ETV Bharat / sports

ಕೋವಿಡ್​-19 ವಿರುದ್ಧ ಅಫ್ರಿದಿ ಹೋರಾಟ... ಪಾಕ್​ ಮಾಜಿ ಕ್ರಿಕೆಟರ್​ ಕಾರ್ಯಕ್ಕೆ ಯುವಿ ಫಿದಾ!

author img

By

Published : Mar 31, 2020, 9:45 PM IST

ಕೊರೊನಾ ವೈರಸ್ ವಿರುದ್ಧ ಇಡೀ ವಿಶ್ವವೇ ಹೋರಾಟ ನಡೆಸಿದೆ. ಪಾಕ್​ ಕೂಡ ಮಹಾಮಾರಿ ವಿರುದ್ಧ ತನ್ನ ಹೋರಾಟ ನಡೆಸಿದ್ದು, ಅಲ್ಲಿನ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಮಾಡುತ್ತಿರುವ ಮಾನವೀಯ ಕಾರ್ಯಕ್ಕೆ ಯುವರಾಜ್​ ಸಿಂಗ್​ ಫಿದಾ ಆಗಿದ್ದಾರೆ.

Yuvraj Singh
Yuvraj Singh

ಮುಂಬೈ: ಕೋವಿಡ್​-19 ವಿರುದ್ಧ ವಿಶ್ವವೇ ಹೋರಾಟ ನಡೆಸಿದ್ದು, ಭಾರತ ಕೂಡ ಅದರಿಂದ ಹೊರತಾಗಿಲ್ಲ. ದೇಶದಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದ್ದು, ಸಾವಿನ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

Shahid Afridi
ಶಾಹಿದ್ ಆಫ್ರಿದಿ

ಪಾಕಿಸ್ತಾನದಲ್ಲಿ ಕೂಡ ಕೋವಿಡ್​-19 ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹೇಳಿಕೊಳ್ಳುವಂತಹ ಕ್ರಮಗಳು ಜಾರಿಗೊಂಡಿಲ್ಲ. ಇದರ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಶಾಹಿದ್ ಅಫ್ರಿದಿ ಮಾನವೀಯ ಕೆಲಸ ಮಾಡುತ್ತಿದ್ದು, ಮಾಸ್ಕ್​, ಊಟ ಸೇರಿದಂತೆ ಅಗತ್ಯ ವಸ್ತು ನೀಡುತ್ತಿದ್ದಾರೆ.

ಇವರ ಕೆಲಸಕ್ಕೆ ಫಿದಾ ಆಗಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟರ್​ ಯುವರಾಜ್​ ಸಿಂಗ್​ ಟ್ವೀಟ್​ ಮಾಡಿದ್ದಾರೆ. ಇದು ಪರೀಕ್ಷೆಗೊಳಪಡುವ ಸಮಯ. ನಮ್ಮನ್ನು ನಾವೇ ಮನೆಯಲ್ಲಿ ಇದು ರಕ್ಷಣೆ ಮಾಡಿಕೊಳ್ಳುವಂತಹ ಸಮಯವಾಗಿದೆ. ಇದೇ ವೇಳೆ ಶಾಹಿದ್​ ಅಫ್ರಿದಿ ಅವರ ಕ್ರಮಕ್ಕೆ ಯುವಿ ಫಿದಾ ಆಗಿ ವಿಡಿಯೋ ಹರಿಬಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.