ETV Bharat / sports

ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಭ್​​ ಪಂತ್​ ರಕ್ಷಿಸಿದ ಚಾಲಕ ಸುಶೀಲ್​: ಆಪತ್ಬಾಂಧವ ಹೇಳಿದ ಕರಾಳಕಥೆ

author img

By

Published : Dec 31, 2022, 10:04 AM IST

ಕ್ರಿಕೆಟಿಗ ರಿಷಭ್​​ ಪಂತ್​ ಕಾರು ಅಪಘಾತ - ಗಾಯಗೊಂಡಿದ್ದ ಪಂತ್​ ಅವರನ್ನು ರಕ್ಷಿಸಿದ ಬಸ್​ ಚಾಲಕ - ಈಟಿವಿ ಭಾರತ್​ ಜೊತೆ ಘಟನೆ ಹಂಚಿಕೊಂಡ ಚಾಲಕ ಸುಶೀಲ್​

driver sushil who rescued Rishabh Pant exclusive-interview
ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಬ್​ ಪಂತ್​ ರಕ್ಷಿಸಿದ ಚಾಲಕ ಸುಶೀಲ್

ಪಾಣಿಪತ್: ಕಾರು ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಭಾರತದ ಕ್ರಿಕೆಟಿಗ ರಿಷಬ್ ಪಂತ್​ ಅವರನ್ನು ಅದೇ ಮಾರ್ಗವಾಗಿ ಹೋಗುತ್ತಿದ್ದ ಬಸ್​ ಚಾಲಕ ರಕ್ಷಿಸಿ, ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಪತ್ಬಾಂಧವನಂತೆ ಬಂದು ಕಾಪಾಡಿದ ಬಸ್​ ಚಾಲಕ ಮತ್ತು ನಿರ್ವಾಹಕನನ್ನು ಸಾರಿಗೆ ಇಲಾಖೆ ಪ್ರಮಾಣಪತ್ರ ನೀಡಿ ಪ್ರಶಂಸಿಸಿದೆ.

ಸುಶೀಲ್​, ಕ್ರಿಕೆಟಿಗನನ್ನು ಅಪಾಯದಿಂದ ಪಾರು ಮಾಡಿ ಜೀವ ಉಳಿಸಿದ ಬಸ್​ ಚಾಲಕ. ಹರಿಯಾಣದ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅವರು, ಪಾಣಿಪತ್​ ವಿಭಾಗಕ್ಕೆ ಸೇರಿದ್ದಾರೆ. ಆಪತ್ಬಾಂಧವ ಸುಶೀಲ್​ ಕರ್ನಾಲ್​ನ ಬಲ್ಲಾ ಗ್ರಾಮದ ನಿವಾಸಿಯಾಗಿದ್ದಾರೆ. ಒಂದು ತಿಂಗಳಿನಿಂದ ಪಾಣಿಪತ್‌ ಹರಿದ್ವಾರ ಮಾರ್ಗದ ಬಸ್​ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

ತಮ್ಮ ಮನೆಗೆ ಹೊರಟಿದ್ದ ಕ್ರಿಕೆಟಿಗ ರಿಷಬ್​ ಪಂತ್​ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾಗ, ಅವರ ರಕ್ಷಣೆಗೆ ಬಂದು ಆಂಬ್ಯುಲೆನ್ಸ್​ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ ಮತ್ತು ಘಟನೆಯ ಭೀಕರತೆಯನ್ನು ಚಾಲಕ ಸುಶೀಲ್​ ಅವರು ಈಟಿವಿ ಭಾರತ್​ ಜೊತೆ ಮಾತನಾಡಿ ಹಂಚಿಕೊಂಡಿದ್ದಾರೆ.

ಸುಶೀಲ್​ ಮಾತಲ್ಲಿ ಘಟನೆ ಹೀಗಿತ್ತು: 5.20 ರ ಸುಮಾರಿನಲ್ಲಿ ಹರಿದ್ವಾರದಿಂದ ಪಾಣಿಪತ್​ಗೆ ಹೊರಟಿದ್ದೆವು. ಗುರುಕುಲ ಪ್ರದೇಶದಲ್ಲಿ ಕಾರು ರಭಸವಾಗಿ ಬಂದು ಡಿವೈಡರ್​ಗೆ ಗುದ್ದಿ ಬೆಂಕಿ ಹೊತ್ತಿಕೊಂಡಿತು. ಕಾರು ಬಸ್ಸಿನ ಸ್ವಲ್ಪ ದೂರದಲ್ಲೇ ಬಿದ್ದಿತು. ಅದೃಷ್ಟವಶಾತ್​ ಡಿಕ್ಕಿಯಾಗಲಿಲ್ಲ. ಅಪಘಾತದ ಬಳಿಕ ಕಾರಿನಿಂದ ಒಬ್ಬರು ಹೊರಗೆ ಹಾರಿದರು. ಇದನ್ನು ಕಂಡ ತಕ್ಷಣ ಬಸ್​ ನಿಲ್ಲಿಸಿ, ಕಾರಿನ ಬಳಿಗೆ ತೆರಳಿದೆವು. ಇದ್ದಕ್ಕಿದ್ದಂತೆ ಕಾರಿನ ಹಿಂಭಾಗ ಬೆಂಕಿ ಆವರಿಸಿಕೊಂಡಿತು.

ರಸ್ತೆ ಪಕ್ಕ ಬಿದ್ದಿದ್ದ ವ್ಯಕ್ತಿಯನ್ನು ಕೂಗಿದಾಗ ಆತ ಮಾತನಾಡಲಿಲ್ಲ. ಬಳಿಕ ಸಾವರಿಸಿಕೊಂಡು, ನಾನು ಭಾರತೀಯ ಕ್ರಿಕೆಟಿಗ ರಿಷಭ್​​ ಪಂತ್​ ಎಂದು ಪರಿಚಯಿಸಿಕೊಂಡ. ಕಾರಲ್ಲಿ ಯಾರಾದರೂ ಇದ್ದಾರೆಯೇ ಎಂದು ಕೇಳಿದೆವು. ಇಲ್ಲ, ನಾನೊಬ್ಬನೇ ಇದ್ದೇನೆ ಎಂದು ಪಂತ್​ ಹೇಳಿದರು. ಗಾಯಗೊಂಡ ಪಂತ್​ರನ್ನು ರಸ್ತೆ ಪಕ್ಕಕ್ಕೆ ಕರೆದೊಯ್ದು ಕುಳ್ಳಿರಿಸಿ, ಬಸ್ಸಲ್ಲಿದ್ದ ಹೊದಿಕೆಯನ್ನು ತಂದು ಆತನಿಗೆ ನೀಡಿದೆವು.

ತಕ್ಷಣವೇ ನಮ್ಮ ಕಂಡಕ್ಟರ್​ ಆಂಬ್ಯುಲೆನ್ಸ್​ ಕರೆ ಮಾಡಿ ಮಾಹಿತಿ ನೀಡಿದರು. ಬಳಿಕ ಡಿಪೋಗೆ ಮಾಹಿತಿ ನೀಡಿದೆವು. ಈ ವೇಳೆ ಪಂತ್​ ಅವರು, ತಮ್ಮ ಮನೆಗೆ ಕರೆ ಮಾಡಲು ಕೋರಿದರು. ಆದರೆ, ಅವರ ತಾಯಿಯ ಸಂಪರ್ಕ ಸಾಧ್ಯವಾಗಲಿಲ್ಲ. ಇದಾದ ಬಳಿಕ ನೀರು ಕುಡಿಸಿದೆವು. 15 ನಿಮಿಷದ ಬಳಿಕ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪಿತು. ರಿಷಬ್ ಪಂತ್​ರನ್ನು ಅದರಲ್ಲಿ ಸಾಗಿಸಿ, ಈತ ನಮ್ಮ ದೇಶದ ಕ್ರಿಕೆಟಿಗ ರಿಷಭ್​ ಪಂತ್​, ಕಾರು ಅಪಘಾತವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಉತ್ತಮ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್​ ಚಾಲಕನಿಗೆ ತಿಳಿಸಿದೆವು.

ಬಳಿಕ ವಾಹನ ತೆರಳಿದ ಮೇಲೆ ನಾವು ಅಲ್ಲಿಂದ ಬಸ್​ ಹತ್ತಿ ಹೊರಟೆವು. ಬಸ್​​ನಲ್ಲಿದ್ದ ಪ್ರಯಾಣಿಕರು ಕೂಡ ಇದೇ ವೇಳೆ ನೆರವಿಗೆ ಬಂದರು. ಅಪಘಾತದಿಂದ ಚೆಲ್ಲಾಪಿಲ್ಲಿಯಾಗಿದ್ದ ಬಿದ್ದಿದ್ದ ಪಂತ್​ರ ವಸ್ತು, ಹಣವನ್ನು ಶೇಖರಿಸಿ ಕೊಟ್ಟರು ಎಂದು ಆಪತ್ಬಾಂಧವ ಸುಶೀಲ್​ ತಿಳಿಸಿದರು.

ಸಾರಿಗೆ ಇಲಾಖೆಯಿಂದ ಪ್ರಶಂಸೆ: ಭಾರತೀಯ ಯುವ ಕ್ರಿಕೆಟಿಗನ ರಕ್ಷಣೆಗೆ ಧಾವಿಸಿದ ಚಾಲಕ ಮತ್ತು ನಿರ್ವಾಹಕರನ್ನು ಸಾರಿಗೆ ಇಲಾಖೆಯ ಪಾಣಿಪತ್​ ವಿಭಾಗದಿಂದ ಪ್ರಶಂಸಿಸಲಾಗಿದೆ. ಸಮಯಪ್ರಜ್ಞೆ ಮೆರೆದ ಸಿಬ್ಬಂದಿಯನ್ನು ಅಲ್ಲಿನ ಅಧಿಕಾರಿಗಳು ಹೊಗಳಿದಿದ್ದಾರೆ. ಅವರಿಗೆ ರಾಜ್ಯಮಟ್ಟದ ಗೌರವ ಸಲ್ಲಬೇಕು ಎಂದು ಪ್ರಶಂಸಾ ಪತ್ರ ನೀಡಿದ್ದಾರೆ.

ಓದಿ: ಕ್ರಿಕೆಟಿಗ ರಿಷಭ್​​​ ಪಂತ್​ ಕಾರು ಅಪಘಾತ : ವಾಹನ ಸಂಪೂರ್ಣ ಭಸ್ಮ.. ಡೆಹ್ರಾಡೂನ್​ ಆಸ್ಪತ್ರೆಗೆ ಶಿಫ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.