ETV Bharat / sports

ಕ್ರಿಕೆಟ್​ನಲ್ಲಿ ಬಳಸಲಾಗುವ ಎಲ್​ಇಡಿ ಸ್ಟಂಪ್ಸ್ ಬೆಲೆ ಎಷ್ಟು ಗೊತ್ತಾ: ತಿಳಿದ್ರೆ ನಿಜಕ್ಕೂ ಶಾಕ್​ ಆಗ್ತೀರ! - Cost of LED stumps used in cricket

ಕ್ರಿಕೆಟ್​ನಲ್ಲಿ ಬಳಸಲಾಗುವ ಸ್ಟಂಪ್ಸ್​ಗಳು ಯಾವ ಕಂಪನಿಯದ್ದು ಮತ್ತು ಅವಗಳ ಬೆಲೆ ಎಷ್ಟು ಎಂದು ಈ ಸುದ್ಧಿಯಲ್ಲಿ ತಿಳಿಯಿರಿ.

author img

By ETV Bharat Sports Team

Published : 2 hours ago

ಕ್ರಿಕೆಟ್​ ಸ್ಟಂಪ್ಸ್ ಬೆಲೆ​
ಕ್ರಿಕೆಟ್​ ಸ್ಟಂಪ್ಸ್ ಬೆಲೆ​ (AFP)

ಹೈದರಾಬಾದ್​: ವಿಶ್ವದ ಶ್ರೀಮಂತ ಕ್ರೀಡೆಗಳಲ್ಲಿ ಒಂದು ಎನಿಸಿಕೊಂಡಿರುವ ಕ್ರಿಕೆಟ್​ನಲ್ಲಿ ಆಟಗಾರರು ಬಳಸುವ ಬ್ಯಾಟ್​ನಿಂದ ಹಿಡಿದು ಇದರಲ್ಲಿ ಬಳಕೆಯಾಗುವ ಪ್ರತಿಯೊಂದು ವಸ್ತುಗಳು ಬಲು ದುಬಾರಿ ಬೆಲೆಯದ್ದಾಗಿವೆ. ಅದರಲ್ಲೂ ಅಂಪೈರ್​ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡವ ಮತ್ತು ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಎಲ್​ಇಡಿ ಸ್ಟಂಪ್ಸ್​ಗಳು ಕೂಡ ಹೆಚ್ಚಿನ ಬೆಲೆಯದ್ದಾಗಿವೆ. ಹಾಗಾದ್ರೆ ಕ್ರಿಕೆಟ್​ನಲ್ಲಿ ಬಳಕೆಯಾಗುವ ಸ್ಟಂಪ್ಸ್​ ಬೆಲೆ ಎಷ್ಟು ಎಂಬುದರ ಮಾಹಿತಿಯನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.

ವಿಕೆಟ್​ ಬಳಕೆ: ಆರಂಭದಲ್ಲಿ ಕ್ರಿಕೆಟ್​ನಲ್ಲಿ ಕೇವಲ ಎರಡು ವಿಕೆಟ್​ಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ ಎರಡು ವಿಕೆಟ್​ಗಳ ಮಧ್ಯ ಹೆಚ್ಚಿನ ಸ್ಥಳವಿರುವುದರಿಂದ ಬೌಲ್​ ವಿಕೆಟ್​ಗೆ ತಾಗದೇ ಹಿಂದೆ ಹೋಗುತ್ತಿತ್ತು. ಇದು ಬ್ಯಾಟರ್​ಗಳಿಗೆ ಹೆಚ್ಚಿನ ಅನುಕೂಲಕರವಾಗಿತ್ತು. ಆದ್ರೆ 1775 ರಲ್ಲಿ, ಲಂಪಿ ಸ್ಟೀವನ್ಸನ್ ಎಂಬ ವ್ಯಕ್ತಿ ಮೊದಲ ಬಾರಿಗೆ ಕ್ರಿಕೆಟ್‌ಗೆ 3 ಸ್ಟಂಪ್‌ಗಳನ್ನು ಪರಿಚಯಿಸಿದರು. ನಂತರ ಆ ನಿಯಮವು ಆಟದಲ್ಲಿ ಮುಂದುವರೆಸಲಾಯಿತು ಎಂದು ಹೇಳಲಾಗುತ್ತದೆ. ಮೊದಲಿಗೆ ಕ್ರಿಕೆಟ್​ನಲ್ಲಿ ಮರದ ಕಟ್ಟಿಗೆಯಿಂದ ಮಾಡಲಾದ ಸ್ಟಂಪ್ಸ್​ಗಳನ್ನು ಬಳಕೆ ಮಾಡಲಾಗುತ್ತಿತ್ತು.

ಕ್ರಿಕೆಟ್​ ಸ್ಟಂಪ್ಸ್
ಕ್ರಿಕೆಟ್​ ಸ್ಟಂಪ್ಸ್ (IANS)

ಆದರೇ ಕೆಲವೊಮ್ಮೆ ಚೆಂಡು ಬ್ಯಾಟ್​ಗೆ ತಾಗಿ ವಿಕೆಟ್​ ಕೀಪರ್​ ಕೈ ಸೇರಿದರೇ ಸರಿಯಾದ ನಿರ್ಧಾರ ಘೋಷಿಸಲು ಅಂಪೈರ್​ಗೆ ಕಷ್ಟವಾಗುತ್ತಿತ್ತು. ನಂತರ ಆಟ ಹೆಚ್ಚು ಪ್ರಸಿದ್ಧಿ ಪಡೆಯುತ್ತ ಹೋದಂತೆ ಹಲವಾರು ಬದಲಾವಣೆಗಳು ಆದವು. ನಂತರ 2008ರಲ್ಲಿ ಆಸ್ಟ್ರೇಲಿಯಾದ BBG ಕಂಪನಿ ಕ್ಯಾಮೆರಾಗಳನ್ನು ಹೊಂದಿದ ಸ್ಟಂಪ್​ಗಳನ್ನು ಪರಿಚಯಿಸಿತು. ಬಳಿಕ ಸ್ಟಂಪ್ಸ್​ ಕಾಮಿ ಲಿಮಿಟೆಡ್​ ಇದನ್ನು ಖರೀದಿ ಮಾಡಿತು. ಅದೇ ವರ್ಷ ಮಾರ್ಚ್​ ತಿಂಗಳಲ್ಲಿ ನಡೆದ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಮೊದಲ ಬಾರಿಗೆ ಇವುಗಳನ್ನು ಬಳಕೆ ಮಾಡಲಾಯಿತು.

ನಂತರ ಬ್ರಾಂಟೆ ಎಕೆರ್ಮನ್ ಎಂಬ ಮಾಜಿ ಆಸ್ಟ್ರೇಲಿಯನ್ ಗ್ರೇಡ್ ಕ್ರಿಕೆಟಿಗ ಮತ್ತು ಇಂಜಿನಿಯರ್ 2012ರಲ್ಲಿ ಎಲ್​ಇಡಿ ಸ್ಟಂಪ್​ಗಳಲ್ಲಿ ಮೈಕ್ರೊಪ್ರೊಸೆಸರ್​ ಮೈಕ್​ಗಳನ್ನು ಹೊಂದಿರುವ ಸ್ಟಂಪ್​ ಸಿದ್ಧಪಡಿಸಿದರು. ಇದರಿಂದ ಬೌಲ್​ ಟ್ರ್ಯಾಕಿಂಗ್​ ತುಂಬಾ ಸುಲಭವಾಯಿತು. ನಂತರ ಜಿಂಗ್ ಕಂಪನಿ ಈ ವಿಕೆಟ್​ಗಳನ್ನು ತಯಾರಿಸಲು ಪ್ರಾರಂಭಿಸಿತು.

2012ರಲ್ಲಿ ನಡೆದ ಬಿಗ್​ಬ್ಯಾಷ್​ ಲೀಗ್​ನಲ್ಲಿ ಮೊದಲ ಬಾರಿಗೆ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿರುವ ಎಲ್​ಇಡಿ ಸ್ಟಂಪ್ಸ್​ಅನ್ನು ಬಳಸಲಾಯಿತು. ಬಳಿಕ 2014ರಲ್ಲಿ ಮೊದಲ ಬಾರಿಗೆ ಐಸಿಸಿ ಆಯೋಜಿತ ಅಂಡರ್​-19 ವಿಶ್ವಕಪ್​ ಕ್ರಿಕೆಟ್​ನಲ್ಲೂ ಇವುಗಳ ಬಳಕೆ ಮಾಡಲಾಯಿತು. 2016ರ ಐಪಿಎಲ್​ನಿಂದಲೂ ಇವುಗಳನ್ನು ಬಳಕೆ ಮಾಡಲಾಗುತ್ತಿದೆ. ಸದ್ಯ ಐಸಿಸಿ ಆಯೋಜಿತ ಪ್ರತಿ ಪಂದ್ಯಗಳಲ್ಲಿ ಈ ಸ್ಟಂಪ್ಸ್​ಅನ್ನು ಬಳಕೆ ಮಾಡಲಾಗುತ್ತಿದೆ.

ಕ್ರಿಕೆಟ್​ ಸ್ಟಂಪ್ಸ್ ​
ಕ್ರಿಕೆಟ್​ ಸ್ಟಂಪ್ಸ್ (IANS)

ಸ್ಟಂಪ್ಸ್​ ಬೆಲೆ ಎಷ್ಟು: ಜಿಂಗ್ ಇಂಟರ್‌ನ್ಯಾಷನಲ್‌ನಿಂದ ತಯಾರಿಸಲ್ಪಟ್ಟ ಬೈಲ್‌ಗಳನ್ನು ಒಳಗೊಂಡಿರುವ ಎಲ್‌ಇಡಿ ಸ್ಟಂಪ್‌ಗಳ ಬೆಲೆ ಸುಮಾರು 40,000 ಡಾಲರ್​ ಆಗಿದೆ. ಭಾರತೀಯ ರೂಪಾಯಿಯಲ್ಲಿ ₹30 ಲಕ್ಷದಿಂದ ₹35 ಲಕ್ಷ ಆಗಿದೆ.

ಇದನ್ನೂ ಓದಿ: ಇಂದು ಭಾರತ-ಬಾಂಗ್ಲಾ ಮೊದಲ ಟಿ20 ಕದನ: ಈ ಪಂದ್ಯ ಮೊಬೈಲ್​, ಟಿವಿಯಲ್ಲಿ ಉಚಿತವಾಗಿ ಹೇಗೆ ವೀಕ್ಷಿಸುವುದು? - India vs Banglades T20 Series

ETV Bharat Logo

Copyright © 2024 Ushodaya Enterprises Pvt. Ltd., All Rights Reserved.