ETV Bharat / sports

ಏನಾದರೂ ಸಾಧಿಸಬೇಕೆಂದು 9 ವರ್ಷಗಳಿಂದ ಮನೆಗೆ ಹೋಗಿಲ್ಲ ಈ ಮುಂಬೈ ಮಿಸ್ಟರಿ ಸ್ಪಿನ್ನರ್

ಗಾಯಾಳು ಅರ್ಶದ್ ಖಾನ್ ಬದಲಿಗೆ ತಂಡ ಸೇರಿಕೊಂಡ ಕಾರ್ತಿಕೇಯನ್ ಮೊದಲ ಪಂದ್ಯದಲ್ಲಿ ಒತ್ತಡಕ್ಕೆ ಒಳಗಾದರೂ ಉತ್ತಮ ಪ್ರದರ್ಶನ ತೋರಿದ್ದರು. ಈ ಪಂದ್ಯದ ವೇಳೆ ತಮ್ಮ ಹಿನ್ನೆಲೆ ಬಗ್ಗೆ ಮಾತನಾಡಿರುವ ಅವರು, ಕಳೆದ 9 ವರ್ಷಗಳಿಂದ ತಮ್ಮ ಮನೆಗೆ ತಾನು ಹೋಗಿಲ್ಲ ಎಂಬ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ..

spinner Karthikeya shares touching story after debut for MI
ಕುಮಾರ ಕಾರ್ತಿಕೇಯ ಮುಂಬೈ ಇಂಡಿಯನ್ಸ್
author img

By

Published : May 2, 2022, 5:40 PM IST

ಮುಂಬೈ : 5 ಬಾರಿಯ ಐಪಿಎಲ್ ಚಾಂಪಿಯನ್​ ಮುಂಬೈ ಇಂಡಿಯನ್ಸ್​ 15ನೇ ಆವೃತ್ತಿಯ ಐಪಿಎಲ್​ನಲ್ಲಿ ಸತತ 8 ಸೋಲುಗಳ ಬಳಿಕ ಮೊದಲ ಜಯ ಸಾಧಿಸಿದೆ. ಈಗಾಗಲೇ ಪ್ಲೇ ಆಫ್​ ರೇಸ್​ನಿಂದ ಹೊರಬಿದ್ದಿದ್ದ ಮುಂಬೈ ತಂಡ ಕೆಲವು ಗೆಲುವುಗಳನ್ನು ಪಡೆದು ಟೂರ್ನಿಯನ್ನು ಅಂತ್ಯಗೊಳಿಸುವ ಇರಾದೆ ಹೊಂದಿತ್ತು. ಇದೀಗ ಏಪ್ರಿಲ್​ 30ರಂದು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಮೊದಲ ಗೆಲುವಿನ ಸಿಹಿಯನ್ನು ಸವಿದಿದೆ.

ಈ ಪಂದ್ಯದ ಗೆಲುವಿನಲ್ಲಿ ಸೂರ್ಯಕುಮಾರ್ ಯಾದವ್​ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರಾದರೂ, 24 ವರ್ಷದ ಪದಾರ್ಪಣೆ ಸ್ಪಿನ್ನರ್​ ಕುಮಾರ್​ ಕಾರ್ತಿಕೇಯನ್​ ಪಾತ್ರ ಕಡೆಗಣಿಸುವಂತಿರಲಿಲ್ಲ. ಅವರು 4 ಓವರ್​ಗಳಲ್ಲಿ 19 ರನ್​ ನೀಡಿ ರಾಯಲ್ಸ್ ನಾಯಕ ಸಂಜು ಸಾಮ್ಸನ್​ ವಿಕೆಟ್​ ಪಡೆದು ಗಮನ ಸೆಳದಿದ್ದರು.

ಗಾಯಾಳು ಅರ್ಶದ್ ಖಾನ್ ಬದಲಿಗೆ ತಂಡ ಸೇರಿಕೊಂಡ ಕಾರ್ತಿಕೇಯನ್ ಮೊದಲ ಪಂದ್ಯದಲ್ಲಿ ಒತ್ತಡಕ್ಕೆ ಒಳಗಾದರೂ ಉತ್ತಮ ಪ್ರದರ್ಶನ ತೋರಿದ್ದರು. ಈ ಪಂದ್ಯದ ವೇಳೆ ತಮ್ಮ ಹಿನ್ನೆಲೆ ಬಗ್ಗೆ ಮಾತನಾಡಿರುವ ಅವರು, ಕಳೆದ 9 ವರ್ಷಗಳಿಂದ ತಮ್ಮ ಮನೆಗೆ ತಾನು ಹೋಗಿಲ್ಲ ಎಂಬ ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

"ನಾನು ಕಳೆದ 9 ವರ್ಷಗಳಿಂದ ಮನೆಗೆ ಹೋಗಿಲ್ಲ. ನನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಿದ ನಂತರವಷ್ಟೇ ಮನೆಗೆ ಹಿಂತಿರುಗುತ್ತೇನೆ ಎಂದು ನಿರ್ಧರಿಸಿದ್ದೆ. ನಮ್ಮ ತಂದೆ-ತಾಯಿ ಆಗಾಗ್ಗೆ ಕರೆಯುತ್ತಿರುತ್ತಾರೆ. ಆದರೆ, ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೆ. ಇದೀಗ ಐಪಿಎಲ್​​ ಮುಗಿದ ನಂತರ ನಾನು ಮನೆಗೆ ತೆರಳುತ್ತೇನೆ" ಎಂದು ಹೇಳಿದ್ದಾರೆ.

ನಾನೊಬ್ಬ ಮಿಸ್ಟರಿ ಬೌಲರ್ : ರಾಯಲ್ಸ್ ವಿರುದ್ಧ 4 ಓವರ್​ ಬೌಲಿಂಗ್ ಮಾಡಿದ್ದ ಕಾರ್ತಿಕೇಯ 9 ಡಾಟ್​ ಬಾಲ್ ಮಾಡಿ, ಕೇವಲ ಒಂದು ಬೌಂಡರಿ ಮಾತ್ರ ಬಿಟ್ಟುಕೊಟ್ಟಿದ್ದರು. ತಮ್ಮ ಐಪಿಎಲ್ ಪದಾರ್ಪಣೆ ಬಗ್ಗೆ ಮಾತನಾಡಿ, ನಾನೊಬ್ಬ ಮಿಸ್ಟರಿ ಬೌಲರ್​, ಮೊದಲು ನಾನು ಈ ಪಂದ್ಯದಲ್ಲಿ ಆಡುತ್ತೇನೆ ಎಂದಾಗ ನರ್ವಸ್​ ಆಗಿದ್ದೆ, ಈಗ ಆರಾಮವಾಗಿದ್ದೇನೆ.

ಆದರೆ, ನಾನು ಪ್ರತಿಯೊಬ್ಬ ಬ್ಯಾಟರ್​ಗೆ ಹಿಂದಿನ ರಾತ್ರಿಯೇ ಯೋಜನೆ ರೂಪಿಸಿಕೊಂಡಿದ್ದೆ. ನಾನು ಸಂಜು ಬ್ಯಾಟಿಂಗ್ ಮಾಡುವಾಗ ಪ್ಯಾಡ್​ಗೆ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದೆ. ಸಚಿನ್ ಸರ್ ಸಲಹೆಗಳು ನನ್ನಲ್ಲಿ ಆತ್ಮವಿಶ್ವಾವನ್ನು ಹೆಚ್ಚಿಸಿತು. ನನಗೆ ನನ್ನ ತಂಡ ಗೆಲ್ಲಬೇಕಿತ್ತು ಎಂದು ಅವರು ಇನ್ನಿಂಗ್ಸ್ ಬ್ರೇಕ್ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ:ಫುಟ್​ಬಾಲ್​ಗೆ ರೊನಾಲ್ಡೊ, ಕ್ರಿಕೆಟ್​ಗೆ ಕೊಹ್ಲಿ.. ಇಬ್ಬರು 'ಬಿಗ್​ಬ್ರ್ಯಾಂಡ್'​ ಎಂದ ಇಂಗ್ಲೆಂಡ್ ಮಾಜಿ ನಾಯಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.