ETV Bharat / sports

ಆಡಿದ್ದು 3 ಪಂದ್ಯ, ಪಡೆದಿದ್ದು 13 ವಿಕೆಟ್ಸ್​... ವಿಶ್ವಕಪ್​ನಲ್ಲಿ ಮೊಹಮದ್​ ಶಮಿ ದಾಖಲೆ

ಇಂಗ್ಲೆಂಡ್​ ವಿರುದ್ಧ ಬರ್ಮಿಂಗ್ಯಾಮ್​ನಲ್ಲಿ 69 ರನ್​ಗೆ 5 ವಿಕೆಟ್​ ಕಬಳಿಸಿದ ಟೀಂ ಇಂಡಿಯಾ ವೇಗಿ ಮೊಹಮದ್​ ಶಮಿ ಎರಡು ದಾಖಲೆಗಳನ್ನು ಸರಿಗಟ್ಟಿದ್ದಾರೆ.

author img

By

Published : Jun 30, 2019, 9:49 PM IST

ಮೊಹಮದ್

ಬರ್ಮಿಂಗ್ಯಾಮ್​: ಇಂಗ್ಲೆಂಡ್​ ವಿರುದ್ಧ ಉತ್ತಮ ಬೌಲಿಂಗ್​ ಮಾಡಿದ ಟೀಂ ಇಂಡಿಯಾ ವೇಗಿ ಮೊಹಮದ್​ ಶಮಿ ವಿಶ್ವಕಪ್​ ಟೂರ್ನಿಯಲ್ಲಿ ದಾಖಲೆಗಳನ್ನು ಸರಿಗಟ್ಟಿದ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಆಂಗ್ಲರ 337 ರನ್​ಗಳ ಬೃಹತ್​ ಮೊತ್ತದ ನಡುವೆಯೂ ಉತ್ತಮ ಬೌಲಿಂಗ್​ ಪ್ರದರ್ಶಿಸಿದ ಶಮಿ 69 ರನ್​ಗಳಿಗೆ 5 ವಿಕೆಟ್​ ಕಬಳಿಸಿದರು. ಜಾನಿ ಬೇರ್ಸ್ಟೋವ್, ಜೋ ರೂಟ್, ಇಯಾನ್ ಮಾರ್ಗನ್, ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್ ಅವರನ್ನು ಔಟ್​​ ಮಾಡಿದರು. ಈ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ 5 ವಿಕೆಟ್​ ಕಿತ್ತ ಸಾಧನೆಗೆ ಪಾತ್ರರಾದರು.

ಅಲ್ಲದೆ ವಿಶ್ವಕಪ್​ನಲ್ಲಿ 5 ವಿಕೆಟ್​ ಪಡೆದ ಕೆಲ ಭಾರತೀಯ ಸಾಧಕರ ಪಟ್ಟಿಗೆ ಶಮಿ ಸೇರ್ಪಡೆಯಾದರು. ಈ ಹಿಂದೆ 1983ರಲ್ಲಿ ಕಪಿಲ್ ದೇವ್, 1999ರಲ್ಲಿ ರಾಬಿನ್ ಸಿಂಗ್ ಹಾಗೂ ವೆಂಕಟೇಶ್ ಪ್ರಸಾದ್​, 2003ರಲ್ಲಿ ಆಶಿಶ್ ನೆಹ್ರಾ, 2011ರಲ್ಲಿ ಯುವರಾಜ್ ಸಿಂಗ್ ಈ ಸಾಧನೆ ಗೈದಿದ್ದರು. 5 ವಿಕೆಟ್​ ಪಡೆದ 6ನೇ ಬೌಲರ್​ ಎಂಬ ದಾಖಲೆ ಬರೆದರು.

ಹಾಗೆಯೇ ನರೇಂದ್ರ ಹಿರ್ವಾನಿ ಬಳಿಕ ವಿಶ್ವಕಪ್​ನಲ್ಲಿ ಸತತ ಮೂರು ಪಂದ್ಯಗಳಲ್ಲಿ 4 ವಿಕೆಟ್​ ಪಡೆದ ಹೆಗ್ಗಳಿಕೆಯೂ ಶಮಿ ಪಾಲಾಯಿತು. ಅಲ್ಲದೆ ವಿಶ್ವಕಪ್​ನಲ್ಲಿ ಪಾಕ್​ನ ಶಾಹಿದ್​ ಅಫ್ರಿದಿ ಬಳಿಕ ಈ ಸಾಧನೆ ಮಾಡಿದ ಶ್ರೇಯ ಶಮಿಗೆ ಸಂದಿದೆ. ಇನ್ನು ವಿಶ್ವಕಪ್​ನ ಮೂರು ಪಂದ್ಯಗಳಿಂದ ಅವರು 13 ವಿಕೆಟ್​ ಉರುಳಿಸಿದ್ದಾರೆ.

  • Mohammed Shami completes his five-for ✋

    It's his first five-wicket haul in ODIs 👏

    He now has 13 wickets in three games at #CWC19

    What an impact he's having 🔥#ENGvIND pic.twitter.com/m8AGmaNgKB

    — Cricket World Cup (@cricketworldcup) June 30, 2019 " class="align-text-top noRightClick twitterSection" data=" ">

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.