ETV Bharat / sports

ಭಾರತದ ವೇಗಿ ಮೊಹಮ್ಮದ್​ ಸಿರಾಜ್​ ತಂದೆ ನಿಧನ: ಅಂತ್ಯಕ್ರಿಯೆಗೆ ಬರಲು ಕೋವಿಡ್​ ನಿಯಮ​ ಅಡ್ಡಿ

ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ ಮೊಹಮ್ಮದ್ ಘೌಸ್ (53) ಹೈದರಾಬಾದ್​​​​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

author img

By

Published : Nov 20, 2020, 8:21 PM IST

Mohammad Siraj’s
ಭಾರತದ ವೇಗಿ ಮೊಹಮ್ಮದ್​ ಸಿರಾಜ್

ಹೈದರಾಬಾದ್: ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರ ತಂದೆ ಮೊಹಮ್ಮದ್ ಘೌಸ್ (53) ಹೈದರಾಬಾದ್​​​​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಮೊಹಮ್ಮದ್​ ಸಿರಾಜ್​ಗೆ​​ ಈ ಸುದ್ದಿ ತಲುಪಿದೆ. ನವೆಂಬರ್ 27ರಿಂದ ನಡೆಯಲಿರುವ ಏಕದಿನ ಮತ್ತು ಟಿ-20 ಸರಣಿಗೆ ರಾಷ್ಟ್ರೀಯ ತಂಡದೊಂದಿಗೆ ಅಭ್ಯಾಸ ನಡೆಸಿದ ಬಳಿಕ ಅವರಿಗೆ ತಂದೆ ನಿಧನದ ಸುದ್ದಿಗೆ ಗೊತ್ತಾಗಿದೆ ಎಂದು ವರದಿಯಾಗಿದೆ. ಕೊರೊನಾ ನಿಯಮಗಳನ್ನು ಪಾಲಿಸಬೇಕಾದ ಹಿನ್ನೆಲೆಯಲ್ಲಿ ತಂದೆಯ ಅಂತ್ಯಕ್ರಿಯೆಗೆ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ನಿಧನದ ಸುದ್ದಿ ಕೇಳಿದ ನಂತರ ಆಘಾತಕ್ಕೆ ಒಳಗಾಗಿರುವ ಸಿರಾಜ್​, ನನ್ನ ಜೀವನದ ದೊಡ್ಡ ಬೆನ್ನೆಲುಬುನ್ನೇ ಕಳೆದುಕೊಂಡೆ. ನಾನು ದೇಶಕ್ಕಾಗಿ ಆಡುವುದನ್ನು ನೋಡುವುದು ಅವರ ಕನಸಾಗಿತ್ತು. ಅವರ ಕನಸು ನನಸಾಗಿದೆ. ಆದರೆ ಅವರಿಲ್ಲ ಅನ್ನೋದು ತುಂಬಾ ಆಘಾತ ಮೂಡಿಸಿದೆ ಎಂದು ಕ್ರೀಡಾ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.