ETV Bharat / sports

India vs New Zealand: ಸೇಡು ತೀರಿಸಿಕೊಳ್ಳುವ ತವಕದಲ್ಲಿ ಕಿವೀಸ್​, ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಭಾರತ - ಶ್ರೇಯಸ್​ ಅಯ್ಯರ್ ಪದಾರ್ಪಣೆ

inda vs new zealand first test: ಸತತ ಮೂರು ಪಂದ್ಯಗಳನ್ನು ಸೋತು ಟಿ-20 ಸರಣಿಯನ್ನು ಕೈ ಚೆಲ್ಲಿರುವ ಕಿವೀಸ್​ ತಂಡ ಭಾರತ ತಂಡದ ವಿರುದ್ಧ ಸೇಡು ತಿರಿಸಿಕೊಳ್ಳುವ ತವಕದಲ್ಲಿದೆ. ಇಂದಿನಿಂದ ಆರಂಭವಾಗುವ ಟೆಸ್ಟ್​ ಸರಣಿಯಲ್ಲಿ ಭಾರತ ತಂಡದ ವಿರುದ್ಧ ಪ್ರಬಲ ತಂಡವನ್ನೇ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ ನಾಯಕ ಕೇನ್ ವಿಲಿಯಮ್ಸನ್. ತವರು ನೆಲದಲ್ಲಿ ದಿಗ್ಗಜರಿಲ್ಲದ ಭಾರತ ತಂಡ ಬಲಿಷ್ಠ ನ್ಯೂಜಿಲ್ಯಾಂಡ್​ ತಂಡವನ್ನು ಯಾವರೀತಿ ಎದುರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Preview of India vs New Zealand,  Ajinkya Rahane, New Zealand and India First Test, India team preview, captain  Ajinkya Rahane, Shreyas iyer debut, kanpur test match, Kanpur Green Park, Kanpur pitch report, ಭಾರತ vs ನ್ಯೂಜಿಲ್ಯಾಂಡ್ ಟೆಸ್ಟ್​, ಕಾನ್ಪುರದಲ್ಲಿ ಟೆಸ್ಟ್ ಪಂದ್ಯ​, ಅಜಿಂಕ್ಯ ರಹಾನೆ ನಾಯಕತ್ವ, ಶ್ರೇಯಸ್ ಅಯ್ಯರ್ ಡೆಬ್ಯೂಟ್​, ಭಾರತ vs  ನ್ಯೂಜಿಲ್ಯಾಂಡ್​ ಟೆಸ್ಟ್​ ಚಾಂಪಿಯನ್​ ಶಿಪ್​, ಕಾನ್ಪುರ್​ ಗ್ರೀನ್​ ಪಾರ್ಕ್​, ಕಾನ್ಪುರ್​ ಪಿಚ್​ ರಿಪೋರ್ಟ್​,
ಮೊದಲ ಟೆಸ್ಟ್​
author img

By

Published : Nov 25, 2021, 7:08 AM IST

Updated : Nov 25, 2021, 11:50 AM IST

ಕಾನ್ಪುರ(ಉತ್ತರಪ್ರದೇಶ): ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ನಾಯಕ, ಸ್ಥಿರತೆಯಿಲ್ಲದ ವೇಗದ ಬೌಲರ್​ಗಳು ಮತ್ತು ಕೆಲವು ವೈಟ್​ ಬಾಲ್​ ಕ್ರಿಕೆಟ್​ಗೆ ಸೀಮಿತವಾಗಿದ್ದ ಆಟಗಾರರ ಸಂಯೋಜನೆಯನ್ನು ಒಳಗೊಂಡಿರುವ ಅಜಿಂಕ್ಯ ರಹಾನೆ ನೇತೃತ್ವದ ದ್ವಿತೀಯ ದರ್ಜೆಯ ಭಾರತ ತಂಡ ಗುರುವಾರದಿಂದ (ಇಂದಿನಿಂದ) ಆರಂಭವಾಗಲಿರುವ ನ್ಯೂಜಿಲ್ಯಾಂಡ್​ ವಿರುದ್ಧ ದ ಟೆಸ್ಟ್​ ಸರಣಿಯಲ್ಲಿ ಕಣಕ್ಕಿಳಿಯಲಿದೆ.

ಇಂತಹುದೇ ಯುವ ತಂಡ ಆಸ್ಟ್ರೇಲಿಯಾದಲ್ಲಿ ರೋಹಿತ್, ವಿರಾಟ್ ಕೊಹ್ಲಿ, ಬುಮ್ರಾ ಸೇರಿದಂತೆ ಸ್ಟಾರ್​ ಆಟಗಾರರ ಅನುಪಸ್ಥಿತಿಯಲ್ಲಿ ಆಸೀಸ್​ ಭದ್ರಕೋಟೆ ಗಬ್ಬಾದಲ್ಲಿ ಜಯ ಸಾಧಿಸಿ ಐತಿಹಾಸಿಕ ಟೆಸ್ಟ್​ ಸರಣಿ ಜಯಿಸಿತ್ತು. ಇದೀಗ ಮತ್ತೆ ಅಂತಹುದೇ ತಂಡ ಇಂದಿನಿಂದ ಕಿವೀಸ್​ ವಿರುದ್ಧ ಹೋರಾಟ ನಡೆಸಲು ಎದುರು ನೋಡುತ್ತಿದೆ.

ಓದಿ: ಜೂನಿಯರ್ ಹಾಕಿ ವಿಶ್ವಕಪ್​​: ಮೊದಲ ಪಂದ್ಯದಲ್ಲಿ ಭಾರತ ತಂಡ ಮಣಿಸಿದ ಫ್ರಾನ್ಸ್​

ದಿಗ್ಗಜರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಭಾರತ ತಂಡದಲ್ಲಿ ಪೂಜಾರಾ, ರಹಾನೆ ಮತ್ತು ಮಯಾಂಕ್​ ಮಾತ್ರ 10ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿದ್ದಾರೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ಶುಬ್ಮನ್​​ ​​​ಗಿಲ್​ಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಮತ್ತೊಂದು ಅವಕಾಶ ಸಿಕ್ಕಿದೆ. ಮ್ಯಾನೇಜ್​ಮೆಂಟ್​ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಬಯಸಿತ್ತು. ಆದರೆ, ರಾಹುಲ್ ಸರಣಿಯಿಂದ ಹೊರ ಬಿದ್ದಿರುವುದರಿಂದ ಮಯಾಂಕ್​ ಅಗರ್​ವಾಲ್​ ಜೊತೆಗೆ ಇನ್ನಿಂಗ್ಸ್​ ಆರಂಭಿಸಲಿದ್ದಾರೆ.

ಇವರಿಬ್ಬರಿಗೆ ಇತ್ತೀಚಿನ ಇಂಗ್ಲೆಂಡ್ ಸರಣಿಯಲ್ಲಿ ಫಾರ್ಮ್​ ಕಂಡುಕೊಂಡಿರುವ ಅನುಭವಿ ಪೂಜಾರಾ ಸಾಥ್​ ನೀಡಲಿದ್ದಾರೆ. 4ನೇ ಕ್ರಮಾಂಕದಲ್ಲಿ ಮುಂಬೈ ಸ್ಟಾರ್ ಶ್ರೇಯಸ್ ಅಯ್ಯರ್​ ನಂತರ ನಾಯಕ ರಹಾನೆ ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ವಿಕೆಟ್ ಕೀಪರ್​ ಸಹ 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ.

ಕಾನ್ಪುರದ ಗ್ರೀನ್​​ ಪಾರ್ಕ್​ ಪಿಚ್​ ಸ್ಪಿನ್​ಗೆ ನೆರವು ನೀಡುವುದರಿಂದ ಭಾರತ ತಂಡ 3 ಸ್ಪಿನ್ನರ್​ಗಳು ಅಂದ್ರೆ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಉಮೇಶ್ ಯಾದವ್​ ವೇಗಿಗಳ ವಿಭಾಗದಲ್ಲಿ ಮೊದಲ ಆಯ್ಕೆಯಾಗಿದ್ದಾರೆ. ಇವರಿಗೆ 100 ಟೆಸ್ಟ್​ ಆಡಿರುವ ಇಶಾಂತ್​ ಅಥವಾ ಯುವ ಬೌಲರ್​ ಸಿರಾಜ್​ ಸಾಥ್​ ನೀಡುವ ನಿರೀಕ್ಷೆಯಿದೆ.

ಓದಿ: ಮೇಘಾಲಯ: ಮಾಜಿ ಸಿಎಂ ಸೇರಿದಂತೆ ರಾತ್ರೋರಾತ್ರಿ ತೃಣಮೂಲ ಪಕ್ಷಕ್ಕೆ ಸೇರಿದ 12 ಕಾಂಗ್ರೆಸ್ ಶಾಸಕರು

ಬಲಿಷ್ಠ ನ್ಯೂಜಿಲ್ಯಾಂಡ್​: ನ್ಯೂಜಿಲ್ಯಾಂಡ್​ ಕಡೆ ಟಿ20 ಸರಣಿಯಿಂದ ಹೊರಗುಳಿದಿದ್ದ ನಾಯಕ ಕೇನ್​ ವಿಲಿಯಮ್ಸನ್​ ತಂಡಕ್ಕೆ ಮರಳಲಿದ್ದಾರೆ. ಅನುಭವಿಗಳಾದ ರಾಸ್​ ಟೇಲರ್​, ಟಾಮ್ ಲ್ಯಾಥಮ್​, ಹೆನ್ರಿ ನಿಕೋಲ್ಸ್​ ಮತ್ತು ಟಾಮ್ ಬ್ಲಂಡೆಲ್​ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. ಇವರ ಜೊತೆಗೆ ನೀಲ್ ವ್ಯಾಗ್ನರ್​, ಕೈಲ್ ಜೇಮಿಸನ್ ಹಾಗೂ ಟಿಮ್ ಸೌಥಿಯಂತಹ ಅನುಭವಿ ವೇಗಿಗಳು ಕೂಡ ಅನಾನುಭವಿ ಭಾರತ ತಂಡವನ್ನು ಕಾಡಲು ಸಿದ್ಧರಾಗಿದ್ದಾರೆ.

ಭಾರತದಲ್ಲಿ ವೇಗಿಗಳಿಗಿಂತ ಸ್ಪಿನ್​ ಬೌಲರ್​ಗಳು ಹೆಚ್ಚಿನ ಪರಿಣಾಮಕಾರಿ ಎಂದು ಅರಿತಿರುವ ಕಿವೀಸ್‌ನ ಅಜಾಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್​ ಹಾಗೂ ವಿಲಿಯಮ್​ ಸಮರ್​ವಿಲ್ಲೆ ಅವರನ್ನ ಟೆಸ್ಟ್​ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.

ಇದೇ ಸ್ಟೇಡಿಯಂನಲ್ಲಿ 2016ರಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಭಾರತ 197 ರನ್​ಗಳಿಂದ ಗೆದ್ದು ಬೀಗಿತ್ತು. ರವಿಚಂದ್ರನ್ ಅಶ್ವಿನ್ ಎರಡೂ ಇನ್ನಿಂಗ್ಸ್​ಗಳಿಂದ 10 ವಿಕೆಟ್ ಪಡೆದರೆ, ಜಡೇಜಾ 7 ವಿಕೆಟ್ ಪಡೆದು ಮಿಂಚಿದ್ದರು. ನ್ಯೂಜಿಲ್ಯಾಂಡ್​ ಪರ ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ಮತ್ತು ಮಾರ್ಕ್ ಕ್ರೈಗ್​ ಕಣಕ್ಕಿಳಿದರೂ ಸ್ಯಾಂಟ್ನರ್​ ಮಾತ್ರ 5 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು.

ತಂಡಗಳು...

ಭಾರತ : ಅಜಿಂಕ್ಯ ರಹಾನೆ (ನಾಯಕ), ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ಧಿಮಾನ್ ಸಹಾ (ವಿಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಇಶಾಂತ್ ಸಿರಾಜ್, ಮೊಹಮ್ಮದ್ ಶರ್ಮಾ, ಜಯಂತ್ ಯಾದವ್, ಶ್ರೀಕಾರ್ ಭರತ್ (2ನೇ ವಿಕೀ), ಪ್ರಸಿದ್ಧ ಕೃಷ್ಣ

ನ್ಯೂಜಿಲ್ಯಾಂಡ್​ : ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೀ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೀ), ವಿಲ್ ಯಂಗ್, ಗ್ಲೇನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಕೈಲ್ ಜೇಮಿಸನ್ , ವಿಲಿಯಂ ಸೊಮರ್ವಿಲ್ಲೆ, ಅಜಾಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ

ಪಂದ್ಯದ ಸಮಯ: ಕಾನ್ಪುರದ ಗ್ರೀನ್​ ಪಾರ್ಕ್​ನಲ್ಲಿ ಬೆಳಗ್ಗೆ 9:30ಕ್ಕೆ ಪಂದ್ಯ ಆರಂಭ.

Last Updated : Nov 25, 2021, 11:50 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.