ನಾಟಿಂಗ್ಹ್ಯಾಮ್: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹನುಮ ವಿಹಾರಿ ಗುರುವಾರ ವಾರ್ವಿಕ್ಷೈರ್ ಕ್ಲಬ್ ಪರ ಕೌಂಟಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
ಗುರುವಾರ ನಾಟಿಂಗ್ಹ್ಯಾಮ್ ವಿರುದ್ಧದ ಪಂದ್ಯದಲ್ಲಿ ವಿಹಾರಿ ಪದಾರ್ಪಣೆ ಮಾಡಿದ್ದಾರೆ. ಅವರು ಕಳೆದ ವಾರ ಇಂಗ್ಲೆಂಡ್ಗೆ ತೆರಳಿದ್ದು, ಒಂದು ವಾರ ಕ್ವಾರಂಟೈನ್ ಮುಗಿಸಿದ್ದರು. ಹಾಗಾಗಿ ಡರ್ಬಿಶೈರ್ ವಿರುದ್ಧದ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.
-
💬 “I was following the first game and I’m really excited to join the boys.”
— Warwickshire CCC 🏏 (@WarwickshireCCC) April 15, 2021 " class="align-text-top noRightClick twitterSection" data="
Hanuma Vihari can't wait to meet up with his new teammates at Trent Bridge.
🐻#YouBears pic.twitter.com/M1v2bpmIBA
">💬 “I was following the first game and I’m really excited to join the boys.”
— Warwickshire CCC 🏏 (@WarwickshireCCC) April 15, 2021
Hanuma Vihari can't wait to meet up with his new teammates at Trent Bridge.
🐻#YouBears pic.twitter.com/M1v2bpmIBA💬 “I was following the first game and I’m really excited to join the boys.”
— Warwickshire CCC 🏏 (@WarwickshireCCC) April 15, 2021
Hanuma Vihari can't wait to meet up with his new teammates at Trent Bridge.
🐻#YouBears pic.twitter.com/M1v2bpmIBA
ವಿಸಾ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾದ ಪೀಟರ್ ಮಲನ್ ಈ ವರ್ಷದ ಕೌಂಟಿ ಚಾಂಪಿಯನ್ಶಿಪ್ನಿಂದ ಹೊರಗುಳಿದಿದ್ದರಿಂದ ವಾರ್ವಿಕ್ಷೈರ್ ತಂಡ ವಿಹಾರಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.
27 ವರ್ಷದ ವಿಹಾರಿ ಭಾರತದ ಪರ 12 ಟೆಸ್ಟ್ ಪಂದ್ಯಗಳಿಂದ ಒಂದು ಶತಕ ಸೇರಿದಂತೆ 32ರ ಸರಾಸರಿಯಲ್ಲಿ 624 ರನ್ ಗಳಿಸಿದ್ದಾರೆ. ವಿಹಾರಿ 90 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 7000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲೂ 24 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ:ಡೆಲ್ಲಿ vs ರಾಜಸ್ಥಾನ್: ಯುವ ನಾಯಕರ ಕಾಳಗದಲ್ಲಿ ಗೆಲ್ಲುವವರ‍್ಯಾರು?