ಇಂದಿನ ಪಂಚಾಂಗ
10-01-2025 ಶುಕ್ರವಾರ
ಸಂವತ್ಸರ: ಕ್ರೋಧಿ
ಆಯನ: ಉತ್ತರಾಯಣ
ತಿಂಗಳು: ಮಾರ್ಗಶಿರ
ತಿಥಿ: ಶುಕ್ಲ ಏಕಾದಶಿ
ನಕ್ಷತ್ರ: ಕೃತಿಕಾ
ಸೂರ್ಯೋದಯ: ಬೆಳಗ್ಗೆ 06:44
ಅಮೃತ ಕಾಲ: ಬೆಳಗ್ಗೆ 08:09 ರಿಂದ 09:34 ಗಂಟೆ ತನಕ
ದುರ್ಮೂಹುರ್ತಂ: ಬೆಳಗ್ಗೆ 09:08 ರಿಂದ 09:56 ಮತ್ತು 03:32 ರಿಂದ 04:20 ಗಂಟೆ ವರೆಗೆ
ರಾಹು ಕಾಲ: ಬೆಳಗ್ಗೆ 11:00 ರಿಂದ 12:25 ಗಂಟೆ ತನಕ
ಸೂರ್ಯಾಸ್ತ: ಸಂಜೆ 06:06
ರಾಶಿ ಭವಿಷ್ಯ:
ಮೇಷ: ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ನೀವು ಕಠಿಣ ಹೋರಾಟ ನಡೆಸಿದರೂ ಅದು ನಿಮಗೆ ಪೂರಕವಾಗುವುದಿಲ್ಲ. ಆದ್ದರಿಂದ ಹಾಗೆ ಮಾಡಬೇಡಿ. ವಿಶ್ರಾಂತಿಗೆ ಕೊಂಚ ಸಮಯ ತೆಗೆದುಕೊಳ್ಳಿ. ಏಕೆಂದರೆ ನೀವು ಏನೇ ಮಾಡಿದರೂ ವಿಷಯಗಳು ನಿಮ್ಮತ್ತ ಸಾಗಿ ಬರುವುದಿಲ್ಲ.
ವೃಷಭ: ಇಂದು ಅತಿಯಾದ ಆಲೋಚನೆ ಮತ್ತು ಅತಿಯಾದ ಒತ್ತಡ ತಂದುಕೊಳ್ಳಬೇಡಿ. ನಿಮ್ಮ ಸಾಮ್ಯತೆಯ ಸ್ವಭಾವ ಮತ್ತು ಕೋಪ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು. ನೀವು ಆತ್ಮಾವಲೋಕನ ಮಾಡಲು ಆಲೋಚಿಸುತ್ತೀರಿ, ಏಕೆಂದರೆ ಅದೊಂದೇ ನಿಮ್ಮ ಬಹುತೇಕ ಸಮಸ್ಯೆಗಳಿಗೆ ಉತ್ತರ ತಂದುಕೊಡುವ ದಾರಿಯಾಗಿದೆ.
ಮಿಥುನ: ನಿಮ್ಮ ಸಾಮಾಜಿಕ ವೃತ್ತದ ಜನರು ನಿಮ್ಮನ್ನು ನಾಯಕತ್ವದ ಮತ್ತು ಎಲ್ಲರನ್ನೂ ನಿರ್ದೇಶಿಸುವ ವ್ಯಕ್ತಿಯಾಗಿ ಕಾಣುತ್ತಾರೆ. ನಿಮಗೆ ನಿಮ್ಮ ಹೃದಯ ಏನನ್ನು ಬಯಸುತ್ತದೋ ಅದನ್ನು ಪಡೆಯುವಲ್ಲಿ ನೀವು ಗಮನ ನೀಡಿರಬಹುದು. ಕೆಲ ಕಾಲದಿಂದ ಉತ್ತರ ದೊರೆಯದೆ ಉಳಿದ ಅನುಮಾನಗಳಿಗೆ ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನೀವು ಯಶಸ್ವಿಯಾಗಬಹುದು.
ಕರ್ಕಾಟಕ: ದೇವರ ಆಶೀರ್ವಾದ ನಿಮಗೆ ಇಂದು ಯಶಸ್ಸು ಗಳಿಸಲು ನೆರವಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅವರ ಪೂರ್ಣಗೊಳ್ಳದ ಕಾರ್ಯಗಳನ್ನು ಮುಗಿಸಿ ಇತರರಿಗಿಂತ ಉತ್ತಮ ಸಾಧನೆ ಮಾಡಲು ಸುವರ್ಣ ಸಮಯವಾಗಿದೆ. ಕಲ್ಪನಾಶಕ್ತಿ ಕಾಡಿನ ಬೆಂಕಿಯಂತೆ ನಿಮ್ಮಲ್ಲಿ ಉರಿಯುತ್ತಿದೆ ಮತ್ತು ಇಂದು ಎಲ್ಲವೂ ನಿಮ್ಮ ದಾರಿಯಲ್ಲಿ ಮುನ್ನಡೆಯುವಂತೆ ಕಾಣುತ್ತಿವೆ.
ಸಿಂಹ: ನೀವು ಮನೆಯಲ್ಲಿನ ವಿಷಯಗಳಿಗೆ ಹೆಚ್ಚು ಗಮನ ನೀಡುತ್ತೀರಿ. ನೀವು ಮನೆ ನವೀಕರಣ ಯೋಜನೆಗಳನ್ನು ಕೈಗೊಳ್ಳಬಹುದು. ನಿಮ್ಮ ಸ್ಥಳವೂ ಒಳಗೊಂಡು ಇಡೀ ಪೀಠೋಪಕರಣ ಬದಲಾಯಿಸುತ್ತೀರಿ. ನಿಮ್ಮ ಕುಟುಂಬ ಸದಸ್ಯರು ಮತ್ತು ಮಿತ್ರರೊಂದಿಗೆ ದಿನವನ್ನು ಆನಂದಿಸುತ್ತಾ ಕಳೆಯುತ್ತೀರಿ.
ಕನ್ಯಾ: ನಿಮ್ಮ ಹೃದಯದಾಳದಲ್ಲಿ ಹುದುಗಿದ್ದ ಭಾವನೆಗಳು ಇಂದು ಹೊರಬೀಳಲಿವೆ. ನೀವು ನಿಮ್ಮ ವಸ್ತುಗಳ ಕುರಿತು ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ಳುತ್ತೀರಿ. ಆದಾಗ್ಯೂ, ನಿಮ್ಮ ಸುತ್ತಮುತ್ತಲಿನ ಪರಿಸರ ಅನುಕೂಲಕರವಾಗಿಲ್ಲದಿದ್ದರೆ ನೀವು ಅತ್ಯಂತ ಪ್ರಕ್ಷುಬ್ದತೆ ಅನುಭವಿಸುತ್ತೀರಿ.
ತುಲಾ: ವಿವಾಹಿತರು ಅಥವಾ ಪ್ರೀತಿಯಲ್ಲಿರುವ ನೀವು ಇಂದು ಒಳ್ಳೆಯ ಸಮಯ ಅನುಭವಿಸುತ್ತೀರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಡ್ರೈವ್ ಹೋಗುವ ಅಥವಾ ಡಿನ್ನರ್ ಗೆ ಕರೆದೊಯ್ಯುವ ಮೂಲಕ ಹೆಚ್ಚು ಸಮಯ ಕಳೆದಂತೆ ನೀವು ಅವರಿಗೆ ಹತ್ತಿರವಾಗುತ್ತೀರಿ. ಇಂದು ನಿಮಗೆ ಸಂಪೂರ್ಣ ಸಂತೋಷ, ಹುರುಪು ಮತ್ತು ಆನಂದದ ದಿನವಾಗಿದೆ.
ವೃಶ್ಚಿಕ: ಭಾರತದ ಪವಿತ್ರಗ್ರಂಥಗಳು ನಮಗೆ ಅನಾದಿ ಕಾಲದಿಂದಲೂ ನಿಮ್ಮ ಕಾರ್ಯವನ್ನು ನೀವು ಮಾಡಿ, ಫಲಾಫಲಗಳ ನಿರೀಕ್ಷೆ ಮಾಡಬೇಡಿ ಎಂದು ಹೇಳಿವೆ. ಈಗ ಅದನ್ನು ಮುಖ್ಯವಾಗಿ ಕೆಲಸದಲ್ಲಿ ಅನುಷ್ಠಾನಗೊಳಿಸುವ ಕಾಲ. ನಿಮ್ಮ ವ್ಯಾಪಾರ ಮತ್ತು ಜಂಟಿ ಸಹಯೋಗದ ಉದ್ಯಮದಲ್ಲಿ ಕೊಂಚ ಹೆಚ್ಚು ಕಾಯಬೇಕಾಗಬಹುದು. ಆದಾಗ್ಯೂ, ತಾಳ್ಮೆ ನೀಡುವ ಪ್ರತಿಫಲ ಸಿಹಿಯಾಗಿರುವುದರಿಂದ ಭರವಸೆ ಕಳೆದುಕೊಳ್ಳಬೇಡಿ.
ಧನು: ನಿಮ್ಮ ಸುತ್ತಲೂ ಇರುವ ಪರೋಪಕಾರಿಗಳು ಅಪೇಕ್ಷಿಸದ, ಆದರೆ ಮೌಲ್ಯಯುತ ಸಲಹೆ ನೀಡಬಹುದು. ಅದನ್ನು ಸೂಚನೆಯನ್ನಾಗಿ ತೆಗೆದುಕೊಳ್ಳಿ ಮತ್ತು ಅದನ್ನು ನಿಮ್ಮ ಸುಧಾರಣೆಗೆ ಬಳಸಿಕೊಳ್ಳಿ. ಸಲಹೆ ಅನುಸರಿಸಿದ ನಂತರ ನಿಮ್ಮ ತೀರ್ಮಾನ ಕೈಗೊಳ್ಳಿರಿ, ಮತ್ತು ಇದು ಅನುಮಾನವಿಲ್ಲದೆ ಅನುಕೂಲಗಳನ್ನು ತಂದುಕೊಡುತ್ತದೆ.
ಮಕರ: ಎಲ್ಲ ದಿನಗಳೂ ಒಂದೇ ರೀತಿಯಲ್ಲಿರುವುದಿಲ್ಲ. ಮತ್ತು, ಇಂದು ಅತ್ಯಂತ ಗೊಂದಲದ ಭಾವನೆಗೆ ಒಳಗಾದ ದಿನವಾಗಿದೆ. ನೀವು ಋಣಾತ್ಮಕ ಭಾವನೆಗಳಿಂದ ಹೊರಬರಲು ಸಾಧ್ಯವಿಲ್ಲ, ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ ಮತ್ತು ಭವಿಷ್ಯಕ್ಕೆ ಬಲವಾದ ತಳಹದಿ ನಿರ್ಮಿಸುತ್ತದೆ.
ಕುಂಭ: ಸಮಾಜದ ವಿವಿಧ ವಲಯಗಳನ್ನು ಜನರ ಭೇಟಿ, ಅವರೊಂದಿಗೆ ಒಳ್ಳೆಯ ಮಾತುಕತೆ ಮತ್ತು ನಿಮ್ಮ ಜ್ಞಾನದ ವಿಸ್ತರಣೆ-ಇವು ಇಂದು ನಿಮಗಾಗಿ ಇರುವ ಪ್ರಮುಖಾಂಶಗಳು. ನಿಮ್ಮ ಶಕ್ತಿಗಳನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳುತ್ತೀರಿ, ಆದರೆ ಇದು ನಿಮ್ಮನ್ನು ಸುಸ್ತಾಗಿಸಲೂಬಹುದು.
ಮೀನ: ವ್ಯಾಪಾರದಲ್ಲಿ ನೀವು ಎದುರಿಸುತ್ತಿರುವ ಅಡೆತಡೆಗಳಿಂದ ತಳಮಳಗೊಳ್ಳುತ್ತಿದ್ದೀರಾ? ನಿಮ್ಮ ಸಮಸ್ಯೆಯ ಮೂಲವನ್ನು ಎದುರಿಸಿ ಮತ್ತು ನಿಮ್ಮ ಹೊಣೆಗಾರಿಕೆಗಳ ಕುರಿತು ತಾಳ್ಮೆ ಮತ್ತು ನಂಬಿಕೆ ಇಟ್ಟುಕೊಳ್ಳಿ. ನಿಮ್ಮ ದಾರಿಯಲ್ಲಿ ಒಳ್ಳೆಯ ವಿಷಯಗಳು ಹಾಗೂ ಒಳ್ಳೆಯ ಸಮಯ ಬರುತ್ತದೆ.