ETV Bharat / sports

ICC Rankings : ಏಕದಿನದಲ್ಲಿ ಮಿಥಾಲಿ, ಟಿ20ಯಲ್ಲಿ ಶೆಫಾಲಿ ನಂಬರ್​ 1

ಭಾರತದ ಸ್ಟಾರ್ ಓಪನರ್​ ಸ್ಮೃತಿ ಮಂದಾನ(701) 9ನೇ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಲಿಜಿಲೆ ಲೀ(758), 3ನೇ ಸ್ಥಾನದಲ್ಲಿ ಆಸ್ಟ್ರೀಲಿಯಾದ ಅಲೀಸಾ ಹೀಲಿ(756) 4ನೇ ಸ್ಥಾನದಲ್ಲಿ ಇಂಗ್ಲೆಂಡ್ ಟಮ್ಮಿ ಬ್ಯೂಮಂಟ್(754) ಇದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಜೂಲನ್ ಗೋಸ್ವಾಮಿ 5ನೇ ಸ್ಥಾನದಲ್ಲಿದ್ದರೆ, ಆಲ್​ರೌಂಡರ್​ ಸ್ಥಾನದಲ್ಲಿ ದೀಪ್ತಿ ಶರ್ಮಾ ಕೂಡ 5ನೇ ಸ್ಥಾನ ಪಡೆದು ಅಗ್ರ 10ರಲ್ಲಿ ಕಾಣಿಸಿದ್ದಾರೆ..

author img

By

Published : Jul 20, 2021, 4:36 PM IST

ICC Rankings
ಐಸಿಸಿ ರ್ಯಾಂಕಿಂಗ್

ದುಬೈ : ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್​ನಲ್ಲಿ ಮತ್ತೆ ನಂಬರ್​ 1 ಸ್ಥಾನ್ಕಕೇರಿದ್ದಾರೆ. ಅಗ್ರಸ್ಥಾನದಲ್ಲಿದ್ದ ವೆಸ್ಟ್​ ಇಂಡೀಸ್ ತಂಡದ ನಾಯಕಿ ಸ್ಟೆಫನಿ ಟೇಲರ್(736) ಪಾಕಿಸ್ತಾನ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ವಿಫಲರಾದ ಕಾರಣ 30 ರೇಟಿಂಗ್ ಪಾಯಿಂಟ್ ಕಳೆದುಕೊಂಡಿದ್ದರಿಂದ 5ನೇ ಸ್ಥಾನಕ್ಕೆ ಕುಸಿದಿದ್ದರಿಂದ ಮಿಥಾಲಿ ಮತ್ತೆ ಅಗ್ರಸ್ಥಾನಕ್ಕೆ ಮರಳಿದ್ದಾರೆ.

ಮಿಥಾಲಿ ರಾಜ್(762) ಇಂಗ್ಲೆಂಡ್ ಮಹಿಳೆಯರ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಸತತ ಮೂರು ಅರ್ಧಶತಕ ಬಾರಿಸಿ ವೃತ್ತಿ ಜೀವನದಲ್ಲಿ 8ನೇ ಬಾರಿಗೆ ಅಗ್ರಸ್ಥಾನ ಪಡೆದಿದ್ದರು. 16 ವರ್ಷಗಳ ಹಿಂದೆ ಮೊದಲ ಬಾರಿಗೆ ಮಹಿಳಾ ಏಕದಿನ ರ‍್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ ಪಡೆದಿದ್ದ ಭಾರತ ತಂಡದ ನಾಯಕಿ ಇದೀಗ ವೆಸ್ಟ್​ ಇಂಡೀಸ್ ಆಲ್​ರೌಂಡರ್​ರನ್ನು ಹಿಂದಿಕ್ಕಿ 9ನೇ ಬಾರಿ ಅಗ್ರಸ್ಥಾನ ಪಡೆದಿದ್ದಾರೆ.

ಭಾರತದ ಸ್ಟಾರ್ ಓಪನರ್​ ಸ್ಮೃತಿ ಮಂದಾನ(701) 9ನೇ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಲಿಜಿಲೆ ಲೀ(758), 3ನೇ ಸ್ಥಾನದಲ್ಲಿ ಆಸ್ಟ್ರೀಲಿಯಾದ ಅಲೀಸಾ ಹೀಲಿ(756) 4ನೇ ಸ್ಥಾನದಲ್ಲಿ ಇಂಗ್ಲೆಂಡ್ ಟಮ್ಮಿ ಬ್ಯೂಮಂಟ್(754) ಇದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಜೂಲನ್ ಗೋಸ್ವಾಮಿ 5ನೇ ಸ್ಥಾನದಲ್ಲಿದ್ದರೆ, ಆಲ್​ರೌಂಡರ್​ ಸ್ಥಾನದಲ್ಲಿ ದೀಪ್ತಿ ಶರ್ಮಾ ಕೂಡ 5ನೇ ಸ್ಥಾನ ಪಡೆದು ಅಗ್ರ 10ರಲ್ಲಿ ಕಾಣಿಸಿದ್ದಾರೆ.

ಟಿ20 ಶ್ರೇಯಾಂಕದಲ್ಲಿ ಶೆಫಾಲಿ ಅಗ್ರಸ್ಥಾನ, ಸ್ಮೃತಿಗೆ 3ನೇಸ್ಥಾನ

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಆರಂಭಿಕ ಬ್ಯಾಟರ್​ ಸ್ಮೃತಿ ಮಂದಾನ ಒಂದು ಸ್ಥಾನ ಬಡ್ತಿ ಪಡೆದಿದ್ದಾರೆ. ಇನ್ನು, 17 ವರ್ಷದ ಯುವ ಬ್ಯಾಟರ್ ಶೆಫಾಲಿ ವರ್ಮಾ(759)ನ ಅಂಕ ಪಡೆದು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾದ ಬೆತ್​ ಮೂನಿ ಇದ್ದಾರೆ.

ಇದನ್ನು ಓದಿ:ಐರ್ಲೆಂಡ್​ ವಿರುದ್ಧ ಟಿ 20 ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.