ETV Bharat / sports

ವಿರಾಟ್​ ಕೊಹ್ಲಿ ರಶೀದ್​ಗೆ ಎಷ್ಟು ಬಾರಿ ವಿಕೆಟ್​ ಒಪ್ಪಿಸಿದ್ದಾರೆ ಗೊತ್ತಾ..?

ವಿರಾಟ್​ ಕೊಹ್ಲಿ 66 ರನ್ ​ಗಳಿಸಿದಾಗ ರಶೀದ್​ ಬೌಲಿಂಗ್​ನಲ್ಲಿ ಕಟ್ ಶಾಟ್ ಆಡಲು ಪ್ರಯತ್ನಿಸಿ ವಿಕೆಟ್ ಕೀಪರ್ ಜೋಸ್ ಬಟ್ಲರ್‌ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು.

author img

By

Published : Mar 27, 2021, 10:01 AM IST

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಪುಣೆ: ಭಾರತ ಇಂಗ್ಲೆಂಡ್​ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ, ಎರಡು ಪಂದ್ಯಗಳು ಮುಕ್ತಾಯವಾಗಿದ್ದು, ಎರಡು ತಂಡಗಳು ತಲಾ ಒಂದು ಪಂದ್ಯ ಗೆದ್ದು ಸರಣಿ ಸಮಬಲ ಸಾಧಿಸಿವೆ. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತೊಮ್ಮೆ ಆದಿಲ್​ ರಶೀದ್​​ಗೆ ವಿಕೆಟ್​ ಒಪ್ಪಿಸುವ ಮೂಲಕ ಶತಕ ವಂಚಿತರಾದರು.

ವಿರಾಟ್​ ಕೊಹ್ಲಿ 66 ರನ್ ​ಗಳಿಸಿದಾಗ ರಶೀದ್​ ಬೌಲಿಂಗ್​ನಲ್ಲಿ ಕಟ್ ಶಾಟ್ ಆಡಲು ಪ್ರಯತ್ನಿಸಿ ವಿಕೆಟ್ ಕೀಪರ್ ಜೋಸ್ ಬಟ್ಲರ್‌ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು.

ವಿರಾಟ್​ ಕೊಹ್ಲಿ ಅವರನ್ನು ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 9 ಬಾರಿ ಪೆವಿಲಿಯನ್​ಗೆ ಅಟ್ಟುವ ಮೂಲಕ ರಶೀದ್ ದಾಖಲೆ ಬರೆದಿದ್ದಾರೆ. ಈ ಮುನ್ನ ನ್ಯೂಜಿಲ್ಯಾಂಡ್​​ನ ಟಿಮ್ ಸೌಥಿ 10 ಬಾರಿ ವಿರಾಟ್ ಕೊಹ್ಲಿಯನ್ನ ಪೆವಿಲಿಯನ್​ಗೆ ಅಟ್ಟಿದ್ದಾರೆ. ವಿಶೇಷವೆಂದರೆ, ಟಿ -20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ, ರಶೀದ್, ಸೌಥಿ ಮತ್ತು ಜಂಪಾ ಎರಡು ಬಾರಿ ಕೊಹ್ಲಿಯನ್ನು ಔಟ್​ ಮಾಡಿದ್ದಾರೆ.

ಓದಿ : ಭಾರತ-ಇಂಗ್ಲೆಂಡ್​ ನಡುವಿನ ಒಂದೇ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣ.. ಕಂಪ್ಲೀಟ್ ಸ್ಟೋರಿ

"ವಿರಾಟ್ ತನ್ನ ಇನ್ನಿಂಗ್ಸ್​​ನ ಆರಂಭದಲ್ಲಿ ಲೆಗ್-ಸ್ಪಿನ್ನರ್​ಗಳನ್ನು ಕಠಿಣವಾಗಿ ಕಾಣುತ್ತಾನೆ ಎಂದು ನಾವು ಕಂಡುಕೊಂಡಿದ್ದೇವೆ" ಎಂದು ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಜಂಪಾ 2020 ರ ಜನವರಿಯಲ್ಲಿ ಆಸೀಸ್ ಸೀಮಿತ ಓವರ್‌ಗಳ ಸರಣಿಗಾಗಿ ಭಾರತ ಪ್ರವಾಸ ಕೈಗೊಂಡಿದ್ದಾಗ ಹೇಳಿದ್ದರು. ಮೂರು ಏಕದಿನ ಸರಣಿಯಲ್ಲಿ ಕೊಹ್ಲಿ ಅವರನ್ನ ಜಂಪಾ ಎರಡು ಬಾರಿ ಔಟ್​ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.