ETV Bharat / sports

IND vs WI 2nd Test: ಭಾರತ-ವೆಸ್ಟ್‌ ಇಂಡೀಸ್‌ 2ನೇ ಟೆಸ್ಟ್​; ಮೊದಲ ದಿನ ಭಾರತ 288/4 - ಈಟಿವಿ ಭಾರತ ಕನ್ನಡ

ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಎರಡನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟಕ್ಕೆ ಭಾರತ 4 ವಿಕೆಟ್​ ಕಳೆದುಕೊಂಡು 288 ರನ್​ ಗಳಿಸಿದೆ.

ಭಾರತ-ವೆಸ್ಟ್‌ ಇಂಡೀಸ್‌ 2ನೇ ಟೆಸ್ಟ್
ಭಾರತ-ವೆಸ್ಟ್‌ ಇಂಡೀಸ್‌ 2ನೇ ಟೆಸ್ಟ್
author img

By

Published : Jul 21, 2023, 9:04 AM IST

ಪೋರ್ಟ್​ ಆಫ್​​ ಸ್ಪೇನ್​: ಭಾರತ- ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್​ ಪಂದ್ಯ ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್​ ಪಾರ್ಕ್​ ಓವೆಲ್​ನಲ್ಲಿ ನಿನ್ನೆಯಿಂದ (ಗುರುವಾರ) ಪ್ರಾರಂಭವಾಗಿದೆ. ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್ ​ಗಳಿಸಿತು. ವಿರಾಟ್ ಕೊಹ್ಲಿ 161 ಎಸೆತಗಳಲ್ಲಿ 87 ಮತ್ತು ರವೀಂದ್ರ ಜಡೇಜಾ 84 ಎಸೆತಗಳಲ್ಲಿ 36 ರನ್​ಗಳಿಸಿ ಎರಡನೇ ದಿನದಾಟಕ್ಕೆ ಕ್ರೀಸ್​ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಆರಂಭಿಕ ಬ್ಯಾಟರ್​ಗಳಾದ ರೋಹಿತ್​ ಶರ್ಮಾ (80) ಮತ್ತು ಯಶಸ್ವಿ ಜೈಸ್ವಾಲ್​ (57) ಜೋಡಿ 131 ರನ್​ಗಳ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದರು. ಮೊದಲ ಸೆಷನ್‌ನಲ್ಲಿ ಭಾರತದ ಆರಂಭಿಕ ಜೋಡಿಯನ್ನು ಬೇರ್ಪಡಿಸಲು ಕೆರೆಬಿಯನ್ನರಿಗೆ ಸಾಧ್ಯವಾಗಲಿಲ್ಲ. ಜೈಸ್ವಾಲ್ 49 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ನಾಯಕ ರೋಹಿತ್ ಶರ್ಮಾ 74 ಎಸೆತಗಳಲ್ಲಿ ಸಿಕ್ಸರ್‌ ನೆರವಿನಿಂದ ಅರ್ಧಶತಕ ಪೂರೈಸಿದರು. ಭೋಜನ ವಿರಾಮದ ಹೊತ್ತಿಗೆ ಭಾರತ ವಿಕೆಟ್​ ನಷ್ಟವಿಲ್ಲದೆ 121 ರನ್​ ಗಳಿಸಿತ್ತು.

ಶುಭಮನ್‌ ಗಿಲ್ ಮತ್ತೆ ವಿಫಲ: ಬಳಿಕ ವಿಂಡೀಸ್​ ಬೌಲರ್​ಗಳು ಬಿಗಿ ಬೌಲಿಂಗ್​ ಮಾಡಿದರು. ವಿರಾಮದ ಬಳಿಕ 61 ರನ್​ಗಳಿಗೆ ಭಾರತ ​4 ವಿಕೆಟ್ ಕಳೆದುಕೊಂಡಿತು. ಹೋಲ್ಡರ್​​ ಎಸೆತದಲ್ಲಿ ಜೈಸ್ವಾಲ್ ಕ್ಯಾಚೌಟ್​ ಆದರೆ, ಶುಭ್​ಮನ್​ ಗಿಲ್​ (10) ಕೆಮರ್​ ರೋಚ್​ ಎಸೆತದಲ್ಲಿ ವಿಕೆಟ್​ ಒಪ್ಪಿಸಿ ಹೊರನಡೆದರು. ಎರಡನೇ ಟೆಸ್ಟ್ ಪಂದ್ಯದಲ್ಲೂ ಉತ್ತಮ ಸ್ಕೋರ್​ ಗಳಿಸುವಲ್ಲಿ ಗಿಲ್​​ ವಿಫಲರಾದರು. ಮತ್ತೊಂದೆಡೆ, ಉತ್ತಮ ಲಯದಲ್ಲಿದ್ದ ನಾಯಕ ರೋಹಿತ್​ ಶರ್ಮಾ, ಜೊಮೆಲ್​ ವಾರಿಕ್ಯಾನ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಎರಡನೇ ಪಂದ್ಯದಲ್ಲೂ ಶತಕ ವಂಚಿತರಾದರು.

ಅಜಿಂಕ್ಯಾ ರಹಾನೆ (8) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೇ ಗಬ್ರೆಲ್​ಗೆ ವಿಕೆಟ್​ ಒಪ್ಪಿಸಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಭಾರತದ ಸ್ಕೋರ್​ 4 ವಿಕೆಟ್​ ನಷ್ಟಕ್ಕೆ 182 ಆಗಿತ್ತು. ವಿರಾಟ್​ ಕೊಹ್ಲಿ ಮತ್ತು ಜಡೇಜಾ ಸಮಯೋಚಿತ ಪ್ರದರ್ಶನ ನೀಡಿದ್ದು ಐದನೇ ವಿಕೆಟ್‌ಗೆ 201 ಎಸೆತಗಳಲ್ಲಿ 106 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಆಸೆರೆಯಾದರು.

ವಿರಾಟ್‌ ಕೊಹ್ಲಿ ದಾಖಲೆ: ಮತ್ತೊಂದೆಡೆ, ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ 39 ರನ್​ ಗಳಿಸುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25,500 ರನ್ ಪೂರೈಸಿದರು. ಸಚಿನ್ ತೆಂಡೂಲ್ಕರ್ ಅವರ ನಂತರ ಈ ದಾಖಲೆ ಮಾಡಿದ ಭಾರತದ ಎರಡನೇ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಸಚಿನ್ ಮತ್ತು ಕೊಹ್ಲಿ ಬಿಟ್ಟರೆ ಯಾವುದೇ ಭಾರತೀಯ ಬ್ಯಾಟರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: ಏಷ್ಯನ್ ಗೇಮ್ಸ್ 2023: ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ವಿನೇಶ್ - ಬಜರಂಗ್ ವಿನಾಯಿತಿ ವಿರುದ್ಧ ಜೂನಿಯರ್​ ಕುಸ್ತಿಪಟುಗಳ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.