ETV Bharat / sports

Cricket World Cup: ಹಿಮದ ನಾಡಲ್ಲಿ ರನ್​ಗಳ ಹೊಳೆ.. ಕಿವೀಸ್​ಗೆ ಬೃಹತ್​ ಟಾರ್ಗೆಟ್​ ನೀಡಿದ ಆಸೀಸ್​ - ಟಾಸ್​ ಗೆದ್ದು ನ್ಯೂಜಿಲೆಂಡ್​ ತಂಡ ಮೊದಲು ಬೌಲಿಂಗ್​ ಆಯ್ಕೆ

Cricket World Cup: ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ರನ್​ಗಳ ಮಳೆಯೇ ಸುರಿದಿದೆ. ಕಿವೀಸ್​ ಬೌಲರ್​ಗಳ ಬೆವರಿಳಿಸಿದ ಆಸೀಸ್​ ತಂಡ ನಿಗದಿತ 50 ಓವರ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು 388 ರನ್​ಗಳನ್ನು ಕಲೆ ಹಾಕುವ ಮೂಲಕ ಎದುರಾಳಿಗೆ ಬೃಹತ್ ಟಾರ್ಗೆಟ್​ ನೀಡಿದೆ. ​

Australia gave a big target to New Zealand  ICC Cricket World Cup 2023  Cricket World Cup  Australia vs New Zealand 27th Match  Himachal Pradesh Cricket Association Stadium  New Zealand won the toss and opt to bowl  ಹಿಮದ ನಾಡಲ್ಲಿ ರನ್​ಗಳ ಹೊಳೆ  ಕಿವೀಸ್​ಗೆ ಬೃಹತ್​ ಟಾರ್ಗೆಟ್​ ನೀಡಿದ ಆಸೀಸ್​ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ರನ್​ಗಳ ಮಳೆ  ಕಿವೀಸ್​ ಬೌಲರ್​ಗಳ ಬೆವರಿಳಿಸಿದ ಆಸೀಸ್  ರನ್​ಗಳನ್ನು ಕಲೆ ಹಾಕುವ ಮೂಲಕ ಎದುರಾಳಿಗೆ ಬೃಹತ್ ಟಾರ್ಗೆಟ್  ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ  ಎದುರಾಳಿ ನ್ಯೂಜಿಲೆಂಡ್​ ತಂಡಕ್ಕೆ ಬೃಹತ್​ ಟಾರ್ಗೆಟ್​ ಟಾಸ್​ ಗೆದ್ದು ನ್ಯೂಜಿಲೆಂಡ್​ ತಂಡ ಮೊದಲು ಬೌಲಿಂಗ್​ ಆಯ್ಕೆ  ವಾರ್ನರ್​ ಬಳಿಕ ಬಂದ ಆಸೀಸ್ ಬ್ಯಾಟ್ಸ್​ಮನ್
ಹಿಮದ ನಾಡಲ್ಲಿ ರನ್​ಗಳ ಹೊಳೆ
author img

By ETV Bharat Karnataka Team

Published : Oct 28, 2023, 2:33 PM IST

ಧರ್ಮಶಾಲಾ, ಹಿಮಾಚಲ ಪ್ರದೇಶ: ಏಕದಿನ ವಿಶ್ವಕಪ್‌ನಲ್ಲಿ (Cricket World Cup) ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಆಸೀಸ್ ತಂಡವನ್ನು ಕಿವೀಸ್ ಬೌಲರ್​ಗಳು ತಡೆಯಲು ಯತ್ನಿಸಿದ್ರೂ ಪ್ರಯೋಜನವಾಗಲಿಲ್ಲ. ನಿಗದಿತ 50 ಓವರ್​ಗಳಿಗೆ ಆಸ್ಟ್ರೇಲಿಯಾ ತಂಡ 10 ವಿಕೆಟ್​ಗಳ ನಷ್ಟಕ್ಕೆ 388 ರನ್​ಗಳನ್ನು ಕಲೆ ಹಾಕುವ ಮೂಲಕ ಎದುರಾಳಿ ನ್ಯೂಜಿಲೆಂಡ್​ ತಂಡಕ್ಕೆ ಬೃಹತ್​ ಟಾರ್ಗೆಟ್​ ನೀಡಿದ್ದಾರೆ.

ಕಿವೀಸ್​ ಬೌಲರ್​ಗಳ ಬೇವರಿಳಿಸಿದ ಆರಂಭಿಕರು: ಟಾಸ್​ ಗೆದ್ದು ನ್ಯೂಜಿಲೆಂಡ್​ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಆದ್ರೆ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ದಾಳಿಗೆ ಕಿವೀಸ್​ ಬೌಲರ್​ಗಳ ಬೆಂಡಾದರು. ಕೇವಲ 19 ಓವರ್​ಗಳಿಗೆ ಹೆಡ್​ ಮತ್ತು ವಾರ್ನರ್​ ಮೊದಲ ವಿಕೆಟ್‌ಗೆ 175 ರನ್ ಕಲೆ ಹಾಕಿದ್ದರು. ಭರ್ಜರಿ ಬ್ಯಾಟಿಂಗ್​ ಮಾಡಿದ್ದ ಟ್ರಾವಿಸ್ ಹೆಡ್ (67 ಎಸೆತಗಳಲ್ಲಿ 10 ಬೌಂಡರಿ, 7 ಸಿಕ್ಸರ್, 109 ರನ್​) ಶತಕ ಗಳಿಸಿ ಮಿಂಚಿದರು. ಡೇವಿಡ್ ವಾರ್ನರ್ (65 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್, 81 ರನ್​) ನಿರ್ಣಾಯಕ ಇನಿಂಗ್ಸ್ ಆಡಿದರು. ಆದರೆ ಕಿವೀಸ್ ಬೌಲರ್​ಗಳ ವಿರುದ್ಧ ಅಬ್ಬರಿಸಿ ವಾರ್ನರ್​ ಪೆವಿಲಿಯನ್​ಗೆ ಮರಳಿದ್ದರು.

ವಾರ್ನರ್​ ಬಳಿಕ ಬಂದ ಆಸೀಸ್ ಬ್ಯಾಟ್ಸ್​ಮನ್​ಗಳಲ್ಲಿ ಮಿಚೆಲ್ ಮಾರ್ಷ್ (36 ರನ್​) ಕೆಲಹೊತ್ತು ಹೋರಾಟ ನಡೆಸಿದರು. ಸ್ಟೀವ್ ಸ್ಮಿತ್ (18 ರನ್​) ಮತ್ತು ಲಬುಶಾನೆ (18 ರನ್​) ಹೆಚ್ಚು ರನ್ ಗಳಿಸಲಿಲ್ಲ. 40 ಓವರ್‌ಗಳ ಅಂತ್ಯಕ್ಕೆ ಆಸ್ಟ್ರೇಲಿಯಾ ಐದು ವಿಕೆಟ್‌ಗಳ ನಷ್ಟಕ್ಕೆ 292 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್‌ವೆಲ್ (41 ರನ್​), ಇಂಗ್ಲಿಸ್ (38 ರನ್​) ಮತ್ತು ನಾಯಕ ಪ್ಯಾಟ್ ಕಮಿನ್ಸ್ (37 ರನ್​) ತಂಡದ ಸ್ಕೋರ್​ ಹೆಚ್ಚಿಸುವಲ್ಲಿ ಶ್ರಮ ವಹಿಸಿದರು.

ಬಳಿಕ ಬಂದ್​ ಬ್ಯಾಟ್ಸ್​ಮನ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೇ ಪೆವಿಲಿಯನ್​ ಹಾದಿ ಹಿಡಿದರು. ಒಟ್ನಲ್ಲಿ ನಿಗದಿತ 50 ಓವರ್​ಗಳಿಗೆ ಆಸೀಸ್​ ತಂಡ 10 ವಿಕೆಟ್​ಗಳ ನಷ್ಟಕ್ಕೆ 388 ರನ್​ಗಳನ್ನು ಕಲೆ ಹಾಕಿದೆ. ನ್ಯೂಜಿಲೆಂಡ್ ಬೌಲರ್‌ಗಳಾದ ಗ್ಲೆನ್ ಫಿಲಿಪ್ಸ್ ಮತ್ತು ಟ್ರೆಂಟ್ ಬೌಲ್ಟ್ ತಲಾ ಮೂರು ವಿಕೆಟ್​ಗಳು ಪಡೆದ್ರೆ, ಸ್ಯಾಂಟ್ನರ್ 2 ವಿಕೆಟ್ ಪಡೆದರು. ಜೇಮ್ಸ್ ನೀಶಮ್ ಮತ್ತು ಮ್ಯಾಟ್ ಹೆನ್ರಿ ತಲಾ ಒಂದೊಂದು ವಿಕೆಟ್​ ಕಬಳಿಸಿದರು. ನ್ಯೂಜಿಲೆಂಡ್​ ತಂಡ ಆಸೀಸ್​ ವಿರುದ್ಧ ಗೆಲ್ಲಲು 389 ರನ್​ಗಳ ಗುರಿ ತಲುಪಬೇಕಾಗಿದೆ.

ಓದಿ: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್​ ವಿಶ್ವಕಪ್​ ಕದನ : ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಕಿವೀಸ್​ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.