ETV Bharat / sports

ಭಾರತ vs ಇಂಗ್ಲೆಂಡ್​ : ಲಂಚ್​ ವೇಳೆಗೆ ಲಯ ಕಳೆದುಕೊಂಡ ಟೀಮ್​ ಇಂಡಿಯಾ - Shubman Gill

ಪ್ರಸ್ತುತ ಟೀ ಇಂಡಿಯಾ 59/2 ರನ್​​ ಗಳಿಸಿದೆ. ಶುಭಮನ್​ ಗಿಲ್​​ 29, ಚೇತೇಶ್ವರ ಪೂಜಾರ 20*, ವಿರಾಟ್​ ಕೊಹ್ಲಿ 4* ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ. ಇಂಗ್ಲೆಂಡ್​ ಪರ ಆರ್ಚರ್​​ 2 ವಿಕೆಟ್​ ಪಡೆದು ಭಾರತಕ್ಕೆ ಆಘಾತ ನೀಡಿದರು.

lose the wickets of Shubman Gill and Rohit Sharma in the session.
ಭಾರತ vs ಇಂಗ್ಲೆಂಡ್
author img

By

Published : Feb 7, 2021, 11:54 AM IST

ಚೆನ್ನೈ: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ಟೀಮ್​ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತು. ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಕೇವಲ 6 ರನ್​ಗಳಿಸಿ ಜೋಫ್ರಾ ಆರ್ಚರ್​​ ಬೌಲಿಂಗ್​ನಲ್ಲಿ ಬಟ್ಲರ್​ಗೆ ಕ್ಯಾಚ್​ ನೀಡುವ ಮೂಲಕ ಪೆವಲಿಯನ್​​ ಹಾದಿ ಹಿಡಿದರು. ಶುಭಮನ್​ ಗಿಲ್​ 29 ರನ್​ಗಳಿಸಿದಾಗ ಜೋಫ್ರಾ ಆರ್ಚರ್ ಬೌಲಿಂಗ್​ನಲ್ಲಿ ಆ್ಯಂಡರ್ಸನ್​​ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಇದರಿಂದ ಟೀಮ್​ ಇಂಡಿಯಾ ಪ್ರಮುಖ ಎರಡು ವಿಕೆಟ್​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಪ್ರಸ್ತುತ ಟೀಂ ಇಂಡಿಯಾ 59/2 ರನ್​​ ಗಳಿಸಿದೆ. ಶುಭಮನ್​ ಗಿಲ್​​ 29, ಚೇತೇಶ್ವರ ಪೂಜಾರ 20*, ವಿರಾಟ್​ ಕೊಹ್ಲಿ 4* ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ. ಇಂಗ್ಲೆಂಡ್​ ಪರ ಆರ್ಚರ್​​ 2 ವಿಕೆಟ್​ ಪಡೆದು ಭಾರತಕ್ಕೆ ಆಘಾತ ನೀಡಿದರು.

ಓದಿ : 578 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್​​: ಆರಂಭದಲ್ಲೇ ಆಘಾತ ಅನುಭವಿಸಿದ ಭಾರತ

ಭಾರತದ ಎದುರಿನ ಮೊದಲ ಟೆಸ್ಟ್​​​ನ ಮೂರನೇ ದಿನದಾಟದ ಆರಂಭದಲ್ಲಿ ಇಂಗ್ಲೆಂಡ್​ ಸರ್ವಪತನ ಕಂಡಿದೆ. ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ಜೋ ರೂಟ್ (218) ಅಮೋಘ ದ್ವಿಶತಕದ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 578 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.

ಎರಡನೇ ದಿನಾದಟದ ಅಂತ್ಯದಲ್ಲಿ 8 ವಿಕೆಟ್​ ಕಳೆದುಕೊಂಡು 555 ರನ್​ ಗಳಿಸಿದ್ದ ಆಂಗ್ಲ ಪಡೆ, ಮೂರನೇ ದಿನದಾಟ ಆರಂಭವಾದ ಕೆಲ ಹೊತ್ತಿನಲ್ಲೇ ಆಂಗ್ಲರ ಪಡೆ 23 ರನ್ ಗಳಿಸುವುದರೊಳಗೆ ಎರಡು ವಿಕೆಟ್‌ ಕಳೆದುಕೊಂಡಿತ್ತು. ಈ ಮೂಲಕ 190.1 ಓವರ್‌ಗಳಲ್ಲಿ 578 ರನ್‌ಗಳಿಗೆ ಆಲೌಟ್ ಆಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.