ದಸರಾ ಅಂಬಾರಿ ಆನೆಯ ಬೆನ್ನಿನ ಮೇಲೆ ಹಾಕುವ ನಮ್ದಾ ಹೇಗೆ ಸಿದ್ಧವಾಗುತ್ತೆ; ಇಲ್ಲಿದೆ ಪ್ರತ್ಯಕ್ಷ ವರದಿ - Namda Preparation
🎬 Watch Now: Feature Video
Published : Oct 6, 2024, 5:59 PM IST
ಮೈಸೂರು : ಜಂಬೂಸವಾರಿಯ ದಿನ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಯ ಬೆನ್ನಿನ ಮೇಲೆ ನಮ್ದಾ ಹಾಕಲಾಗುತ್ತದೆ. ಹಾಗಾದರೆ ಈ ನಮ್ದಾ ಹೇಗೆ ತಯಾರಾಗುತ್ತದೆ ಎಂಬ ಕುರಿತ ಪ್ರತ್ಯಕ್ಷ ವಾಕ್ ಥ್ರೂ ಸ್ಟೋರಿ ಇಲ್ಲಿದೆ.
ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಜಂಬೂಸವಾರಿ ಮೆರವಣಿಗೆಗೆ ಗಜಪಡೆಯನ್ನು ಈಗಾಗಲೇ ವಿವಿಧ ತಾಲೀಮುಗಳಿಂದ ಸಿದ್ಧ ಮಾಡಲಾಗುತ್ತಿದೆ.
ಈ ಮಧ್ಯ ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಬೀಡು ಬಿಟ್ಟಿರುವ ಅಭಿಮನ್ಯು ಹಾಗೂ ಇತರ ಗಜಪಡೆ ಜಂಬೂಸವಾರಿ ಮೆರವಣಿಗೆಗೆ ಸಿದ್ಧಗೊಳ್ಳುತ್ತಿವೆ.
ಮತ್ತೊಂದು ಕಡೆ ಜಂಬೂಸವಾರಿಯ ದಿನ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಯ ಬೆನ್ನಿನ ಮೇಲೆ ಹಾಕುವ 'ನಮ್ದಾ'ವನ್ನ ತೆಂಗಿನ ನಾರಿನಿಂದ ವಿಶೇಷವಾಗಿ ತಯಾರಿಸಲಾಗುತ್ತಿದೆ.
ಜಂಬೂಸವಾರಿಯ ದಿನ ಅಭಿಮನ್ಯು ಆನೆಯ ಮೇಲೆ ನಮ್ದಾ ನಂತರ ಗಧಿ, ಚಾಪೆ, ಜೂಲ, ಹಾಕಿ ನಂತರ 750 ಕೆ. ಜಿ ಚಿನ್ನದ ಅಂಬಾರಿ ಕಟ್ಟುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿ ಅಕ್ರಮ್ ಖಾನ್ ಅವರು ಕಳೆದ 26 ವರ್ಷಗಳಿಂದ ಅಂಬಾರಿ ಕಟ್ಟುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇಂದು ನಮ್ದಾ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ : ಮೈಸೂರು ದಸರಾ -2023.. ಅಂಬಾರಿ ಹೊರುವ ಆನೆಗೆ ಸಿದ್ಧವಾಗುತ್ತಿದೆ ನಮ್ದಾ