Final of the #TATAIPL for the second-consecutive time 🙌
— IndianPremierLeague (@IPL) May 26, 2023 " class="align-text-top noRightClick twitterSection" data="
They complete a formidable 62-run win over Mumbai Indians 👏🏻👏🏻#TATAIPL | #Qualifier2 | #GTvMI | @gujarat_titans pic.twitter.com/rmfWU7LJHy
">Congratulations to the Gujarat Titans, who march to the #Final of the #TATAIPL for the second-consecutive time 🙌
— IndianPremierLeague (@IPL) May 26, 2023
They complete a formidable 62-run win over Mumbai Indians 👏🏻👏🏻#TATAIPL | #Qualifier2 | #GTvMI | @gujarat_titans pic.twitter.com/rmfWU7LJHyCongratulations to the Gujarat Titans, who march to the #Final of the #TATAIPL for the second-consecutive time 🙌
— IndianPremierLeague (@IPL) May 26, 2023
They complete a formidable 62-run win over Mumbai Indians 👏🏻👏🏻#TATAIPL | #Qualifier2 | #GTvMI | @gujarat_titans pic.twitter.com/rmfWU7LJHy
ಅದರಲ್ಲೂ ತಿಲಕ್ ವರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರರ್ದಶಿಸಿದರು. ಕೇವಲ 14 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್ ಸಮೇತ 43 ರನ್ ಸಿಡಿಸಿ ರಶೀದ್ ಖಾನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರದಲ್ಲಿ ಗ್ರೀನ್ಗೆ ಸೂರ್ಯಕುಮಾರ್ ಯಾದವ್ ಜೊತೆಯಾದರು. ಈ ಜೋಡಿ ಸಹ 50 ರನ್ಗಳ ಜೊತೆಯಾಟ ನೀಡಿತು. ಆದರೆ, ತಾಳ್ಮೆಯ ಆಟವಾಡುತ್ತಿದ್ದ ಗ್ರೀನ್ 20 ಬಾಲ್ ಎದುರಿಸಿ ತಲಾ ಎರಡು ಬೌಂಡರಿ, ಸಿಕ್ಸರ್ ಸಮೇತ 30 ರನ್ ಕಲೆ ಹಾಕಿ ಜೋಶುವಾ ಲಿಟಲ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಸ್ವಲ್ಪ ಹೊತ್ತಲೇ 38 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ಗಳೊಂದಿಗೆ 61 ರನ್ ಬಾರಿಸಿ ಸೂರ್ಯಕುಮಾರ್ ಯಾದವ್ ಕೂಡ ಮೋಹಿತ್ ಶರ್ಮಾ ಬೌಲಿಂಗ್ನಲ್ಲಿ ಬೌಲ್ಡ್ ಆದರು.
-
The 𝗙𝗜𝗡𝗔𝗟𝗜𝗦𝗧𝗦 of #TATAIPL 2023 🏆
— IndianPremierLeague (@IPL) May 26, 2023 " class="align-text-top noRightClick twitterSection" data="
It's going to be the Chennai Super Kings facing the Gujarat Titans in the summit clash 🙌
BRING. IT. ON 😍 pic.twitter.com/FYBhhsN808
">The 𝗙𝗜𝗡𝗔𝗟𝗜𝗦𝗧𝗦 of #TATAIPL 2023 🏆
— IndianPremierLeague (@IPL) May 26, 2023
It's going to be the Chennai Super Kings facing the Gujarat Titans in the summit clash 🙌
BRING. IT. ON 😍 pic.twitter.com/FYBhhsN808The 𝗙𝗜𝗡𝗔𝗟𝗜𝗦𝗧𝗦 of #TATAIPL 2023 🏆
— IndianPremierLeague (@IPL) May 26, 2023
It's going to be the Chennai Super Kings facing the Gujarat Titans in the summit clash 🙌
BRING. IT. ON 😍 pic.twitter.com/FYBhhsN808
ಇದರ ನಂತರ ಯಾವುದೇ ಬ್ಯಾಟರ್ ಕೂಡ ಹೆಚ್ಚು ನಿಲ್ಲಲ್ಲಿ. ಇದರಿಂದ ದಿಢೀರ್ ಕುಸಿತಗೊಂಡ ಮುಂಬೈ ಸೋಲಿಗೆ ಶರಣಾಗಿ ಐಪಿಎಲ್ ಟೂರ್ನಿಯ ಪ್ರಯಣವನ್ನು ಮುಗಿಸಿತು. 62 ರನ್ಗಳಿಂದ ಗೆಲುವಿನ ನಗೆ ಬೀರಿದ ಹಾಲಿ ಚಾಂಪಿಯನ್ ಗುಜರಾತ್ ಫೈನಲ್ಗೆ ಪ್ರವೇಶಿಸಿತು. ಗುಜರಾತ್ ಟೈಟಾನ್ಸ್ ಪರ ಮೋಹಿತ್ ಶರ್ಮಾ 2.2 ಓವರ್ಗಳಲ್ಲಿ ಕೇವಲ 10 ರನ್ ನೀಡಿ ಐದು ವಿಕೆಟ್ ಉರುಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ಮೇ 28ರಂದು ಇದೇ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಪ್ರಶಸ್ತಿಗಾಗಿ ಹಾರ್ದಿಕ್ ಪಾಂಡ್ಯ ಪಡೆ ಹೋರಾಟ ನಡೆಸಲಿದೆ. ಇನ್ನು ಐಪಿಎಲ್ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಫೈನಲ್ಗೆ ಪ್ರವೇಶಿಸಿದ ಮೂರನೇ ತಂಡ ಗುಜರಾತ್ ಆಗಿದೆ. ಈ ಹಿಂದೆ ಚೆನ್ನೈ ಮತ್ತು ಮುಂಬೈ ಸತತವಾಗಿ ಫೈನಲ್ಗೆ ಲಗ್ಗೆ ಇಟ್ಟಿದ್ದವು. ಇದುವರೆಗೆ ಮುಂಬೈ ಐದು ಬಾರಿ ಪ್ರಶಸ್ತಿಗೆ ಗೆದ್ದಿದ್ದರೆ, ಚೆನ್ನೈ ನಾಲ್ಕು ಬಾರಿ ಗೆದ್ದಿದೆ. ಗುಜರಾತ್ ಎರಡನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: IPL 2023 Qualifier 2: ಮೂರನೇ ಶತಕ ಗಳಿಸಿದ ಶುಭಮನ್ ಗಿಲ್: ಮುಂಬೈಗೆ 234 ರನ್ಗಳ ಬೃಹತ್ ಗುರಿ