ಬ್ರಿಸ್ಟೋಲ್ : ಭಾರತ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದು, ಅತಿಥೇಯ ಇಂಗ್ಲೆಂಡ್ ವಿರುದ್ಧ 8 ವಿಕೆಟ್ಗಳಿಂದ ಹೀನಾಯ ಸೋಲು ಕಂಡಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತದ ಯಾವೊಬ್ಬ ಬ್ಯಾಟರ್ ಇಂಗ್ಲೆಂಡ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ.
ನಾಯಕಿ ಮಿಥಾಲಿ ರಾಜ್ 72 ರನ್ಗಳಿಸಿದರಾದರೂ ಅದಕ್ಕೆ ಅವರು ಬರೋಬ್ಬರಿ 108 ಎಸೆತಗಳನ್ನಾಡಿದ್ದು ದೊಡ್ಡ ಹಿನ್ನಡೆಯಾಯಿತು. ಸ್ಫೋಟಕ ಬ್ಯಾಟರ್ ಶೆಫಾಲಿ 15, ಅನುಭವಿಗಳಾದ ಮಂದಾನ 8 ಮತ್ತು ಹರ್ಮನ್ ಪ್ರೀತ್ ಕೌರ್ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದ್ದರಿಂದ ಭಾರತ ಚೇತರಿಸಿಕೊಳ್ಳಲಾಗಲಿಲ್ಲ.
-
England register an eight-wicket victory in Bristol to go 1-0 up in the ODI series 👊#ENGvIND pic.twitter.com/gVg1L6Hq2w
— ICC (@ICC) June 27, 2021 " class="align-text-top noRightClick twitterSection" data="
">England register an eight-wicket victory in Bristol to go 1-0 up in the ODI series 👊#ENGvIND pic.twitter.com/gVg1L6Hq2w
— ICC (@ICC) June 27, 2021England register an eight-wicket victory in Bristol to go 1-0 up in the ODI series 👊#ENGvIND pic.twitter.com/gVg1L6Hq2w
— ICC (@ICC) June 27, 2021
ಪೂನಮ್ ರಾವುತ್ 61 ಎಸೆತಗಳಲ್ಲಿ 32, ದೀಪ್ತಿ ಶರ್ಮಾ 46 ಎಸೆತಗಳಲ್ಲಿ 30 ರನ್ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ಮಿಥಾಲಿಗೆ ನೆರವಾದರು. ಇಂಗ್ಲೆಂಡ್ ಮಹಿಳೆಯರ ಪರ ಕರಾರುವಾಕ್ ದಾಳಿ ನಡೆಸಿದ ಕ್ಯಾಥರಿನ್ ಬ್ರಂಟ್ 35ಕ್ಕೆ 2, ಅನ್ಯಾ ಶ್ರಬ್ಸೋಲ್ 33ಕ್ಕೆ 2, ಸೋಫಿ ಎಕ್ಲೆಸ್ಟೋನ್ 40ಕ್ಕೆ 3 ವಿಕೆಟ್ ಪಡೆದು ಭಾರತವನ್ನು 200ರ ಗಡಿಯಲ್ಲೇ ನಿಯಂತ್ರಿಸಿದರು.
ಇನ್ನು, 203ರ ಸಾಧಾರಣ ಗುರಿಯನ್ನು ಬೆನ್ನತ್ತಿದ ಆಂಗ್ಲ ವನಿತೆಯರು, 34.5 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ಲಾರೆನ್ ವೈನ್ಫೀಲ್ಡ್ ಹಿಲ್ 16 ಮತ್ತು ಹೀದರ್ ನೈಟ್ 18 ರನ್ಗಳಿಸಿ ಔಟಾದರು. ಆದರೆ, ಟಮ್ಮಿ ಬ್ಯೂಮಾಂಟ್ ಅಜೇಯ 87 ಎಸೆತಗಳಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ಅಜೇಯ 87 ರನ್ ಮತ್ತು ನಟಾಲಿಯಾ ಸೀವರ್ 74 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ ಅಜೇಯ 74 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಭಾರತದ ಪರ ಜೂಲನ್ ಗೋಸ್ವಾಮಿ 25ಕ್ಕೆ 1, ಏಕ್ತಾ ಬಿಸ್ತ್ 55ಕ್ಕೆ 1 ವಿಕೆಟ್ ಪಡೆದರು. 87 ರನ್ಗಳಿಸಿದ ನಟಾಲಿಯಾ ಸೀವರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನು ಓದಿ:ಶ್ರೀಲಂಕಾದಲ್ಲಿ ಯುವಕರಿಂದ ಅತ್ಯುತ್ತಮ ಪ್ರದರ್ಶನ ಹೊರತರುವುದೇ ನಾಯಕನಾಗಿ ನನ್ನ ಗುರಿ : ಶಿಖರ್ ಧವನ್