ETV Bharat / sports

ನವೋಮಿಯಂತಾಗಲೂ ಸಾಧ್ಯವಿಲ್ಲ, ನಮಗೆ ಮಾಧ್ಯಮದ ಬೆಂಬಲ ಬೇಕೇ ಬೇಕು: ಮಿಥಾಲಿ

ಇಂಗ್ಲೆಂಡ್ ಪ್ರವಾಸಕ್ಕೂ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ಮಾಧ್ಯವನ್ನು ತಿರಸ್ಕಾರ ಮನೋಭಾವನೆಯಿಂದ ನೋಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ಮಿಥಾಲಿ ರಾಜ್
ಮಿಥಾಲಿ ರಾಜ್
author img

By

Published : Jun 2, 2021, 5:57 AM IST

ಮುಂಬೈ: ಫ್ರೆಂಚ್ ಓಪನ್ ವೇಳೆ ಮಾನಸಿಕ ಆರೋಗ್ಯದ ಹಿತ ದೃಷ್ಟಿಯಿಂದ ಮಾಧ್ಯಮ ಗೋಷ್ಠಿ ಭಹಿಸ್ಕರಿಸಿ ದಂಡ ಕಟ್ಟಿದ್ದ ನವೋಮಿ ಒಸಾಕ, ತಮ್ಮ ನಿರ್ಧಾರಕ್ಕೆ ಬದ್ಧವಾಗಿ ಟೂರ್ನಿಯಿಂದಲೇ ಹೊರ ಬಂದಿದ್ದಾರೆ. ಆದರೆ ಇದಕ್ಕೆ ಸಹಾನುಭೂತಿ ತೋರಿರುವ ಭಾರತ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಕ್ರಿಕೆಟಿಗರು ನವೋಮಿಯಂತಾಗಲೂ ಸಾಧ್ಯವಿಲ್ಲ, ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಮಾಧ್ಯಮದ ಅಗತ್ಯವಿದೆ ಎಂದಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೂ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ಮಾಧ್ಯವನ್ನು ತಿರಸ್ಕಾರ ಮನೋಭಾವನೆಯಿಂದ ನೋಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ಕ್ವಾರಂಟೈನ್​ನಲ್ಲಿರುವುದು ಪ್ರಸ್ತುತ ಎಂತಹವರಿಗೂ ಕಠಿಣ. ಆದರೆ ನಾವು ಟೂರ್ನಮೆಂಟ್​ ಆಡುವುದಕ್ಕೆ ಅವಕಾಶ ಪಡೆದಿದ್ದೇವೆಂದರೆ ಆ ರೀತಿ ಯೋಚನೆ ಮಾಡಲು ನಾನು ಬಯಸುವುದಿಲ್ಲ ಎಂದು ಇಂಗ್ಲೆಂಡ್ ವಿಮಾನವೇರುವ 2 ಗಂಟೆ ಮುನ್ನ ನಡೆದ ಗೋಷ್ಠಿಯಲ್ಲಿ ಮಿಥಾಲಿ ತಿಳಿಸಿದ್ದಾರೆ.

ವೈಯಕ್ತಿಕವಾಗಿ, ನಾನು ಪತ್ರಿಕಾ ಗೋಷ್ಠಿಯನ್ನು ತ್ಯಜಿಸಬೇಕೆಂದು ಎಂದಿಗೂ ಭಾವಿಸುವುದಿಲ್ಲ, ಏಕೆಂದರೆ ಮಹಿಳಾ ಕ್ರಿಕೆಟ್ ಈಗ ಇರುವುದಕ್ಕೆ, ಮುಂದೆ​ ಬೆಳೆಯಲು ಮತ್ತು ಎಲ್ಲಾ ಆಟಗಾರರಿಗೂ ಮಾಧ್ಯಮದ ಬೆಂಬಲ ಅಗತ್ಯವಾಗಿ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.

23 ವರ್ಷದ ನವೋಮಿ ಒಸಾಕ ಫ್ರೆಂಚ್​ ಓಪನ್ ಮೊದಲ ಸುತ್ತಿನ ಪಂದ್ಯ ಗೆದ್ದ ನಂತರ ಆಯೋಜಕರು ಏರ್ಪಡಿಸಿದ್ದ ಪ್ರತಿಕಾ ಗೋಷ್ಠಿಗೆ ಹಾಜರಾಗಿರಲಿಲ್ಲ. ಹಾಗಾಗಿ ನವೋಮಿಗೆ 15,000 ಡಾಲರ್​ ದಂಡ ವಿಧಿಸಿ, ಇನ್ನುಮುಂದೆ ಈ ರೀತಿ ತಪ್ಪಾಗದಂತೆ ನಡೆದುಕೊಳ್ಳಲು ಎಚ್ಚರಿಕೆ ನೀಡಲಾಗಿತ್ತು. ಆದರೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಅವರು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಟೂರ್ನಿಯಿಂದ ಹಿಂದೆ ಸರಿದಿದ್ದರು.

ಇದನ್ನು ಓದಿ:10 ಲಕ್ಷರೂ ದಂಡ ಕಟ್ಟಿ ಫ್ರೆಂಚ್ ಓಪನ್​ನಿಂದ ಹಿಂದೆ ಸರಿದ ಒಸಾಕ!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.