ETV Bharat / sports

ವಾರ್ನರ್​ ಹ್ಯಾಟ್ರಿಕ್​ ಅರ್ಧಶತಕ: ಪಂಜಾಬ್​ ವಿರುದ್ಧ ಗೆದ್ದು 6ನೇ ಸ್ಥಾನಕ್ಕೆ ಜಿಗಿದ ಡೆಲ್ಲಿ

author img

By

Published : Apr 20, 2022, 10:49 PM IST

ಟಾಸ್​ ಸೋತು ಬ್ಯಾಟಿಂಗ್‌ಗೆ ಇಳಿದಿದ್ದ ಪಂಜಾಬ್ ತಂಡ ಡೆಲ್ಲಿ ಬೌಲರ್​ಗಳ ದಾಳಿಗೆ ತತ್ತರಿಸಿ 20 ಓವರ್​ಗಳಲ್ಲಿ ಕೇವಲ 115 ರನ್​ಗಳಿಗೆ ಆಲೌಟ್ ಆಗಿತ್ತು. ಜಿತೇಶ್ ಶರ್ಮಾ 32 ತಂಡದ ಗರಿಷ್ಠ ಸ್ಕೋರರ್​ ಆಗಿದ್ದರು.

IPL 2022: DC beat Punjab by 9 wickets
IPL 2022: DC beat Punjab by 9 wickets

ಮುಂಬೈ: ಬೌಲರ್​ಗಳ ಸಂಘಟಿತ ಪ್ರದರ್ಶನ ಮತ್ತು ವಾರ್ನರ್​-ಪೃಥ್ವಿ ಶಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ನೀಡಿದ್ದ 116 ರನ್​ಗಳ ಸಾಧಾರಣ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ಒಂದು ವಿಕೆಟ್ ಕಳೆದುಕೊಂಡು ತಲುಪಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದಿದ್ದ ಪಂಜಾಬ್ ತಂಡ ಡೆಲ್ಲಿ ಬೌಲರ್​ಗಳ ದಾಳಿಗೆ ತತ್ತರಿಸಿ 20 ಓವರ್​ಗಳಲ್ಲಿ ಕೇವಲ 115 ರನ್​ಗಳಿಗೆ ಆಲೌಟ್ ಆಗಿತ್ತು. ಜಿತೇಶ್ ಶರ್ಮಾ 32 ತಂಡದ ಗರಿಷ್ಠ ಸ್ಕೋರರ್​ ಆಗಿದ್ದರು.

116 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಡೆಲ್ಲಿ ನಿರಾಯಾಸವಾಗಿ 10.3 ಓವರ್​ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಫೃಥ್ವಿ ಶಾ 20 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್‌ಸಹಿತ 41 ರನ್​ಗಳಿಸಿದರೆ, ವಾರ್ನರ್​ 30 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್‌ಸಹಿತ ಅಜೇಯ 60 ರನ್​ ಮತ್ತು ಸರ್ಫರಾಜ್ ಖಾನ್​ ಅಜೇಯ 12 ರನ್​ಗಳಿಸಿ ಇನ್ನೂ 53 ಎಸೆತಗಳು ಬಾಕಿ ಉಳಿದಿರುವಂತೆಯೇ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಪಂಜಾಬ್ ಇನ್ನಿಂಗ್ಸ್​: ಮುಂಬೈನ ಬ್ರೆಬೋರ್ನ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ರಿಷಭ್ ಪಂತ್ ಪಂಜಾಬ್ ಕಿಂಗ್ಸ್​ಗೆ ಬ್ಯಾಟಿಂಗ್ ಆಹ್ವಾನ ನೀಡಿದರು. ನಾಯಕನ ನಿರ್ಣಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ ಡೆಲ್ಲಿ ಬೌಲರ್​ಗಳು ಕೇವಲ 7 ಓವರ್​ಗಳ ಒಳಗೆ ತಂಡದ ಅಗ್ರಕ್ರಮಾಂಕದ ಸ್ಟಾರ್​ ಟ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದರು.

ನಾಯಕ ಮಯಾಂಕ್ ಅಗರ್​ವಾಲ್​ 24, ಶಿಖರ್ ಧವನ್​ 9, ಬೈರ್​ಸ್ಟೋವ್ 9 ಮತ್ತು ಲಿಯಾಮ್ ಲಿವಿಂಗ್​ಸ್ಟೋನ್​ ಕೇವಲ 2 ರನ್​ಗಳಸಿ ವಿಕೆಟ್ ಒಪ್ಪಿಸಿದರು. 54 ರನ್​ಗಳಾಗುವಷ್ಟರಲ್ಲಿ ತಂಡದ ಸ್ಟಾರ್​ ಬ್ಯಾಟರ್​ಗಳನ್ನು ಕಳೆದುಕೊಂಡ ಪಂಜಾಬ್ ತಂಡ 100ರ ಗಡಿ ದಾಟುವುದು ಅನುಮಾನ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಜಿತೇಶ್ ಶರ್ಮಾ 32 ರನ್​ಗಳಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.

13ನೇ ಓವರ್​ನಲ್ಲಿ ಜಿತೇಶ್ ಶರ್ಮಾ, ಅಕ್ಷರ್​ ಪಟೇಲ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ಇವರ ವಿಕೆಟ್​ ಬೀಳುತ್ತಿದ್ದಂತೆ ಪಂಜಾಬ್​ ಮತ್ತೊಮ್ಮೆ ಕುಸಿತ ಕಂಡು, ಕೇವಲ 7 ರನ್​ ಅಂತರದಲ್ಲಿ ರಬಾಡ(2), ನೇಥನ್ ಎಲ್ಲಿಸ್​(0)ಶಾರುಖ್​ ಖಾನ್ (12) ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ರಾಹುಲ್ ಚಾಹರ್ 12 ರನ್ ಮತ್ತು ಅರ್ಶ್​ದೀಪ್ 9 ರನ್​ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಅಕ್ಷರ್ ಪಟೇಲ್ 10ಕ್ಕೆ 2, ಲಲಿತ್ ಯಾದವ್ 11ಕ್ಕೆ 2, ಕುಲ್ದೀಪ್ ಯಾದವ್ 24ಕ್ಕೆ 2, ಖಲೀಲ್ ಅಹ್ಮದ್ 21ಕ್ಕೆ 2 ​​ ಮತ್ತು ರೆಹಮಾನ್ 28ಕ್ಕೆ 1 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ತೋರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.