ETV Bharat / sports

IND vs SL 2nd ODI: 39.4 ಓವರ್​​ಗಳಲ್ಲಿ 215 ರನ್ ಗಳಿಸಿ ಸರ್ವ ಪತನ ಕಂಡ ಲಂಕಾ - ಈಡನ್ ಗಾರ್ಡನ್ಸ್ ಮೈದಾನ

ಇಂದಿನ 2ನೇ ಏಕದಿನ ಪಂದ್ಯದಲ್ಲಿ ಲಂಕಾ ತಂಡ 39.4 ಓವರ್​ಗಳಲ್ಲಿ 215 ರನ್ ಗಳಿಸಿ ತನ್ನ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡಿದೆ.

India vs Sri Lanka 2nd ODI
India vs Sri Lanka 2nd ODI
author img

By

Published : Jan 12, 2023, 5:24 PM IST

Updated : Jan 12, 2023, 6:07 PM IST

ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗುರುವಾರ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಕೇವಲ 39.4 ಓವರ್​ಗಳಲ್ಲಿ 215 ರನ್ ಗಳಿಸಿ ತನ್ನ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಸುನ್ ಶನಕ ನಾಯಕತ್ವದ ಲಂಕಾ ತಂಡ, ಭಾರತದ ಬೌಲರ್​ಗಳ ಮುಂದೆ ತಮ್ಮ ಪ್ರದರ್ಶನ ತೋರ್ಪಡಿಸಲು ವಿಫಲರಾದರು. ಕೇವಲ 216 ರನ್​ಗಳ ಟಾಗೆಟ್​ ನೀಡಿ ತೃಪ್ತಿಪಡಬೇಕಾಯಿತು.

ಎದುರಾಳಿ ತಂಡವನ್ನು ಆರಂಭದಿಂದಲೂ ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್​ಗಳು ಅವರನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಯಶಸ್ವಿಯಾದರು. ಭಾರತದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಆರನೇ ಓವರ್​ನ ಕೊನೆಯ ಎಸೆತದಲ್ಲಿ ಎನ್ ಫೆರ್ನಾಂಡೋ ಅವರನ್ನು ಬೋಲ್ಡ್ ಮಾಡುವ ಮೂಲಕ ವಿಕೆಟ್ ಖಾತೆಯನ್ನು ತೆರೆದರು. ಕುಲ್‌ದೀಪ್ ಯಾದವ್ ಕೂಡ ತಮ್ಮ ಕೈಚಳಕ ತೋರಿಸುವ ಮೂಲಕ ಇವತ್ತಿನ ಪಂದ್ಯದಲ್ಲಿ ಹೀರೋ ಆದರು.

ಕಳೆದ ತಿಂಗಳು ಚಟ್ಟೋಗ್ರಾಮ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಭಾರತದ ಪರ ಐದು ವಿಕೆಟ್‌ಗಳನ್ನು ಪಡೆದು ಮಿಂಚಿದ್ದ ಕುಲ್‌ದೀಪ್ ಯಾದವ್, ಇದೀಗ ಮತ್ತೆ ಅದೇ ಖದರ್​ ತೋರ್ಪಡಿಸಿದ್ದಾರೆ. ಬಲ ಭುಜದ ನೋವಿನಿಂದ ಹೊರಗುಳಿದಿರುವ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಸ್ಥಾನ ತುಂಬಿದ್ದರು. ನಿರೀಕ್ಷೆಯಂತೆ ತಮ್ಮ ಮೊನಚಾದ ಬೌಲಿಂಗ್​ನಿಂದ ಕುಲದೀಪ್ (3/51) ತಮ್ಮ ಮೊದಲ ಐದು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎದುರಾಳಿ ತಂಡಕ್ಕೆ ಮುಳುವಾದರು. ಮೊಹಮ್ಮದ್ ಸಿರಾಜ್ 3, ಉಮ್ರಾನ್ ಮಲಿಕ್ 2 ಪಡದೆರೆ, ಅಕ್ಷರ್ ಪಟೇಲ್ 1 ವಿಕೆಟ್ ಕಿತ್ತರು.

ಲಂಕಾ ಪರ ನುವಾನಿದು ಫೆರ್ನಾಂಡೋ(50), ಅವಿಷ್ಕ ಫೆರ್ನಾಂಡೋ(20), ವಿಕೆಟ್ ಕೀಪರ್ ಕುಸಲ್ ಮೆಂಡಿಸ್ (34), ಧನಂಜಯ ಡಿ ಸಿಲ್ವ(0), ಚರಿತ್ ಅಸಲಂಕ(15), ನಾಯಕ ದಸುನ್ ಶನಕ (2), ವನಿಂದು ಹಸರಂಗ(21), ದುನಿತ್ ವೆಲ್ಲಲಗೆ(32), ಚಾಮಿಕ ಕರುಣಾರತ್ನೆ(17), ಲಹಿರು ಕುಮಾರ(0), ಕಸುನ್ ರಜಿತ ಔಟಾಗದೆ 17 ರನ್ ಗಳಿಸಿದರು. ಚೊಚ್ಚಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ ನುವಾನಿದು ಫೆರ್ನಾಂಡೋ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಹೆಚ್ಚುವರಿ ರನ್​ : (LB-1, W-5, NB-1) = 7, ಒಟ್ಟು: (10 ವಿಕೆಟ್‌ಗಳಿಗೆ, 39.4 ಓವರ್‌ಗಳಿಗೆ) = 215, ವಿಕೆಟ್ ಪತನ: 29-1, 102-2, 103-3, 118-4, 125-5, 126-6, 152-7, 177-8, 215-9, 215-10.

ಬೌಲರ್: ಮೊಹಮ್ಮದ್ ಶಮಿ 7-0-43-0, ಮೊಹಮ್ಮದ್ ಸಿರಾಜ್ 5.4-0-30-3, ಹಾರ್ದಿಕ್ ಪಾಂಡ್ಯ 5-0-26-0, ಉಮ್ರಾನ್ ಮಲಿಕ್ 7-0-48-2, ಕುಲದೀಪ್ ಯಾದವ್ 10-0-51- 3, ಅಕ್ಷರ್ ಪಟೇಲ್ 5-0-16-1.

ಇದನ್ನೂ ಓದಿ: 2023ರ ಐಪಿಎಲ್​ ಮಿಸ್​ ಮಾಡಿಕೊಳ್ಳಲಿದ್ದಾರೆ ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಪಂತ್​: ಗಂಗೂಲಿ

ಭಾರತದ ಪರ ಬಲ ಭುಜದ ನೋವಿನಿಂದಾಗಿ ಯುಜುವೇಂದ್ರ ಚಹಾಲ್ 2ನೇ ಏಕದಿನ ಪಂದ್ಯಕ್ಕೆ ಅಲಭ್ಯರಾದರು. ಎದುರಾಳಿ ದಸುನ್ ಶನಕ ನೇತೃತ್ವದ ಶ್ರೀಲಂಕಾ ಕೂಡ ಎರಡು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿಯೂ ಟಾಸ್​ ಗೆದ್ದಿದ್ದ ಲಂಕಾ, ಚೇಸ್​ ಮಾಡುವ ನಿರ್ಧಾರದಿಂದ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತ್ತು. ಆದರೆ, ಇಂದು ತಮ್ಮ ನಿರ್ಧಾರವನ್ನು ಬದಲಿಸಿಕೊಂಡು ಬ್ಯಾಟಿಂಗ್​ ಮಾಡಲು ಕಣಕ್ಕಿಳಿದಿತ್ತು.

ವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 67 ರನ್‌ಗಳ ಜಯ ಸಾಧಿಸುವ ಮೂಲಕ 1-0 ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ 67 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ 83 ರನ್ ಗಳಿಸಿದರೆ, ಶುಭಮನ್ ಗಿಲ್ 60 ಎಸೆತಗಳಲ್ಲಿ 11 ಬೌಂಡರಿ ಒಳಗೊಂಡ 70 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ 87 ಎಸೆತಗಳಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 113 ರನ್ ಗಳಿಸಿ ದಾಖಲೆ ಬರೆದರು.

ಇದನ್ನೂ ಓದಿ: ಮಾರಾಟ ತೆರಿಗೆ ಇಲಾಖೆ ನೋಟಿಸ್​ಗಳ​ ವಿರುದ್ಧ ಹೈಕೋರ್ಟ್​ ಮೊರೆ ಹೋದ ನಟಿ ಅನುಷ್ಕಾ ಶರ್ಮಾ

Last Updated : Jan 12, 2023, 6:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.