ಅಹಮದಾಬಾದ್ (ಗುಜರಾತ್): 16ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ತೆರೆ ಬೀಳಲು ಇನ್ನು ಒಂದು ಹೆಚ್ಚೆ ಮಾತ್ರ ಬಾಕಿ ಇದೆ. ಮೂರು ಚಾಂಪಿಯನ್ ತಂಡಗಳು ಫೈನಲ್ ಎದುರು ನೋಡುತ್ತಿವೆ. ಇಂದು ಗುಜರಾತ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಕ್ವಾಲಿಫೈಯರ್ನಲ್ಲಿ ಗೆದ್ದವರು ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ)ನ್ನು ಎದುರಿಸಲಿದ್ದಾರೆ.
-
𝙄𝙩’𝙨 𝙌𝙪𝙖𝙡𝙞𝙛𝙞𝙚𝙧 2 𝘿𝙖𝙮! 👊🔥
— Mumbai Indians (@mipaltan) May 26, 2023 " class="align-text-top noRightClick twitterSection" data="
Paltan, तुम्ही तयार का? 💙 #OneFamily #MumbaiMeriJaan #MumbaiIndians #TATAIPL #IPL2023 @ImRo45 @surya_14kumar @TilakV9 @ishankishan51 pic.twitter.com/K8r1u0sKSr
">𝙄𝙩’𝙨 𝙌𝙪𝙖𝙡𝙞𝙛𝙞𝙚𝙧 2 𝘿𝙖𝙮! 👊🔥
— Mumbai Indians (@mipaltan) May 26, 2023
Paltan, तुम्ही तयार का? 💙 #OneFamily #MumbaiMeriJaan #MumbaiIndians #TATAIPL #IPL2023 @ImRo45 @surya_14kumar @TilakV9 @ishankishan51 pic.twitter.com/K8r1u0sKSr𝙄𝙩’𝙨 𝙌𝙪𝙖𝙡𝙞𝙛𝙞𝙚𝙧 2 𝘿𝙖𝙮! 👊🔥
— Mumbai Indians (@mipaltan) May 26, 2023
Paltan, तुम्ही तयार का? 💙 #OneFamily #MumbaiMeriJaan #MumbaiIndians #TATAIPL #IPL2023 @ImRo45 @surya_14kumar @TilakV9 @ishankishan51 pic.twitter.com/K8r1u0sKSr
1ನೇ ಕ್ವಾಲಿಪೈಯರ್ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ನ್ನು ಮಣಿಸಿ ಸಿಎಸ್ಕೆ ನೇರ ಫೈನಲ್ ಪ್ರವೇಶಿಸಿತ್ತು. ಬುಧವಾರ ನಡೆದ ಎಲಿಮಿನೇಟರ್ನಲ್ಲಿ ಲಕ್ನೋವನ್ನು ಮಣಿಸಿ ಮುಂಬೈ ಇಂಡಿಯನ್ಸ್ (ಎಂಐ) ಕ್ವಾಲಿಫೈಯರ್ 2 ಆಡಲಿದೆ. ಇಂದು ಐದು ಬಾರಿ ಕಪ್ ಗೆದ್ದ ರೋಹಿತ್ ಶರ್ಮಾ ಪಡೆ ಮತ್ತು ಹಾಲಿ ಚಾಂಪಿಯನ್ ಹಾರ್ದಿಕ್ ಪಾಂಡ್ಯ ಪಾಳಯದ ನಡುವೆ ಹಣಾಹಣಿ ನಡೆಯಲಿದೆ. ಗೆದ್ದವರಿಗೆ ಚೆನ್ನೈ ಫೈನಲ್ನಲ್ಲಿ ಎದುರಾಗಲಿದೆ.
ಎಲಿಮಿನೇಟರ್ನಲ್ಲಿ ಭರ್ಜರಿ ಗೆಲುವು ಕಂಡಿರುವ ಮುಂಬೈ ಇಂಡಿಯನ್ಸ್ ಅದೇ ಆತ್ಮವಿಶ್ವಾಸದೊಂದಿಗೆ ಕಣಕ್ಕಳಿಯಲಿದೆ. ಮುಂಬೈ ಲೀಗ್ ಆರಂಭದಲ್ಲಿ ಸೋಲನುಭವಿಸಿದರೂ ನಂತರ ಉತ್ತಮ ಕಂಬ್ಯಾಕ್ ಮಾಡಿತು. ಸೂರ್ಯ ಕುಮಾರ್ ಯಾದವ್, ಕ್ಯಾಮರಾನ್ ಗ್ರೀನ್ ಮತ್ತು ಟಿಮ್ ಡೇವಿಡ್ ಕೊನೆಯ ಪ್ರಮುಖ ಬೃಹತ್ ಮೊತ್ತದ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟರು. ಇದರಿಂದ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯುವಲ್ಲಿ ಸಾಧ್ಯವಾಯಿತು. ಜಸ್ಪಿತ್ ಬೂಮ್ರಾ ಮತ್ತು ಆರ್ಚರ್ ಇಲ್ಲದೇ ಅಂತಾರಾಷ್ಟ್ರಿಯ ಸ್ಟಾರ್ ಬೌಲರ್ಗಳ ಕೊರತೆ ಎದುರಿಸುತ್ತಿದ್ದ ಎಂಐಗೆ ಆಶಿಶ್ ಮದ್ವಾಲ್ ಭರವಸೆಯಾಗಿದ್ದಾರೆ.
-
Picture abhi baaki hai, #TitansFAM! 🤩#Qualifier2 releases today🏏 @mipaltan | #GTvMI | PhariAavaDe | #TATAIPL 2023 pic.twitter.com/OEMiIddIsP
— Gujarat Titans (@gujarat_titans) May 26, 2023 " class="align-text-top noRightClick twitterSection" data="
">Picture abhi baaki hai, #TitansFAM! 🤩#Qualifier2 releases today🏏 @mipaltan | #GTvMI | PhariAavaDe | #TATAIPL 2023 pic.twitter.com/OEMiIddIsP
— Gujarat Titans (@gujarat_titans) May 26, 2023Picture abhi baaki hai, #TitansFAM! 🤩#Qualifier2 releases today🏏 @mipaltan | #GTvMI | PhariAavaDe | #TATAIPL 2023 pic.twitter.com/OEMiIddIsP
— Gujarat Titans (@gujarat_titans) May 26, 2023
ಲೀಗ್ನಲ್ಲಿ ಕೇವಲ ನಾಲ್ಕು ಸೋಲು ಕಂಡು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ, ಗುಜರಾತ್ ಕ್ವಾಲಿಫೈಯರ್ನಲ್ಲಿ ಚೆನ್ನೈ ವಿರುದ್ಧ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಲೀಗ್ ಉದ್ದಕ್ಕೂ ಆರಂಭಿಕ ಶುಭಮನ್ ಗಿಲ್ಗೆ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾಟ ಸಿಗುತ್ತಿತ್ತು. ಆದರೆ, ಚೆನ್ನೈ ವಿರುದ್ಧ ಗಿಲ್ ಏಕಾಂಗಿಯಾಗಿ 40 ರನ್ಗಳಿಸಿದರು ತಂಡ ಗೆಲುವು ಕಂಡಿಲ್ಲ. ಇತ್ತ ಬೌಲಿಂಗ್ನಲ್ಲಿ ಬಲಿಷ್ಠವಾಗಿ ಬಂದಿರುವ ಮುಂಬೈ ಮಣಿಸಲು ಹಾರ್ದಿಕ್ ಪಡೆ ವಿಕೆಟ್ ಕಾಯ್ದುಕೊಳ್ಳುವ ಅಗತ್ಯ ಇದೆ. ಗಿಲ್, ಹಾರ್ದಿಕ್, ಮಿಲ್ಲರ್, ವಿಜಯ ಶಂಕರ್ ಮತ್ತು ತೆವಾಟಿಯ ತಂಡಕ್ಕೆ ಬ್ಯಾಟಿಂಗ್ ಭರವಸೆ ಆಗಿದ್ದಾರೆ.
ಗುಜರಾತ್ ತಂಡದಲ್ಲಿ ಅನುಭವಿ ಬೌಲರ್ಗಳಾದ ಮಹಮ್ಮದ್ ಶಮಿ, ಮೋಹಿತ್ ಶರ್ಮಾ ಮತ್ತು ರಶೀದ್ ಖಾನ್ ಎದುರಾಳಿ ಕಟ್ಟಿಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅತ್ತ ಮುಂಬೈ ಅನಾನುಭವಿ ಬೌಲರ್ಗಳಲ್ಲೇ ಯಶ್ವಸಿಯಾಗುತ್ತಿದೆ. ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ ಮುಂಬೈ ಫೈನಲ್ಗೆ ಪ್ರವೇಶ ಪಡೆದಿರುವ ಇತಿಹಾಸ ಇದೆ ಇದನ್ನು ಗುಜರಾತ್ ಮುರಿಯುತ್ತಾ ಕಾದು ನೋಡಬೇಕಿದೆ.
-
𝐅𝐨𝐫 𝐭𝐡𝐚𝐭 𝐚𝐥𝐥-𝐢𝐦𝐩𝐨𝐫𝐭𝐚𝐧𝐭 𝐬𝐩𝐨𝐭 𝐢𝐧 𝐭𝐡𝐞 𝐟𝐢𝐧𝐚𝐥 🙌⚡️#PhariAavaDe | #GTvMI | #TATAIPL 2023 Playoffs@hardikpandya7 | @vijayshankar260 | @MdShami11 pic.twitter.com/78pLUCuD0J
— Gujarat Titans (@gujarat_titans) May 26, 2023 " class="align-text-top noRightClick twitterSection" data="
">𝐅𝐨𝐫 𝐭𝐡𝐚𝐭 𝐚𝐥𝐥-𝐢𝐦𝐩𝐨𝐫𝐭𝐚𝐧𝐭 𝐬𝐩𝐨𝐭 𝐢𝐧 𝐭𝐡𝐞 𝐟𝐢𝐧𝐚𝐥 🙌⚡️#PhariAavaDe | #GTvMI | #TATAIPL 2023 Playoffs@hardikpandya7 | @vijayshankar260 | @MdShami11 pic.twitter.com/78pLUCuD0J
— Gujarat Titans (@gujarat_titans) May 26, 2023𝐅𝐨𝐫 𝐭𝐡𝐚𝐭 𝐚𝐥𝐥-𝐢𝐦𝐩𝐨𝐫𝐭𝐚𝐧𝐭 𝐬𝐩𝐨𝐭 𝐢𝐧 𝐭𝐡𝐞 𝐟𝐢𝐧𝐚𝐥 🙌⚡️#PhariAavaDe | #GTvMI | #TATAIPL 2023 Playoffs@hardikpandya7 | @vijayshankar260 | @MdShami11 pic.twitter.com/78pLUCuD0J
— Gujarat Titans (@gujarat_titans) May 26, 2023
ಉಭಯ ತಂಡಗಳ ಮುಖಾಮುಖಿ: ಮುಂಬೈ ಮತ್ತು ಗುಜರಾತ್ ಉಭಯ ತಂಡಗಳು ಒಟ್ಟು 3 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 2 ಸಲ, ಜಿಟಿ 1 ಗೆದ್ದಿದೆ. ಪ್ಲೇ ಆಫ್ ಹಂತದಲ್ಲಿ ಇದೇ ಮೊದಲ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದೆ. ಈ ಆವೃತ್ತಿಯ ಲೀಗ್ ಹಂತದಲ್ಲಿ 2 ಬಾರಿ ಎದುರಾಗಿದ್ದು, ತಲಾ 1ರಲ್ಲಿ ಗೆದ್ದಿವೆ.
ಪಿಚ್ ರಿಪೋರ್ಟ್: ಅಹಮದಾಬಾದ್‌ನ ವಿಕೆಟ್ ಬ್ಯಾಟಿಂಗ್ಗೆ ನೆರವಾಗಲಿದೆ. ಉತ್ತಮ ಮೊತ್ತ ಕಲೆ ಹಾಕಲು ಈ ಪಿಚ್ ಸಹಾಯವಾಗಲಿದೆ. ಭುವನೇಶ್ವರ್ ಕುಮಾರ್ ಪಂದ್ಯವೊಂದರಲ್ಲಿ 5 ವಿಕೆಟ್ ಪೆಡೆದಿರುವ ಕಾರಣ ವೇಗಿಗಳೂ ಅದ್ಭುತ ಪ್ರದರ್ಶನ ನೀಡುವ ಅವಕಾಶ ಇದೆ. ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವವರಿಗೆ ಇಬ್ಬನಿ ಸಹಕಾರ ಪಡೆಯುವ ಉದ್ದೇಶದಿಂದ ಟಾಸ್ ಗೆದ್ದ ತಂಡವು ಚೇಸಿಂಗ್ಗೆ ಹೆಚ್ಚು ಆದ್ಯತೆ ನೀಡಲಿದೆ.
ಸಂಭಾವ್ಯ ತಂಡ ಇಂತಿದೆ..: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆಂಡಾರ್ಫ್
ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ದಾಸುನ್ ಶನಕ, ರಾಹುಲ್ ತೆವಾಟಿಯಾ, ರಶೀದ್ ಖಾನ್, ಯಶ್ ದಯಾಲ್, ಅಲ್ಜಾರಿ ಜೋಸೆಫ್/ನೂರ್ ಅಹ್ಮದ್/ಜೋಶ್ ಲಿಟಲ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನೆಮಾ ಆ್ಯಪ್
ಇದನ್ನೂ ಓದಿ: ಕೊಹ್ಲಿಗೆ 250 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್: ಈ ಸಾಧನೆ ಮಾಡಿದ ಮೊದಲ ಭಾರತೀಯ!