ETV Bharat / sports

ಪಂದ್ಯ ಸೋತ್ರೂ, ಕ್ರೀಡಾ ಸ್ಪೂರ್ತಿ ಮೆರೆದ ಮಲಿಂಗಾ, ಸ್ಟೋಯ್ನಿಸ್‌ಗೆ ಸ್ಲೋಬಾಲ್‌ ಟಿಪ್ಸ್‌!

author img

By

Published : May 29, 2019, 9:37 AM IST

ಶ್ರೀಲಂಕಾ ಕ್ರಿಕೆಟ್​ ತಂಡದ ವೇಗದ ಬೌಲರ್​ ಲಸಿತ್​ ಮಲಿಂಗಾ ಆಸ್ಟ್ರೇಲಿಯಾ ತಂಡದ ಆಲ್‌ರೌಂಡ್​ ಆಟಗಾರ ಮಾರ್ಕಸ್​​ ಸ್ಟೋಯ್ನಿಸ್​ಗೆ ಸ್ಲೋಬಾಲ್​ ಎಸೆತದ ಬಗ್ಗೆ ಟಿಪ್ಸ್​​ ನೀಡಿದ್ದಾರೆ.

ಸ್ಟೋಯ್ನಿಸ್​ಗೆ ಸ್ಲೋ ಬಾಲ್​ ಟಿಪ್ಸ್​ ಹೇಳಿಕೊಟ್ಟ ಮಲಿಂಗಾ

ಇಂಗ್ಲೆಂಡ್​: ಆಸ್ಟ್ರೇಲಿಯಾ ಮತ್ತು ಮತ್ತು ಶ್ರೀಲಂಕಾ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ಲಂಕಾ ತಂಡ ಸೋಲು ಅನುಭವಿಸಿದೆ. ಪಂದ್ಯದ ನಂತರ ಆಸೀಸ್​ ತಂಡದ ಆಲ್​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ಗೆ ಯಾರ್ಕರ್​​ ಸ್ಪೆಷಲಿಸ್ಟ್​ ಮಲಿಂಗಾ ಸ್ಲೋ ಬಾಲ್ ಎಸೆಯುವ ಬಗ್ಗೆ​​ ಟಿಪ್ಸ್​ ಹೇಳಿಕೊಟ್ಟು ಗಮನ ಸೆಳೆದರು.

ತನ್ನ ಯಾರ್ಕರ್​​ ಮತ್ತು ಸ್ಲೋ ಬಾಲ್​ಗಳಿಂದಲೇ ಘಟಾನುಘಟಿ ಬ್ಯಾಟ್ಸ್​​ಮನ್​ಗಳನ್ನ ಕಾಡುವ ಶ್ರೀಲಂಕಾ ತಂಡದ ವೇಗಿ ಲಸಿತ್​ ಮಲಿಂಗಾ ವಿಶ್ವ ಕ್ರಿಕೆಟ್​ನ ಬೆಸ್ಟ್​​ ಬೌಲರ್​ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 2019ರ ಐಪಿಎಲ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಸ್ಲೋ ಬಾಲ್​ನಿಂದಲೇ ಅಂತಿಮ ಎಸೆತದಲ್ಲಿ ವಿಕೆಟ್​ ಪಡದುಕೊಂಡು ಮುಂಬೈ ತಂಡವನ್ನ ಚಾಂಪಿಯನ್​ ಪಟ್ಟಕ್ಕೇರಿಸಿದ್ರು.

ವಿಶ್ವಕಪ್​ ಟೂರ್ನಮೆಂಟ್​ಗಾಗಿ ಇಂಗ್ಲೆಂಡ್​ನಲ್ಲಿ ನಡೆದ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯ ಮುಗಿದ ನಂತರ ಲಸಿತ್​ ಮಲಿಂಗಾ, ಸ್ಟೋಯ್ನಿಸ್​ಗೆ ಸ್ಲೋ ಬಾಲ್​ ಎಸೆಯುವ ಸೀಕ್ರೇಟ್​ ಹೇಳಿ ಕೊಟ್ಟಿದ್ದಾರೆ. ಕ್ರಿಕೆಟ್​ ವರ್ಲ್ಡ್‌ಕಪ್​ ಟ್ವಿಟ್ಟರ್​ನಲ್ಲಿ ಈ ವಿಡಿಯೋವನ್ನ ಪೋಸ್ಟ್​ ಮಾಡಲಾಗಿದ್ದು, ಕ್ರೀಡಾ ಸ್ಪೂರ್ತಿ ಮೆರೆದ ಮಲಿಂಗಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.