ETV Bharat / state

ಹಿಂದೂ ದೇವಾಲಯಗಳು ಮಾತ್ರ ಸರ್ಕಾರದ ಕಪಿಮುಷ್ಠಿಯಲ್ಲಿವೆ: ಪೇಜಾವರ ಶ್ರೀ - pejavara Sri - PEJAVARA SRI

ಹಿಂದೂಗಳಿಗೆ ಅವರದ್ದೇ ಆದ ನೀತಿ ನಿಯಮಗಳಿವೆ. ಅದನ್ನು ಬಲ್ಲವರ ಮೂಲಕ ಧಾರ್ಮಿಕ ಶ್ರದ್ಧಾಕೇಂದ್ರ ಮುನ್ನಡೆಸಿದರೆ ಅಪಚಾರ ಆಗುವುದಿಲ್ಲ ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಪೇಜಾವರ ಶ್ರೀ
ಪೇಜಾವರ ಶ್ರೀ (ETV Bharat)
author img

By ETV Bharat Karnataka Team

Published : Oct 6, 2024, 5:39 PM IST

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರವನ್ನು ವಿಶ್ವಸ್ಥ ಮಂಡಳಿಯ ಮೂಲಕ ನಿರ್ವಹಿಸಲಾಗುತ್ತಿದೆ. ಅದೇ ರೀತಿ ಹಿಂದೂ ದೇವಾಲಯಗಳನ್ನು ಹಿಂದೂ ಸಮಾಜವೇ ನಡೆಸಲು ಅವಕಾಶ ನೀಡಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತರ ಧರ್ಮಿಯರಲ್ಲಿ ಅವರ ಧಾರ್ಮಿಕ ಸಂಸ್ಥೆಗಳನ್ನು ನಡೆಸುವ ಜವಾಬ್ದಾರಿಯನ್ನು ಅವರ ಸಮುದಾಯಕ್ಕೆ ನೀಡಲಾಗಿದೆ. ನಮ್ಮ ದೇಶದಲ್ಲಿ ಹಿಂದೂ ದೇವಾಲಯಗಳು ಮಾತ್ರ ಸರ್ಕಾರದ ಕಪಿಮುಷ್ಠಿಯಲ್ಲಿವೆ. ಹಿಂದೂಗಳಿಗೆ ಅವರದ್ದೇ ಆದ ನೀತಿ ನಿಯಮಾವಳಿಗಳು ಇವೆ. ಅದನ್ನು ಬಲ್ಲವರ ಮೂಲಕ ಧಾರ್ಮಿಕ ಶ್ರದ್ಧಾಕೇಂದ್ರ ಮುನ್ನಡೆಸಿದರೆ ಅಪಚಾರ ಆಗುವುದಿಲ್ಲ ಎಂದರು.

ಪೇಜಾವರ ಶ್ರೀ (ETV Bharat)

ಹಾಗಾಗಿ ಎಲ್ಲಾ ದೇವಾಲಯಗಳನ್ನು ಹಿಂದೂ ಸಮಾಜಕ್ಕೆ ನೀಡಬೇಕು. ಪ್ರಾಚೀನ ದೇವಾಲಯಗಳನ್ನು ಸರ್ಕಾರ ತನ್ನ ಕೈಯಲ್ಲಿರಿಸಿಕೊಂಡಿದೆ. ವಿಶ್ವಸ್ಥ ಮಂಡಳಿ ಅಡಿಯಲ್ಲಿ ಅಯೋಧ್ಯೆಯ ರಾಮಮಂದಿರ ಕಾರ್ಯನಿರ್ವಹಿಸುತ್ತಿದೆ. ಅದೇ ಮಾದರಿಯನ್ನು ಎಲ್ಲ ದೇವಾಲಯಗಳಲ್ಲಿ ಅನುಸರಿಸಬೇಕು ಎಂದು ಹೇಳಿದರು.

ಅಯೋಧ್ಯೆ ಶ್ರೀರಾಮ ಮಂದಿರದ ಬಾಕಿ ಉಳಿದಿರುವ ಕಾರ್ಯಗಳು ಪ್ರತಿಷ್ಠಾಪನೆ ನಡೆದ ಮರುದಿನದಿಂದಲೇ ಪ್ರಾರಂಭವಾಗಿದೆ. ಪೌಳಿಯ ಮತ್ತು ಗರ್ಭ ಗೃಹದ ಮೇಲಿನ ಕಾರ್ಯಗಳು ಅವತ್ತೇ ಪ್ರಾರಂಭವಾಗಿವೆ. ಪರಿಪೂರ್ಣ ಆಗದೆ, ಮೇಲಿನ ಕೆಲಸ ಪರಿಪೂರ್ಣವಾಗದೆ ಮಳೆ ಬಂದಾಗ ಸಹಜವಾಗಿಯೇ ಸೋರಿಕೆ ಕಂಡು ಬಂದಿದೆ. ಇದೀಗ ಸರಿಪಡಿಸಲಾಗಿದೆ ಎಂದು ತಿಳಿಸಿದರು.

ತಿರುಪತಿ ಲಡ್ಡು ವಿವಾದ ಕುರಿತು ಪ್ರತಿಕ್ರಿಯಿಸಿ, ಚಂದ್ರಬಾಬು ನಾಯ್ಡು ಅವರು ಹೇಳಿದ್ದನ್ನು ದೊಡ್ಡದಾಗಿ ತೋರಿಸಿದ್ದರಿಂದ ನಮಗೆ ಈ ವಿಚಾರ ಗೊತ್ತಾಯಿತು ಎಂದರು.

ಇದನ್ನೂ ಓದಿ: ಅಂದು ಬಿಜೆಪಿ ಬೈಯ್ದಿದ್ದ ಛಲವಾದಿ ನಾರಾಯಣಸ್ವಾಮಿ ಇಂದು ಗರ್ಭಗುಡಿಯಲ್ಲಿದ್ದಾರೆ, ಅವರು ಇನ್ನಷ್ಟು ಬೆಳೆಯಲಿ: ಬಿ.ಎಲ್ ಸಂತೋಷ್ - BL Santosh

ETV Bharat Logo

Copyright © 2024 Ushodaya Enterprises Pvt. Ltd., All Rights Reserved.