ETV Bharat / sports

5 ವಿಕೆಟ್​ ಗುಚ್ಛ, ಅರ್ಧಶತಕದ ಸಾಧನೆ: ಕಪಿಲ್‌ ದಾಖಲೆ ಪುಡಿಗಟ್ಟಿ ಜಡೇಜಾ ಭರ್ಜರಿ ಕಮ್‌ಬ್ಯಾಕ್!

ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್​​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಸ್ಪಿನ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ದಾಖಲೆ ಮುರಿದರು.

Etv Bharat
Etv Bharat
author img

By

Published : Feb 10, 2023, 4:58 PM IST

ನಾಗ್ಪುರ (ಮಹಾರಾಷ್ಟ್ರ) : ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ನ ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಅರ್ಧಶತಕ ಬಾರಿಸುವ ಮೂಲಕ 1983 ರ ವಿಶ್ವಕಪ್​ ವಿಜೇತ ನಾಯಕ ಕಪಿಲ್​ ದೇವ್​ ಅವರ ದಾಖಲೆಯನ್ನು ಪುಡಿಗಟ್ಟಿದರು. ಟೆಸ್ಟ್​ನಲ್ಲಿ ಐದು ಬಾರಿ 5 ವಿಕೆಟ್​ ಗೊಂಚಲು ಮತ್ತು ಅರ್ಧಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಕಪಿಲ್​ದೇವ್​ 4 ಬಾರಿ ಈ ಸಾಧನೆ ಮಾಡಿದ್ದರು.

ಗಾಯದಿಂದ ಚೇತರಿಸಿಕೊಂಡು ಟೆಸ್ಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ರವೀಂದ್ರ ಜಡೇಜಾ ಸ್ಪಿನ್​ ಅಸ್ತ್ರದಿಂದ ಆಸೀಸ್​ನ ಐವರು ಬ್ಯಾಟರ್‌​ಗಳನ್ನು ಪೆವಿಲಿಯನ್​ಗಟ್ಟಿದ್ದರು. ಬೌಲಿಂಗ್​ನಲ್ಲಿ ಮಿಂಚಿದ್ದ ಜಡೇಜಾ ಬ್ಯಾಟಿಂಗ್​ನಲ್ಲೂ ಕರಾಮತ್ತು ತೋರಿಸಿ ಅರ್ಧಶತಕ ಗಳಿಸಿದ್ದಾರೆ. ಜಡೇಜಾ ಮೊದಲ ದಿನದಾಟದಲ್ಲಿ 47 ರನ್‌ ನೀಡಿ 5 ವಿಕೆಟ್‌ಗಳನ್ನು ಪಡೆದಿದ್ದರೆ, ಎರಡನೇ ದಿನದಂದು 156 ಎಸೆತಗಳಲ್ಲಿ ಅರ್ಧಶತಕ(60) ಗಳಿಸಿ ಆಸ್ಟ್ರೇಲಿಯಾವನ್ನು ಕಾಡಿದರು.

ಈ ಮೂಲಕ ಭಾರತದ ಮಾಜಿ ಆಲ್​ರೌಂಡರ್​ ಕ್ರಿಕೆಟಿಗ ಕಪಿಲ್​ ದೇವ್​ ಹೆಸರಲ್ಲಿದ್ದ ದಾಖಲೆ ಮುರಿದರು. ಕಪಿಲ್​ 4 ಬಾರಿ ಪಂದ್ಯವೊಂದರಲ್ಲಿ 5 ವಿಕೆಟ್​ ಮತ್ತು ಅರ್ಧಶತಕ ಗಳಿಸಿದ್ದರು. ಇದನ್ನು ಮೀರಿದ ಜಡೇಜಾ 5 ಬಾರಿ ಈ ಸಾಧನೆ ಮಾಡಿದ ಏಕೈಕ ಭಾರತೀಯ ಎಂಬ ಅಭಿದಾನಕ್ಕೆ ಪಾತ್ರರಾದರು.

ಆಸೀಸ್​ ಬ್ಯಾಟರ್​ಗಳ ಕಾಡಿದ್ದ ಜಡೇಜಾ: ಟೆಸ್ಟ್​ನ ಮೊದಲ ದಿನದಲ್ಲಿ ಮೊದಲು ಬ್ಯಾಟಿಂಗ್​ ಇಳಿದ ಆಸ್ಟ್ರೇಲಿಯಾಕ್ಕೆ ಆರಂಭದಲ್ಲೇ ಭಾರತದ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಅವರನ್ನು ಬೇಗನೆ ಔಟ್ ಮಾಡಿದರು. ಬಳಿಕ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್​ 82 ರನ್‌ಗಳ ಜೊತೆಯಾಟದೊಂದಿಗೆ ತಂಡಕ್ಕೆ ನೆರವಾದರು. ದೊಡ್ಡ ಇನಿಂಗ್ಸ್​ ಕಟ್ಟು ಮುನ್ಸೂಚನೆ ನೀಡಿದ್ದ ಜೋಡಿಯನ್ನು ಬೇರ್ಪಡಿಸಲು ನಾಯಕ ರೋಹಿತ್​ ಜಡೇಜಾಗೆ ಬೌಲ್ ನೀಡಿದರು. ನಂಬಿಕೆ ಹುಸಿ ಮಾಡದ ಜಡ್ಡು ಅರ್ಧಶತಕದ (49) ಅಂಚಿನಲ್ಲಿದ್ದ ಲಬುಶೇನ್​ರನ್ನು ಔಟ್​ ಮಾಡಿದರು. ನಂತರದ ಎಸೆತದಲ್ಲೇ ಮ್ಯಾಟ್ ರೆನ್‌ಶಾ ವಿಕೆಟ್‌ ಕಿತ್ತು ಡಬಲ್​ ಸ್ಟ್ರೋಕ್​ ನೀಡಿದರು.

ಇದಾದ ಬಳಿಕ ಸ್ಟೀವ್ ಸ್ಮಿತ್ (37), ಟಾಡ್ ಮರ್ಫಿ (0), ಪೀಟರ್ ಹ್ಯಾಂಡ್ಸ್​​ಕಾಂಬ್ ​(31) ವಿಕೆಟ್​ ಕಿತ್ತರು. ಸ್ಪಿನ್​ ಅಸ್ತ್ರಕ್ಕೆ ನಲುಗಿದ ಆಸ್ಟ್ರೇಲಿಯಾ 177 ರನ್​ಗೆ ಗಂಟುಮೂಟೆ ಕಟ್ಟಿತ್ತು. ಇನಿಂಗ್ಸ್​ ಆರಂಭಿಸಿರುವ ಭಾರತ ಸದ್ಯಕ್ಕೆ 7 ವಿಕೆಟ್​ ಕಳೆದುಕೊಂಡು 297 ರನ್​ ಗಳಿಸಿದೆ. ನಾಯಕ ರೋಹಿತ್​ ಶರ್ಮಾ 120 ರನ್​ ಗಳಿಸಿ ಭರ್ಜರಿ ಶತಕ ಸಾಧನೆ ಮಾಡಿದರೆ, ಉಳಿದ ಆಟಗಾರರು ಟಾಡ್​ ಮೊರ್ಪಿ ಸ್ಪಿನ್​ ದಾಳಿಗೆ ನಲುಗಿ ಪೆವಿಲಿಯನ್​ ಪರೇಡ್​ ಮಾಡಿದರು.

ಭರ್ಜರಿ ಕಮ್​ಬ್ಯಾಕ್​: ಕಳೆದ ವರ್ಷ ಏಷ್ಯಾ ಕಪ್‌ನಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ರವೀಂದ್ರ ಜಡೇಜಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಸೇರಿ ಕೆಲ ಸರಣಿಗಳನ್ನು ತಪ್ಪಿಸಿಕೊಂಡಿದ್ದರು. ಐದು ತಿಂಗಳ ಬಳಿಕ ಮತ್ತೆ ಸಕ್ರಿಯ ಕ್ರಿಕೆಟ್​ಗೆ ಮರಳುವ ಮುನ್ನ ಫಿಟ್‌ನೆಸ್ ಪರೀಕ್ಷೆಗಾಗಿ ರಣಜಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧದ ಸೌರಾಷ್ಟ್ರ ಪರವಾಗಿ ಕಣಕ್ಕಿಳಿದಿದ್ದರು. ಭರ್ಜರಿ ಪ್ರದರ್ಶನ ನೀಡಿದ್ದ ಜಡ್ಡು ತಮಿಳುನಾಡಿನ ಎರಡನೇ ಇನ್ನಿಂಗ್ಸ್‌ನಲ್ಲಿ 53 ರನ್‌ ನೀಡಿ 7 ವಿಕೆಟ್‌ಗಳನ್ನು ಪಡೆದಿದ್ದರು.

ಇದನ್ನೂ ಓದಿ: IND vs AUS 1st Test: ರೋಹಿತ್​ ಶರ್ಮಾ ಶತಕ, ಭಾರತ 7 ವಿಕೆಟ್​ಗೆ 242 ರನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.