Watch.. ಮೆಮೊರಿಯಲ್ ಹಾಲ್ನಲ್ಲಿ ಕಾಣಿಸಿಕೊಂಡ ಹೆಬ್ಬಾವು: ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್ ಶ್ಯಾಮ್ - PYTHON SPOTTED
🎬 Watch Now: Feature Video
Published : Nov 27, 2024, 5:50 PM IST
ಮೈಸೂರು: ವಿಜಯನಗರ 2ನೇ ಹಂತದ ಮೆಮೋರಿಯಲ್ ಹಾಲ್ ಒಂದರಲ್ಲಿ ಮಂಗಳವಾರ ರಾತ್ರಿ ಕಾಣಿಸಿಕೊಂಡ ಹೆಬ್ಬಾವವನ್ನು ಉರಗತಜ್ಞ ಸ್ನೇಕ್ ಶ್ಯಾಮ್ ಸುರಕ್ಷಿತವಾಗಿ ಸೆರೆಹಿಡಿದು, ಕಾಡಿಗೆ ಬಿಟ್ಟಿದ್ದಾರೆ.
ಸುಮಾರು 8 ಅಡ್ಡಿ ಉದ್ದದ 15 ಕೆಜಿಗೂ ಹೆಚ್ಚು ತೂಕದ ಹೆಬ್ಬಾವೊಂದು ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಉರಗತಜ್ಞ ಸ್ನೇಕ್ ಶ್ಯಾಮ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅವರು, ಹೆಬ್ಬಾವು ಹಾಲ್ನಿಂದ ರಸ್ತೆ ಕಡೆ ಬಂದಾಗ ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಬೃಹತ್ ಆಕಾರದ ಹೆಬ್ಬಾವನ್ನು ನೋಡಲು ಸೇರಿದ ಸುತ್ತಮುತ್ತಲ ಜನರು ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಸೆರೆ ಹಿಡಿದರು.
"ನಗರದಲ್ಲಿ ಈ ರೀತಿ ಹೆಬ್ಬಾವುಗಳು ಕಾಣಿಸಿಕೊಳ್ಳುವುದು ಅಪರೂಪ. ಆದರೂ ಆಹಾರ ಅರಸಿ ಚರಂಡಿ ಪಕ್ಕದಲ್ಲಿ ಓಡಾಡುವ, ಇಲಿ, ಹೆಗ್ಗಣ ಸೇರಿದಂತೆ ಇತರ ಆಹಾರಗಳನ್ನು ಹುಡಿಕಿಕೊಂಡು ಬಂದಿದೆ ಅಷ್ಟೇ. ಈ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು, ಕಾಡಿಗೆ ಬಿಡಲಾಯಿತು" ಎಂದು ಉರಗತಜ್ಞ ಸ್ನೇಕ್ ಶ್ಯಾಮ್ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
ಇದನ್ನೂ ನೋಡಿ: Watch.. ಜನ ಶತಾಬ್ದಿ ರೈಲಿನ ಎಸಿ ಕೋಚ್‌ನಲ್ಲಿ ಹಾವು ಪ್ರತ್ಯಕ್ಷ: ಬೆಚ್ಚಿಬಿದ್ದ ಪ್ರಯಾಣಿಕರು