ಮುಂಬೈ ಮತ್ತು ಪಂಜಾಬ್ ತಂಡಗಳು 2 ಸೂಪರ್ ಓವರ್ ಆಡಿದ್ದು, ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹವೊಂದು ಕ್ಷಣ ಕಂಡು ಬಂತು. ಪಂಜಾಬ್ ಹಾಗೂ ಮುಂಬೈ ನಡುವಿನ ಪಂದ್ಯ ಟೈ ಆಯಿತು. ಈ ಪಂದ್ಯವನ್ನು 2ನೇ ಸೂಪರ್ ಓವರ್ನಲ್ಲಿ ಪಂಜಾಬ್ ಗೆಲ್ಲುವ ಮೂಲಕ ವಿಶ್ವದಲ್ಲೇ 2ನೇ ಸೂಪರ್ ಓವರ್ ಪಂದ್ಯ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಈ ಪಂದ್ಯವನ್ನು ಟೆನ್ಷನ್ನಿಂದ, ಉಗುರು ಕಚ್ಚುತ್ತಾ ಮ್ಯಾಚ್ ವೀಕ್ಷಿಸಿದ ಸುಂದರಿಯೊಬ್ಬಳು ರಾತ್ರೋರಾತ್ರಿ ಸ್ಟಾರ್ ಆಗಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಪಡ್ಡೆ ಹುಡುಗರು ಜಾಲಾಡಿದ್ರೂ ಈಕೆಯ ಬಗ್ಗೆ ಸ್ವಲ್ಪವೂ ಸುಳಿವು ಸಿಕ್ಕಿರಲಿಲ್ಲ. ಈಗ ಈಕೆ ಬಗ್ಗೆ ಕೊಂಚ ಮಾಹಿತಿ ಸಿಕ್ಕಿದೆ.
ಹೌದು, ಈಕೆಯ ಹೆಸರು ರಿಯಾನಾ ಲಾಲ್ವಾಣಿ ಅಂತಾ ಮಾತ್ರ ಗೊತ್ತಾಗಿದೆ. ಕೊರೊನಾ ಹಿನ್ನೆಲೆ ಪಂದ್ಯ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಹೀಗಾಗಿ ರಿಯಾನಾ ಎರಡು ಪ್ರಾಂಚೈಸಿಗಳಲ್ಲಿ ಯಾವುದೋ ಒಂದು ತಂಡಕ್ಕೆ ಬೆಂಬಲಿಗರಾಗಿದ್ದಾರೆ. ಈ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಫಾಲೋವರ್ ಸಂಖ್ಯೆ ಹೆಚ್ಚಾಗಿದೆ. ಇದುವರೆಗೆ ಇನ್ಸ್ಟಾಗ್ರಾಂನಲ್ಲಿ ಕೇವಲ 11 ಪೋಸ್ಟ್ ಮಾಡಿರುವ ರಿಯಾನಾಳಿಗೆ 61 ಸಾವಿರಕ್ಕೂ ಹೆಚ್ಚು ಫಾಲೋವರ್ ಸಂಖ್ಯೆ ಇದೆ. ಆಕೆಯ ಇನ್ಸ್ಟಾಗ್ರಾಂ ಪ್ರೊಫೈಲ್ನಲ್ಲಿ ‘ದುಬೈ... ದಟ್ಸ್ ಸೂಪರ್ ಓವರ್ ಗರ್ಲ್’ ಎಂದು ಬರೆದಿದೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ರಿಯಾನಾ ಫ್ಯಾನ್ಸ್ ಕ್ಲಬ್ ಅಂತಾ ಪೇಜ್ ಸಹಾ ಹುಟ್ಟಿಕೊಂಡಿದೆ.