ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದ ಕೊನೆಯ ಪಂದ್ಯವಾಡುತ್ತಿರುವ ಪಾಕ್ ಮತ್ತು ಬಾಂಗ್ಲಾದೇಶ ರಿಚರ್ಡ್ ಕೆಟೆಲ್ಬರೊ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ.
ಈಗಾಗಲೆ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿರುವ ಬಾಂಗ್ಲಾ ತಂಡಕ್ಕೆ ಇದು ಅನೌಪಚಾರಿಕ ಪಂದ್ಯವಾದ್ರೆ, ಇಂದಿನ ಪಂದ್ಯದಲ್ಲಿ ಜಾದು ನಡೆಸಿ ಸೆಮಿಫೈನಲ್ ತಲುಪೋದು ಪಾಕಿಸ್ತಾನದ ಕನಸಾಗಿದೆ.
ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ. ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡವನ್ನ ಹಿಂದಿಕ್ಕಿ ಪಾಕ್ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಬೇಕು ಅಂದ್ರೆ ಬಾಂಗ್ಲಾ ತಂಡವನ್ನ ಕನಿಷ್ಠ 316 ರನ್ಗಳಿಂದ ಸೋಲಿಸಬೇಕು.
ಒಂದು ವೇಳೆ ಬಾಂಗ್ಲಾ ಏನಾದ್ರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡರೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಮಿಷನ್ ಇಂಪಾಸಿಬಲ್ ಆಗಲಿದೆ. ಬಲಿಷ್ಟ ತಂಡಗಳ ವಿರುದ್ಧ ಉತ್ತಮ ಪ್ರದರ್ಶನ ತೋರಿರುವ ಬಾಂಗ್ಲಾ ಹುಡುಗರನ್ನ ಸೋಲಿಸೋದು ಸುಲಭದ ಮಾತಲ್ಲ.
1999ರ ವಿಶ್ವಕಪ್ನ ಟೂರ್ನಿಯಲ್ಲಿ ಪಾಕ್ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಿದ್ದು, ಬಾಂಗ್ಲಾ ತಂಡ ಪಾಕಿಸ್ತಾನದ ವಿರುದ್ಧ 62 ರನ್ಗಳಿಂದ ಜಯ ಸಾಧಿಸಿದೆ. ಅಲ್ಲದೆ 2015ರಿಂದ ಇಲ್ಲಿಯವರೆಗೆ ಪಾಕ್ ಮತ್ತು ಬಂಗ್ಲಾ ಏಕದಿನ ಪಂದ್ಯದಲ್ಲಿ 4 ಬಾರಿ ಎದುರಾಗಿದ್ದು, ನಾಲ್ಕರಲ್ಲೂ ಬಾಂಗ್ಲಾದೇಶ ಜಯಗಳಿಸಿದೆ.