ETV Bharat / bharat

ನಾಳೆ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಪ್ರಿಯಾಂಕಾ ಗಾಂಧಿ: ಡಿ. 1 ರಂದು ವಯನಾಡ್​ನಲ್ಲಿ ರೋಡ್​ ಶೋ - PRIYANKA GANDHI TO TAKE OATH

ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಸಹೋದರ ರಾಹುಲ್​ ಗಾಂಧಿ, ಡಿಸಿಎಂ ಡಿ.ಕೆ.ಶಿವಕುಮಾರ್​ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ಶುಭಾಶಯಗಳನ್ನು ಕೋರಿದರು.

Priyanka Gandhi Vadra
ಪ್ರಿಯಾಂಕಾ ಗಾಂಧಿ ವಾದ್ರಾ (ETV Bharat)
author img

By ETV Bharat Karnataka Team

Published : Nov 27, 2024, 5:51 PM IST

Updated : Nov 27, 2024, 7:11 PM IST

ನವದೆಹಲಿ: ವಯನಾಡು​ ಲೋಕಸಭಾ ಕ್ಷೇತ್ರದಿಂದ ಭಾರೀ ಮತಗಳ ಅಂತರದಿಂದ ಗೆದ್ದಿರುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನವೆಂಬರ್​ 28 ರಂದು ಲೋಕಸಭಾ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿಲಿದ್ದಾರೆ. ಗುರುವಾರ ಪ್ರಮಾಣವಚನ ಸ್ವೀಕರಿಸಲಿರುವ ಪ್ರಿಯಾಂಕಾ ಗಾಂಧಿ ಅವರನ್ನು ಅಭಿನಂದಿಸಲು ಕಾಂಗ್ರೆಸ್​ ನಾಯಕರು ಹೂಗುಚ್ಛಗಳೊಂದಿಗೆ ಸಾಲುಗಟ್ಟಿ ನಿಂತಿದ್ದು, 20 ವರ್ಷಗಳ ಕಾಯುವಿಕೆಗೆ ಕೊನೆಗೂ ಅಂತ್ಯ ಸಿಕ್ಕಿದೆ ಎಂದು ಉದ್ಘರಿಸಿದ್ದಾರೆ.

ಪಕ್ಷದ ಆಂತರಿಕ ಮಾಹಿತಿಯ ಪ್ರಕಾರ, ಪ್ರಮಾಣವಚನ ಸ್ವೀಕರಿಸಿದ ಬಳಿಕ ಪ್ರಿಯಾಂಕಾ ಗಾಂಧಿ ಅವರು ನವೆಂಬರ್​ 29ರಂದು ವಯನಾಡ್​ಗೆ ತೆರಳಲಿದ್ದು, ಡಿಸೆಂಬರ್​ 1 ರಂದು ತಮ್ಮ ಕ್ಷೇತ್ರದಲ್ಲಿ ಮೆಗಾ ರೋಡ್​ ಶೋ ನಡೆಸುವ ಮೂಲಕ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಕೇರಳದ ಹಿರಿಯ ನಾಯಕರು ಬುಧವಾರ ಪ್ರಿಯಾಂಕಾ ಗಾಂಧಿ ಅವರಿಗೆ ವಿಜಯದ ಪ್ರಮಾಣಪತ್ರವನ್ನು ಹಸ್ತಾಂತರಿಸಿದರೆ, ಸಹೋದರ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅವರಿಗೆ ಸಿಹಿ ತಿನ್ನಿಸಿದರು.

ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿಡಬ್ಲ್ಯೂಸಿ ಸದಸ್ಯ ಕಮಲೇಶ್ವರ್ ಪಟೇಲ್, ತೆಲಂಗಾಣ ಸಚಿವ ಪೊನ್ನಂ ಪ್ರಭಾಕರ್ ಮತ್ತು ದೆಹಲಿಯ ಎಐಸಿಸಿ ಉಸ್ತುವಾರಿ ಖಾಜಿ ನಿಜಾಮುದ್ದೀನ್ ಸೇರಿ ಹಲವು ಕಾಂಗ್ರೆಸ್​ ನಾಯಕರು ಪ್ರಿಯಾಂಕಾ ಗಾಂಧಿ ಅವರನ್ನು ಅಭಿನಂದಿಸಿದರು.

"ಕಾಂಗ್ರೆಸ್ ನಾಯಕರು ಮಾತ್ರವಲ್ಲ ಜನರು ಕಳೆದ 20 ವರ್ಷಗಳಿಂದ ಪ್ರಿಯಾಂಕಾ ಗಾಂಧಿ ಅವರ ಸಂಸತ್ತು ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ. ಸದನದಲ್ಲಿ ಅವರ ಉಪಸ್ಥಿತಿಯು ಇಡೀ ಪ್ರತಿಪಕ್ಷಗಳಿಗೆ ಹೊಸ ಶಕ್ತಿಯನ್ನು ನೀಡುತ್ತದೆ. ಅವರು ದೀರ್ಘಕಾಲದಿಂದ ಸಂಸತ್ತಿನ ಹೊರಗೆ ದೀನದಲಿತರ ಮತ್ತು ಸಾಮಾನ್ಯರ ಧ್ವನಿಯಾಗಿದ್ದಾರೆ. ಆದರೆ ಇನ್ನು ಮುಂದೆ ನಾವು ಅವರ ಧ್ವನಿಯನ್ನು ಸದನದಲ್ಲಿ ಕೇಳುತ್ತೇವೆ. ಅವರ ಪ್ರಮಾಣ ವಚನ ಸ್ವೀಕಾರದ ಬಗ್ಗೆ ನಾವೆಲ್ಲರೂ ಉತ್ಸುಕರಾಗಿದ್ದೇವೆ. ಅವರು ಸಂಸತ್ತಿನ ಭವನದ ಸಂಕೀರ್ಣವನ್ನು ತಲುಪಿದಾಗ ನಾವೆಲ್ಲರೂ ಅವರನ್ನು ಸ್ವಾಗತಿಸುತ್ತೇವೆ. ಪ್ರಮಾಣವಚನ ಸ್ವೀಕರಿಸುವ ಮೊದಲು ಗುರುವಾರ ಅವರನ್ನು ಸದನಕ್ಕೆ ಕರೆತರುತ್ತೇವೆ" ಎಂದು ಕಾಂಗ್ರೆಸ್ ಸಂಸದ ಮೊಹಮ್ಮದ್ ಜವೈದ್ ಈಟಿವಿ ಭಾರತ್‌ಗೆ ತಿಳಿಸಿದರು.

"ಅವರ ಉಪಸ್ಥಿತಿ ಕಾಂಗ್ರೆಸ್​ ಸದಸ್ಯರನ್ನು ಮಾತ್ರವಲ್ಲ, ಆಡಳಿತ ಸರ್ಕಾರದ ವಿರುದ್ಧ ಸತ್ಯವನ್ನು ಮಾತನಾಡಲಾಗದೆ, ಉಸಿರುಗಟ್ಟುವ ಪರಿಸ್ಥಿತಿಯಲ್ಲಿ ಇರುವವರನ್ನೂ ಹುರಿದುಂಬಿಸುತ್ತದೆ. ಇನ್ನು ಮುಂದೆ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಧ್ವನಿ ಗಟ್ಟಿಯಾಗಲಿದೆ,'' ಎಂದು ಹೇಳಿದರು.

ಪ್ರಿಯಾಂಕಾ ಅವರನ್ನು ಭೇಟಿ ಮಾಡಿದ ಸಿಡಬ್ಲ್ಯುಸಿ ಸದಸ್ಯ ಕಮಲೇಶ್ವರ್ ಪಟೇಲ್, "ಲೋಕಸಭೆಯಲ್ಲಿ ಅವರ ಉಪಸ್ಥಿತಿಯು ವಿವಿಧ ವಿಷಯಗಳಲ್ಲಿ ಎನ್‌ಡಿಎಯನ್ನು ಪ್ರಶ್ನಿಸುತ್ತಿರುವ ರಾಹುಲ್ ಗಾಂಧಿಯವರ ಕೈಗಳನ್ನು ಬಲಪಡಿಸುತ್ತದೆ. ಅವರು ತುಂಬಾ ಸ್ಪಷ್ಟವಾಗಿ ಮಾತನಾಡುತ್ತಾರೆ ಮತ್ತು ಬಡವರಿಗೆ ನ್ಯಾಯ ಒದಗಿಸಲು ನಿಯಮಿತವಾಗಿ ಸರ್ಕಾರದ ಮೇಲೆ ದಾಳಿ ಮಾಡುತ್ತಾರೆ. ಆ ಹೋರಾಟ ಈಗ ಸದನದಲ್ಲಿ ಗಟ್ಟಿಯಾಗಲಿದೆ. ಈಗಾಗಲೇ ರಾಷ್ಟ್ರೀಯ ನಾಯಕಿಯಾಗಿರುವ ಅವರ ಲೋಕಸಭೆ ಪ್ರವೇಶವು ಖಂಡಿತವಾಗಿಯೂ ಪಕ್ಷವನ್ನು ಉತ್ತೇಜಿಸುತ್ತದೆ.

"ಗಾಂಧಿ ಕುಟುಂಬ ಬಡವರ ಪರ ರಾಜಕೀಯಕ್ಕೆ ಸಮಾನಾರ್ಥಕವಾಗಿದೆ. ಅವರು ದೊಡ್ಡ ಬ್ರ್ಯಾಂಡ್ ಮತ್ತು ಯಾವಾಗಲೂ ಕೆಲವು ಮೌಲ್ಯಗಳ ಪರವಾಗಿ ನಿಲ್ಲುತ್ತಾರೆ. ಪ್ರಥಮ ಬಾರಿಗೆ ಗಾಂಧಿ ಕುಟುಂಬದ ಮೂವರೂ ಸದಸ್ಯರು ಸಂಸತ್ತಿನಲ್ಲಿ ಇರುತ್ತಾರೆ. ರಾಜ್ಯಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಸರ್ಕಾರ ವಿರುದ್ಧ ಸಮರ್ಥವಾಗಿ ಮಾತನಾಡುತ್ತಾರೆ"" ಎಂದು ತಿಳಿಸಿದರು.

ವಯನಾಡ್​ನಿಂದ ದಾಖಲೆಯ ಗೆಲುವು; ಇತ್ತೀಚಿಗೆ ನವೆಂಬರ್​ 13 ರಂದು ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್​ ನೇತೃತ್ವದ ಯುಡಿಎಫ್​ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲೇ 4,04,619 ಮತಗಳ ಭಾರೀ ಅಂತರದೊಂದಿಗೆ ಗೆಲುವು ಸಾಧಿಸಿದ್ದರು. ಇದಕ್ಕೂ ಮೊದಲು ಪ್ರಿಯಾಂಕಾ ಸಹೋದರ ರಾಹುಲ್​ ಗಾಂಧಿ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅವರ ರಾಜೀನಾಮೆಯಿಂದ ತೆರವಾದ ವಯನಾಡಿನಲ್ಲಿ ಉಪಚುನಾವಣೆ ನಡೆದು ನ. 23 ರಂದು ಫಲಿತಾಂಶ ಹೊರಬಿದ್ದಿತ್ತು.

ವಯನಾಡು ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್​ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ 6,12,020 ಮತಗಳನ್ನು ಪಡೆದರೆ, ಸಿಪಿಐ(ಎಂ) ಅಭ್ಯರ್ಥಿ ಸತ್ಯನ್​ ಮೊಕೆರಿ 2,07,401 ಹಾಗೂ ಬಿಜೆಪಿಯ ನವ್ಯಾ ಹರಿದಾಸ್ 1,08,080 ಮತಗಳನ್ನು ಪಡೆದಿದ್ದರು.

ಇದನ್ನೂ ಓದಿ: ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು; ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಜಯ

Last Updated : Nov 27, 2024, 7:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.